ಕನ್ನಡ ನಾಡಲ್ಲೇ ಇದ್ದು ಕನ್ನಡ ಬೇಡ ಅನ್ನೋಕೆ ಎಷ್ಟು ಧೈರ್ಯ?

ಬೆಂಗಳೂರು, ಜುಲೈ, 20 : ಸಾಮಾಜಿಕ ಜಾಲತಾಣ ಫೇಸ್ ಬುಕ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಅವಹೇಳನಕಾರಿ ಸಂದೇಶಗಳನ್ನು ಹಾಕುತ್ತಿದ್ದ say no to kannada ಎಂಬ ಗ್ರೂಪ್ ಗೆ ಭಾನುವಾರ ಫೇಸ್ ಬುಕ್ ಸೇರಿದಂತೆ ಇತರೆ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.

say no to kannada ಗ್ರೂಪ್‌ನಲ್ಲಿ ಕನ್ನಡ ಭಾಷೆ ಮತ್ತು ಕನ್ನಡಿಗರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಹಾಕಲಾಗುತ್ತಿತ್ತು. 2011ರಲ್ಲಿ ವಿಘ್ನೇಶ್ಶೆರ್ಲೆಕರ್ ಎಂಬಾತ ಸೃಷ್ಟಿಸಿದ್ದ ಈ ಗ್ರೂಪ್‌ಗೆ, 374ಕ್ಕೂ ಹೆಚ್ಚು ಮಂದಿ ಸದಸ್ಯರಾಗಿದ್ದರು.[ಕನ್ನಡ ಸಾಹಿತಿಗಳ ಅಲಿಯಾಸ್ ಹೆಸರು ಕಾವ್ಯನಾಮಗಳ್]

kannada facebook

ಈ ಗ್ರೂಪಿನ ಸ್ಟೇಟಸ್‌ಗಳನ್ನು ಗಮನಿಸಿದ ಕೆಂಗೇರಿಯ ಚೈತ್ರಾ ಗೌಡ ಎಂಬುವವರು ಅದಕ್ಕೆ ವಿರುದ್ದವಾಗಿ ಮಧ್ಯಾಹ್ನ 2.20ರ ಸುಮಾರಿಗೆ this group is against to say no to kannada group ಸೃಷ್ಟಿಸಿದರು. ಇದಾದ ಕೆಲವೇ ಗಂಟೆಗಳಲ್ಲಿ 100ಕ್ಕೂ ಹೆಚ್ಚು ಮಂದಿ ಇದನ್ನು ಹಿಂಬಾಲಿಸಿದ್ದು, ಸಂಜೆವೇಳೆಗೆ ಸುಮಾರು 402 ಮಂದಿಯಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.

ಇದರ ಸ್ಕ್ರೀನ್ ಶಾಟ್ ತೆಗೆದು ಫೇಸ್‌ಬುಕ್ ಮತ್ತು ವಾಟ್ಸಾಪ್ ನಲ್ಲಿ ಹಾಕುವುದರ ಮೂಲಕ ಆಂದೋಲನ ನಡೆಸಲು ತೀರ್ಮಾನ ಕೈಗೊಂಡಿದ್ದರು. ಕನ್ನಡ ಗ್ರೂಪಿನ ವಿರುದ್ದ ದೂರು ದಾಖಲಿಸುವವರೆಗೂ ಕನ್ನಡ ಪರ ಗುಂಪಿನಲ್ಲಿ ಚರ್ಚೆಗಳು ನಡೆದವು. ಇದರಿಂದ ಹೆದರಿದ ಕನ್ನಡ ವಿರೋಧಿ ತಂಡ ತನ್ನ ಗ್ರೂಪ್‌ನ್ನು ನಿಷ್ಕ್ರಿಯಗೊಳಿಸಿತು. ಇದು ಫೇಸ್ ಬುಕ್ ಕನ್ನಡಗರಿಗೆ ಸಂದ ಜಯ ಎನ್ನಬಹುದು ಎಂದು this group is against to say no to kannada groupನ ಅಡ್ಮಿನ್ ಚೈತ್ರಾ ಗೌಡ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+