ಬೆಂಗಳೂರಿನಲ್ಲಿ ಮೇ 9ವರೆಗೆ ಮಳೆ ಮುಂದುವರಿಕೆ: ಮುನ್ಸೂಚನೆ
ಬೆಂಗಳೂರು, ಮೇ 6: ರಾಜಧಾನಿ ಬೆಂಗಳೂರಿನಲ್ಲಿ ಮಧ್ಯಮದಿಂದ ಭಾರೀ ಮಳೆಯಾಗಿದ್ದು, ಇಂದಿನಿಂದ ಮೇ 9ರವರೆಗೆ ಸಾಧಾರಣ ತುಂತುರು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಬೆಂಗಳೂರು ಪೂರ್ವ ತಾಲೂಕಿನ ಹಾಲನಾಯಕನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ 70.5 ಮಿ.ಮೀ ಹಾಗೂ ಆನೇಕಲ್ ತಾಲೂಕಿನ ಸಿಂಗಸಂದ್ರದಲ್ಲಿ 68ಮಿ.ಮೀ ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ(ಕೆಎಸ್ಎನ್ ಡಿಎಂಸಿ)ತಿಳಿಸಿದೆ.
ಗೇರ್ ರಸ್ತೆ, ಜಯನಗರದ ಜಯದೇವ ಆಸ್ಪತ್ರೆ ಬಳಿ ಹಾಗೂ ಡಿಫೆನ್ಸ ಕಾಲೋನಿ, ಮಧ್ಯಾಹ್ನ ಸುರಿದ ಭಾರೀ ಮಳೆಯಿಂದ ಜಲಾವೃತ್ತಗೊಂಡಿದ್ದ ಪ್ರದೇಶಗಳಿಗೆ ಪ್ರಯಾಣಕರು ಪರದಾಡಿದರು. ಮೇ 2017 ರಲ್ಲಿ, ನಗರವು 241.9 ಮಿಮೀ ಮಳೆಯನ್ನು ಪಡೆದಿದೆ. ಇದು 1957ರ ನಂತರ ದಾಖಲಾದ ಅತಿ ಹೆಚ್ಚು ಮಳೆಯಾಗಿದ್ದು, ಅದೇ ತಿಂಗಳಲ್ಲಿ ಬೆಂಗಳೂರಿನಲ್ಲಿ 287.1 ಮಿಮೀ ಮಳೆಯಾಗಿದೆ.

ಕರ್ನಾಟಕ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಉತ್ತರ ಒಳನಾಡಿನ ಕೆಲವು ಭಾರೀ ಮಳೆ ದಾಖಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಈ ಜಿಲ್ಲೆಗಳಲ್ಲಿ ಹಲವೆಡೆ ಮಳೆ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬುಧವಾರ ಸುರಿದ ಮಳೆಗೆ ಬನ್ನೇರುಘಟ್ಟ ರಸ್ತೆ ಹಾಗೂ ಹೊಸೂರು ರಸ್ತೆಯ ಹಲವು ಬಡಾವಣೆಗಳು ಜಲಾವೃತಗೊಂಡಿದ್ದವು. ರಭಸದ ಗಾಳಿಯಿಂದ ಮರಗಳು ಧರೆಗುರುಳಿರುವ ಬಗ್ಗೆ ವರದಿಯಾಗಿದೆ.












Click it and Unblock the Notifications