ಬೆಂಗಳೂರು ಸಮಸ್ಯೆಗಳ ಬಗ್ಗೆ ಚರ್ಚಿಸಲು ಫೆ.14ರಂದು ಸಿವಿಕ್ ಫೆಸ್ಟ್
ಬೆಂಗಳೂರು, ಫೆಬ್ರವರಿ 10 : ಬೆಂಗಳೂರು ನಗರದ ನಿವಾಸಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ವೇದಿಕೆಯೊಂದು ಸಿದ್ಧವಾಗಿದೆ. ಫೆ.14ರಂದು ಬೆಂಗಳೂರು ಸಿವಿಕ್ ಫೆಸ್ಟ್ 2019 ನಡೆಯಲಿದೆ.
ಐ ಚೇಂಜ್ ಮೈ ಸಿಟಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಂಟಿಯಾಗಿ Bengaluru Civic Fest 2019 ಆಯೋಜನೆ ಮಾಡಿವೆ. ಫೆ.14ರ ಗುರುವಾರ ನಗರದ ಫ್ರೀಡಂಪಾರ್ಕ್‌ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪ್ರವೇಶ ಉಚಿತ.
ನಗರದ ಜನರು, ವಿವಿಧ ಸಂಘಟನೆಗಳು, ನಾಗರೀಕರ ಗುಂಪುಗಳು ನಗರದ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸಲು ಫೆಸ್ಟ್ ಆಯೋಜನೆ ಮಾಡಲಾಗಿದೆ. ಸರ್ಕಾರದ ವಿವಿಧ ಇಲಾಖೆಗಳು ಜನರ ಸಲಹೆಗಳನ್ನು ಪಡೆದು ನಗರವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಫೆಸ್ಟ್ ಸಹಕಾರಿಯಾಗಿದೆ.

ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ನಾಗರೀಕ ಸಂಘಗಳಗಳ ಸದಸ್ಯರು ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆಯ ತನಕ ನಡೆಯಲಿರುವ ಫೆಸ್ಟ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಸ್ಕಾಂ, ಬಿಎಂಆರ್‌ಸಿಎಲ್, ಜಲಮಂಡಳಿ, ಬಿಬಿಎಂಪಿ, ಬಿಟಿಪಿಯ ಅಧಿಕಾರಿಗಳು ನಗರದ ಅಭಿವೃದ್ಧಿ ಬಗ್ಗೆ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಿದ್ದಾರೆ.
ಫೆಸ್ಟ್‌ನಲ್ಲಿ ಬೀದಿ ನಾಟಕ, ಸಂಗೀತ, ನಾಟಕ ಯಕ್ಷಗಾಗ, ಕಥೆ ಹೇಳುವುದು, ಚಿತ್ರಕಲೆ, ವಿದ್ಯಾರ್ಥಿಗಳು ಮಾಡಿದ ವಿವಿಧ ವಿಜ್ಞಾನ ಮಾದರಿಗಳ ಪ್ರದರ್ಶನ, ಗುಂಪು ಚರ್ಚೆ ಮುಂತಾದವುಗಳಿಗೂ ಅವಕಾಶ ಕಲ್ಪಿಸಲಾಗಿದೆ. ಬನ್ನಿ ಎಲ್ಲರೂ ಪಾಲ್ಗೊಳ್ಳಿ.











Click it and Unblock the Notifications