ಇಲ್ಲಿದ್ದು 'ಕನ್ನಡ ಬರಲ್ಲ' ಅನ್ನೋ ಗೂಬೆಗಳಿಗೆ ಈ ಟಿಬೇಟಿಯನ್ ವ್ಯಕ್ತಿ ಮಾದರಿ: Video Viral
ಬೆಂಗಳೂರು, ಜೂನ್ 19: ವಿಶ್ವದ ಲಿಪಿಗಳ ರಾಣಿ ಎಂದೇ ಕರೆಸಿಕೊಳ್ಳುವ ತಮಿಳು ಹಾಗೂ ಇತರ ಭಾಷೆಗಳಿಗಿಂತಲೂ ಮೊದಲೇ ಸ್ವಂತವಾಗಿ ಹುಟ್ಟಿರುವ ಕನ್ನಡ ಭಾಷೆ ಬಗ್ಗೆ ಅಗೌರವ, ಉದ್ಧಟತನದ ಬೆಳವಣಿಗೆ ನಾವು ನೋಡುತ್ತಲೇ ಇದ್ದೇವೆ. ಕನ್ನಡೇತರರು ರಾಜ್ಯದಲ್ಲಿ ನೆಲೆಸಿದರೂ ಸಹಿತ ಕನ್ನಡ ಮಾತನಾಡದೇ, ಕನ್ನಡಿಗರನ್ನು ಪದೇ ಪದೆ ಕೆಣಕಿದ್ದೇ ಹೆಚ್ಚು. ಹೀಗಿರುವ ಇಲ್ಲೋಬ್ಬ ಸಭ್ಯ ಟಿಬೆಟಿಯನ್ ವ್ಯಕ್ತಿಯು ಅಚ್ಚ ಕನ್ನಡವನ್ನು ಸ್ವಚ್ಚವಾಗಿ ಮಾತನಾಡುವ ಮೂಲಕ ಕನ್ನಡಿಗರು ಮನಸ್ಸು ಗೆದ್ದಿದ್ದಾರೆ. ಅಲ್ಲದೇ ಕನ್ನಡಿಗರು ತೋರು ಪ್ರೀತಿ ಬಗ್ಗೆ ಹೇಳಿರುವ ಅವರು, ಅನ್ಯಭಾಷಿಗರಿಗೆ ಕನ್ನಡ ಕಲಿಕೆಗೆ ಕಿವಿ ಮಾತು ಹೇಳಿದ್ದಾರೆ.
ಟಿಬೆಟಿಯನ್ ವ್ಯಕ್ತಿ ಮೈಕ್ ಮುಂದೆ ಸರಾಗವಾಗಿ ಕನ್ನಡ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕನ್ನಡ ವಿರೋಧಿ ಧೋರಣೆ, ನಿಲುವು, ಹೇಳಿಕೆ ಪ್ರಸಂಗಗಳ ಮಧ್ಯೆ ಇವರು ''ಕನ್ನಡ್ ಗೊತ್ತಿಲ್ಲ'' ಎನ್ನುವವರಿಗೆ ಮಾದರಿಯಾಗಿ ನಿಲ್ಲುತ್ತಾರೆ. ಬೆಂಗಳೂರಿನಲ್ಲಿ ಕನ್ನಡ ಮಾತನಾಡಿದ ಟಿಬೆಟಿಯನ್ ವ್ಯಕ್ತಿಯ ವಿಡಿಯೋ ಸಾಕಷ್ಟು ಮೆಚ್ಚುಗೆಗೆ ಕಾರಣವಾಗಿದೆ.

"ಅನೇಕ ಟಿಬೆಟಿಯನ್ನರು ತಮ್ಮ ಮಾತೃಭಾಷೆಗಿಂತ ಉತ್ತಮವಾಗಿ ಕನ್ನಡ ಮಾತನಾಡುತ್ತಾರೆ. ನಾನು ಕನ್ನಡದಲ್ಲಿ ಮಾತನಾಡುವಾಗಲೆಲ್ಲಾ ಸ್ಥಳೀಯರು (ಕನ್ನಡಿಗರು) ಹೆಚ್ಚು ಪ್ರೀತಿಯಿಂದ ನನ್ನನ್ನು ಸ್ವಾಗತಿಸುತ್ತಾರೆ. ಗೌರವಿಸುತ್ತಾರೆ. ಹೊರಗಿನವರು ಇಲ್ಲಿನ ಭಾಷೆಯನ್ನು ಕಲಿಯುವ ಮಟ್ಟಕ್ಕೆ ಪ್ರೀತಿಸುತ್ತಾರೆ ಎಂದು ಆ ವ್ಯಕ್ತಿ ಹೇಳಿದ್ದಾರೆ.'' ಇವರು ಕನ್ನಡವನ್ನು ಆಳವಾಗಿ ಮೈಗೂಡಿಸಿಕೊಂಡಿದ್ದಾರೆ ಎಂಬುದು ಅವರ ಮಾತುಗಳಿಂದ ಅರ್ಥವಾಗುತ್ತದೆ.
'ನನಗೆ ಕನ್ನಡ ಗೊತ್ತಿಲ್ಲ' ಎಂಬುದೇನಿಲ್ಲ. ಒಂದು ಲೋಟ ಕಾವೇರಿ ನೀರು ಕುಡಿದರೆ ಸಾಕು, ನೀವು ಸರಾಗವಾಗಿ ಕನ್ನಡ ಮಾತನಾಡಬಲ್ಲಿರಿ ಎಂದು ಭಾಷೆ ಮೇಲಿನ ಪ್ರೀತಿ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲೇ ಇದ್ದು ಕೊಂಡು ಉದ್ಯೋಗ, ಜೀವನ ರೂಪಿಸಿಕೊಂಡರೂ ಸ್ಥಳೀಯ ಭಾಷೆ ಮೇಲೆ ಪ್ರಹಾರ ಮಾಡುವವರಿಗೆ ಕಿವಿ ಮಾತು ಹೇಳಿದ್ದಾರೆ.
After drinking Kaveri water you speak Kannada automatically. This statement is not true for our fellow North Indians. #StopHindiImposition. pic.twitter.com/WWTJ8HGgt3
— Dr Prisha Sargam (@PrishaSargam) June 14, 2025
ವಿಡಿಯೋ ನೋಡಿದ ನೆಟ್ಟಿಗರಿಂದ ಪ್ರಶಂಸೆ..
ಸಾಮಾಜಿಕ ಜಾಲತಾಣ ಎಕ್ಸ್ @PrishaSargam ಖಾತೆಯಿಂದ ಹಂಚಿಕೊಳ್ಳಲಾದ ವಿಡಿಯೋಗೆ 11,000ಕ್ಕೂ ಹೆಚ್ಚು ವೀಕ್ಷಣೆಗಳು ಬಂದಿವೆ. ವಿಡಿಯೋ ನೋಡಿದ ನೆಟ್ಟಿಗರು ಫುಲ್ ಖುಷ್ ಆಗಿದ್ದಾರೆ. ಅನೇಕರು ಕಾಮೆಂಟ್ ಮಾಡಿದ್ದಾರೆ. 'ಕಾವೇರಿ ನೀರು ಕುಡಿದ ಮೇಲೆ ಕನ್ನಡ ಬರಲೇಬೇಕು' ಎಂದಿದ್ದಾರೆ. ಇಲ್ಲಿನ ಸಂಸ್ಕೃತಿ, ಭಾಷೆಗೆ ಗೌರವಿಸುವ ಟಿಬೆಟಿಯನ್ ವ್ಯಕ್ತಿಗೆ ಪ್ರಶಂಸೆ ವ್ಯಕ್ತವಾಗಿದೆ....
ನಿಮ್ಮ ಒಂದು ವಾಕ್ಯದಲ್ಲಿ ಕನ್ನಡಿಗರ ಎಂಥವರು ಎಂಬುದು ಗೊತ್ತಾಗುತ್ತದೆ..ವಾವ್ ಎಂದು ಮತ್ತೊಬ್ಬರು ಹೇಳಿದ್ದಾರೆ. ತಮಿಳಿಗನೊಬ್ಬರು ತಾನು ವಾಸಿಸುವ ಅಪಾಟ್ಮೆಂಟ್ ಸಿಬ್ಬಂದಿ ನೇಪಾಳಿ. ಆತ ಸೊಗಸಾಗಿ ಕನ್ನಡ ಮಾತನಾಡುತ್ತಾರೆ. ಅನೇಕ ನೇಪಾಳಿಗಳು ಬೆಂಗಳೂರಿನಲ್ಲಿದ್ದು, ಅವರು ಕನ್ನಡ ಮಾತನಾಡುತ್ತಾರೆ ಎಂದಿದ್ದಾರೆ. ಹೀಗೆ ಅನೇಕ ಕಾಮೆಂಟ್‌ಗಳು ಬಂದಿವೆ.












Click it and Unblock the Notifications