ಭಾರತೀಯ ಸೇನೆ: ಈ ಬಾರಿ ಲಾಲ್‌ ಬಾಗ್ ಫ್ಲವರ್‌ ಶೋ ಥೀಮ್‌

ಬೆಂಗಳೂರು, ಜು.9: ಈ ಬಾರಿ ಲಾಲ್‌ ಬಾಗ್‌ ಫ್ಲವರ್‌ ಶೋ ಇನ್ನುಷ್ಟು ಆಕರ್ಷಕವಾಗಿರಲಿದೆ. ಭಾರತೀಯ ಸೇನೆಯ ಸಾಮರ್ಥ್ಯವನ್ನು ಬಿಂಬಿಸುವ ಪುಷ್ಪ ಪ್ರದರ್ಶನ ಇದಾಗಿರಲಿದೆ.

ಸ್ವಾತಂತ್ರ್ಯ ದಿನಾಚರಣೆ ಅಂಗೌಆಗಿ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನದಲ್ಲಿ ರಕ್ಷಣಾ ಇಲಾಖೆಯ ಮೂರು ವಿಭಾಗಗಳಾದ ವಾಯುಸೇನೆ, ಭೂ ಸೇನೆ ಹಾಗೂ ನೌಕಾಪಡೆಯ ಸಾಧನೆ, ಸಾಮರ್ಥ್ಯ ಹಾಗೂ ನೌಕಾಪಡೆಯ ಶೌರ್ಯ ಅನಾವರಣಗೊಳ್ಳಲಿದೆ.

ಕಾಷ್ಟ್ರಕವಿ ಕುವೆಂಪು ಹಾಗೂ ಬಾಹುಬಲಿಯನ್ನು ನಿರ್ಮಿಸಿ ಜನರ ಗಮನಸೆಳೆದಿದ್ದ ತೋಟಗಾರಿಕೆ ಇಲಾಖೆ ದೇಶದ ರಕ್ಷಣೆಗಾಗಿ ಬಲಿದಾನ ಮಾಡಿದ ಹುತಾತ್ಮರ ಜೀವನದ ಸಂಪೂರ್ಣ ವಿವರಗಳನ್ನು ಗಾಜಿನ ಮನೆಯಲ್ಲಿ ಪ್ರದರ್ಶಿಸಲಿದೆ. ಈ ಕುರಿತು ಮೈಸೂರು ಉದ್ಯಾನ ಕಲಾಸಂಘ ಹಾಗೂ ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

This time, Lalbagh flowers will become weapons!

ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿದ್ದ ಭಾರತದ ಸಂಪೂರ್ಣ ಭದ್ರತೆ ಬ್ರಿಟಿಷರ ಈಸ್ಟ್‌ ಇಂಡಿಯಾ ಕಂಪನಿ ವಶದಲ್ಲಿತ್ತು, 1947ರ ಆಗಸ್ಟ್‌ ತಿಂಗಳಲ್ಲಿ ರಕ್ಷಣಾ ಇಲಾಖೆ ಕ್ಯಾಬಿನೇಟ್‌ ಸಚಿವರ ಅಡಿಯಲ್ಲಿ ಸೇರ್ಪಡೆಗೊಂಡಿತ್ತು. ಸೇನೆಯನ್ನು ನಿರ್ವಹಣೆ ಮಾಡುತ್ತಿದ್ದ ಕಮಾಂಡರ್‌ ಇನ್‌ ಚೀಫ್‌ ಪದವಿ 1955ರಲ್ಲಿ ರದ್ದು ಮಾಡಲಾಯಿತು. ಇನ್ನಿತರೆ ಮಾಹಿತಿಗಳನ್ನು ನೀಡಲಾಗುತ್ತದೆ.

ಹೂವಿನಲ್ಲಿ ನಿರ್ಮಿಸಲಾಗುವ ಬಂಕರ್‌ಗಳು, ಸಬರ್‌ಮರೀನ್‌ನ ಪ್ರತಿಕೃತಿಯನ್ನು ಗಾಜಿನ ಮನೆಯಲ್ಲಿ ನಿರ್ಮಾಣ ಮಾಡಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ. ಇದಲ್ಲದೆ ಸೇನೆ ಬಳಸುವ ಅಸಲಿ ಯಂತ್ರೋಪಕರಣಗಳು, ಶಸ್ತ್ರಾಸ್ತರಗಳು, ಯುದ್ಧೋಪಕರಣಗಳನ್ನು ಸಹ ಪ್ರದರ್ಶಿಸುವ ಆಲೋಚನೆಯನ್ನು ಇಲಾಖೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+