ಈ ದಿನಗಳಂದು ಬೆಂಗಳೂರಿನಿಂದ ಹೋಗುವ- ಬರುವ ರೈಲುಗಳ ಸೇವೆ ರದ್ದು

ಬೆಂಗಳೂರು, ಅಕ್ಟೋಬರ್ 23: ಬೆಂಗಳೂರು ನಗರದ ನಾಯಂಡಹಳ್ಳಿ ಯಾರ್ಡ್‌ನಲ್ಲಿ ಥಿಕ್ ವೆಬ್ ಸ್ವಿಚ್‌ಗಳ ಕೆಲಸದ ಅಳವಡಿಕೆ ಕಾರ್ಯಕ್ಕಾಗಿ ಲೈನ್ ಬ್ಲಾಕ್ ತೆಗೆದುಕೊಂಡು ಕೆಳಗಿನ ರೈಲುಗಳ ಸೇವೆಯನ್ನು ರದ್ದುಪಡಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ರೈಲುಗಳ ಸೇವೆ ರದ್ದುಗೊಳಿಸುವ ಬಗ್ಗೆ ವಿವರಗಳು ಹೀಗಿವೆ.

1. ರೈಲು ಸಂಖ್ಯೆ 06560 ಮೈಸೂರಿನಿಂದ ಚಲಿಸುವ ಮೈಸೂರು- ಕೆಎಸ್‌ಆರ್ ಬೆಂಗಳೂರು ಮೆಮು ರೈಲು 02.11.2021 ಮತ್ತು 11.11.2021 ರಂದು ರದ್ದುಗೊಳಿಸಲಾಗುತ್ತದೆ.

2. ರೈಲು ಸಂಖ್ಯೆ 06559 ಕೆಎಸ್‌ಆರ್ ಬೆಂಗಳೂರಿನಿಂದ ಚಲಿಸುವ ಕೆಎಸ್‌ಆರ್ ಬೆಂಗಳೂರು- ಮೈಸೂರು ಮೆಮು ರೈಲು 03.11.2021 ಮತ್ತು 12.11.2021 ರಂದು ರದ್ದುಗೊಳಿಸಲಾಗುತ್ತದೆ.

These Days Train Services Will Be Cancelled Due To Operational Reasons From Bengaluru

ರೈಲುಗಳ ಮಾರ್ಗ ಬದಲಾವಣೆ

ಅಕ್ಟೋಬರ್ 23, 2021ರಿಂದ 27.10.2021 ರವರೆಗೆ ದ್ವಿ-ಪಥ ಕಾಮಗಾರಿಯ ಕಾರ್ಯಾರಂಭಕ್ಕೆ ಸಂಬಂಧಪಟ್ಟಂತೆ ಭಟ್ಟನಗರ (ಪೂರ್ವ ರೈಲ್ವೆ) ಮತ್ತು ಬಾಲ್ಟಿಕುರಿ (ಆಗ್ನೇಯ ರೈಲ್ವೆ) ನಿಲ್ದಾಣದಲ್ಲಿ ಪೂರ್ - ಇಂಟರ್‌ಲಾಕಿಂಗ್ ಮತ್ತು ನಾನ್- ಇಂಟರ್‌ಲಾಕಿಂಗ್ ಕೆಲಸದ ನಿಮಿತ್ತವಾಗಿ ಈ ಕೆಳಗಿನ ರೈಲುಗಳ ಮಾರ್ಗವನ್ನು ಹೌರಾ, ಅಂಡುಲ್, ಖರಗ್‌ಪುರದ ಮೂಲಕ ಚಲಿಸುತ್ತದೆ.

1. ಗುವಾಹಟಿದಿಂದ ಹೊರಡುವ ರೈಲು ಸಂಖ್ಯೆ 02510 ಗುವಾಹಟಿ- ಬೆಂಗಳೂರು ಕಂಟೋನ್ಮೆಂಟ್ ಎಕ್ಸ್‌ಪ್ರೆಸ್ ವಿಶೇಷ ರೈಲು 24.10.2021, 25.10.2021 ಮತ್ತು 26.10.2021 ರಂದು ದನಕುಣಿ ನಿಲ್ದಾಣದಲ್ಲಿ ನಿಲುಗಡೆಯೊಂದಿಗೆ ಹೌರಾ, ಅಂಡುಲ್ ಮತ್ತು ಖರಗ್‌ಪುರ ಮಾರ್ಗವಾಗಿ ಚಲಿಸಲಿದೆ.

2. ಮುಜಪ್ಪರಪುರದಿಂದ ಹೊರಡುವ ರೈಲು ಸಂಖ್ಯೆ 05228 ಮುಜಪ್ಪರಪುರ- ಯಶವಂತಪುರ ಎಕ್ಸ್‌ಪ್ರೆಸ್ ವಿಶೇಷ ರೈಲು 25.10.2021 ರಂದು ದನಕುಣಿ ನಿಲ್ದಾಣದಲ್ಲಿ ನಿಲುಗಡೆಯೊಂದಿಗೆ ಹೌರಾ, ಅಂಡುಲ್ ಮತ್ತು ಖರಗ್‌ಪುರ ಮಾರ್ಗವಾಗಿ ಚಲಿಸಲಿದೆ.

These Days Train Services Will Be Cancelled Due To Operational Reasons From Bengaluru

3. ಭಾಗಲಪುರದಿಂದ ಹೊರಡುವ ರೈಲು ಸಂಖ್ಯೆ 02254 ಭಾಗಲಪುರ - ಯಶವಂತಪುರ ಎಕ್ಸ್‌ಪ್ರೆಸ್ ವಿಶೇಷ ರೈಲು 27.10.2021 ರಂದು ದನಕುಣಿ ನಿಲ್ದಾಣದಲ್ಲಿ ನಿಲುಗಡೆಯೊಂದಿಗೆ ಹೌರಾ, ಅಂಡುಲ್ ಮತ್ತು ಖರಗ್‌ಪುರ ಮಾರ್ಗವಾಗಿ ಚಲಿಸಲಿದೆ.

4. ಅಗರ್ತಲಾದಿಂದ ಹೊರಡುವ ರೈಲು ಸಂಖ್ಯೆ 02984 ಅಗರ್ತಲಾ- ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ ರೈಲು 26.10.2021 ರಂದು ದನಕುಣಿ ನಿಲ್ದಾಣದಲ್ಲಿ ನಿಲುಗಡೆಯೊಂದಿಗೆ ಹೌರಾ, ಅಂಡುಲ್ ಮತ್ತು ಖರಗ್‌ಪುರ ಮಾರ್ಗವಾಗಿ ಚಲಿಸಲಿದೆ.

5. ಕೆ.ಎಸ್.ಆರ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 02249 ಕೆ.ಎಸ್.ಆರ್ ಬೆಂಗಳೂರು- ನ್ಯೂ ಟಿನ್ಸುಕಿಯಾ ವಿಶೇಷ ಎಕ್ಸ್‌ಪ್ರೆಸ್ ರೈಲು 26.10.2021 ರಂದು ದನಕುಣಿ ನಿಲ್ದಾಣದಲ್ಲಿ ನಿಲುಗಡೆಯೊಂದಿಗೆ ಖರಗ್‌ಪುರ, ಆಂದುಲ್, ಹೌರಾ ಮಾರ್ಗ ಮೂಲಕ ಚಲಿಸಲಿದೆ.

6. ಬೆಂಗಳೂರು ಕಂಟೋನ್ಮೆಂಟ್‌ನಿಂದ ಹೊರಡುವ ರೈಲು ಸಂಖ್ಯೆ 05487 ಬೆಂಗಳೂರು ಕಂಟೋನ್ಮೆಂಟ್ - ಅಗರ್ತಲಾ ವಿಶೇಷ ಎಕ್ಸ್‌ಪ್ರೆಸ್ ರೈಲು 26.10.2021 ರಂದು ದನಕುಣಿಯಲ್ಲಿ ನಿಲುಗಡೆಯೊಂದಿಗೆ ಖರಗ್‌ಪುರ, ಆಂದುಲ್, ಹೌರಾ ಮಾರ್ಗ ಮೂಲಕ ಚಲಿಸಲಿದೆ.

Recommended Video

      Virat Kohli ಪಾಕಿಸ್ತಾನದ ಪಂದ್ಯ ಮುಗಿದಾದ ನಂತರ Rohit ಬಗ್ಗೆ ಹೇಳಿದ್ದೇನು | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+