Valentine's Day 2024: ಬೆಂಗಳೂರಿನ ಟಾಪ್ 10 ರೋಮ್ಯಾಂಟಿಕ್ ಹೋಟೆಲ್‌ಗಳಿವು
ಪ್ರೇಮಿಗಳ ದಿನ ಇನ್ನೇನು ದೂರವಿಲ್ಲ. ಈಗಾಗಲೇ ಪ್ರೇಮಿಗಳು ಹಾಗೂ ದಂಪತಿಗಳು ಈ ದಿನವನ್ನು ಆಚರಿಸಲು ಪ್ಲ್ಯಾನ್ ಶುರು ಮಾಡಿದ್ದಾರೆ. ತಮ್ಮ ಸಂಗಾತಿಯೊಂದಿಗೆ ಕಾಲ ಕಳೆಯಲು ಒಂದೊಳ್ಳೆ ಸ್ಥಳದ ಹುಡುಕಾಟವನ್ನು ಆರಂಭಿಸಿದ್ದಾರೆ. ನೀವೇನಾದರೂ ಈ ಹುಡುಕಾಟದಲ್ಲಿ ಇದ್ದರೆ ನಿಮಗಾಗಿ ಬೆಂಗಳೂರಿನ ಟಾಪ್ 10 ರೋಮ್ಯಾಂಟಿಕ್ ಹೋಟೆಲ್‌ಗಳು ಇಲ್ಲಿವೆ.

1.ಒಬೆರಾಯ್ ಬೆಂಗಳೂರು (Oberoi Bengaluru)
ಪ್ರತಿಷ್ಠಿತ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ (MG Road) 5-ಸ್ಟಾರ್ ಪ್ರಾಪರ್ಟಿಯಾದ ಒಬೆರಾಯ್ ಬೆಂಗಳೂರಿನಾದ್ಯಂತ ಶತಮಾನಗಳಷ್ಟು ಹಳೆಯದಾದ ರೆಸ್ಟೋರೆಂಟ್ ಆಗಿದೆ. ಇದು ಮಳೆ ತರಿಸುವ ಬೃಹತ್ ಮರಗಳನ್ನು ಹೊಂದಿದ್ದು ಐಷಾರಾಮಿ ರೂಂಗಳು ಇಲ್ಲಿ ಲಭವಿದೆ. ಪ್ರೇಮಿಗಳ ದಿನ ನೀವಿಲ್ಲಿ ನಿಮ್ಮ ಸಂಗಾತಿಯೊಂದಿಗೆ ಕಳೆಯಲು ಒಂದೊಳ್ಳೆ ಸ್ಥಳ ಅಂದರೆ ತಪ್ಪಾಗಲಿಕ್ಕಿಲ್ಲ. ಅಲ್ಲದೆ ಇಲ್ಲಿ ಪ್ಯಾಂಪರಿಂಗ್ ಸ್ಪಾ ಚಿಕಿತ್ಸೆಗಳು ಮತ್ತು ಜಿಮ್ ಲಭ್ಯವಿದೆ. ಕೊಠಡಿ ಸೇವೆ 24 ಗಂಟೆಗಳ ಕಾಲ ಲಭ್ಯವಿರುತ್ತದೆ. ಎಲ್ಲಾ ಕೊಠಡಿಗಳಲ್ಲಿ ಉಚಿತ ವೈಫೈ ವ್ಯವಸ್ಥೆ ಕೂಡ ಮಾಡಲಾಗಿದೆ.
- ಸ್ಥಳ: ಎಂಜಿ ರೋಡ್
- ದರ: 11,000 ಒಂದು ರಾತ್ರಿಗೆ

2.ಶಾಂಗ್ರಿ-ಲಾ ಬೆಂಗಳೂರು (Shangri-La Bengaluru)
ಬೆಂಗಳೂರಿನಲ್ಲಿ ವೈವಿಧ್ಯಮಯ ಊಟದ ಆಯ್ಕೆಗಳನ್ನು ಒಳಗೊಂಡಿರುವ ಅತ್ಯಾಕರ್ಷಕ ಫ್ಯಾಶನ್ ಸಿಗ್ನೇಚರ್ ರೆಸ್ಟೋರೆಂಟ್‌ಗಳಲ್ಲಿ ಶಾಂಗ್ರಿ-ಲಾ ಕೂಡ ಒಂದಾಗಿದೆ. ಶಾಂಗ್ರಿ-ಲಾ ಚೈನೀಸ್ ಪಾಕಪದ್ಧತಿಯನ್ನು ಹೊಂದಿದ ಭಾರತೀಯ ರೆಸ್ಟೋರೆಂಟ್ ಆಗಿದೆ. ಸಂಜೆ ಹೊತ್ತು ಈ ಕಟ್ಟಡದ ಮೇಲೆ ತಿಂಡಿಗಳನ್ನು ಸವಿಯುವುದು ಅದ್ಭುತ ಅನುಭವವನ್ನು ನೀಡುತ್ತದೆ. ನೀವಿಲ್ಲಿ ಪ್ರೇಮಿಗಳ ದಿನ ಆಚರಿಸಲು ಮೊದಲೇ ಬುಕ್ ಮಾಡಬಹುದು.
ಮೇಲ್ಛಾವಣಿಯಲ್ಲಿ ಬಾರ್ ಮತ್ತು ಹೈಪ್ ಕೂಡ ಲಭ್ಯವಿರುತ್ತದೆ. ಇದು ಬಫೆಟ್ ಉಪಹಾರ, ಊಟ ಮತ್ತು ರಾತ್ರಿಯ ಊಟವನ್ನು ಒದಗಿಸುತ್ತದೆ. ಜೊತೆಗೆ ಇಲ್ಲಿ ಚಹಾಗಳು, ಕಾಫಿ, ವೈನ್‌ಗಳು, ಕಾಕ್‌ಟೇಲ್‌ಗಳು ಲಭ್ಯವಿರುತ್ತವೆ. ನಿಮ್ಮ ಆಯ್ಕೆಗೆ ಅನುಸಾರ ನೀವು ಇದನ್ನು ಆಯ್ಕೆ ಮಾಡಿಕೊಳ್ಳಬಹುದು.
- ಸ್ಥಳ: ವಸಂತ್ ನಗರ ಬೆಂಗಳೂರು
- ದರ: 11,050 ಒಂದು ರಾತ್ರಿಗೆ

3.ITC ಹೊಟೇಲ್ನ ವೆಲ್‌ಕಾಮ್‌ಹೋಟೆಲ್ (Welcomhotel by ITC Hotels, Richmond Road, Bengaluru)
ವೆಲ್‌ಕಾಮ್‌ಹೋಟೆಲ್ ಹೊರಾಂಗಣ ಪೂಲ್, ಫಿಟ್‌ನೆಸ್ ಸೆಂಟರ್ ಮತ್ತು ಸ್ಪಾ ಅನ್ನು ಹೊಂದಿದ್ದು ನೋಡಲು ಆಕರ್ಷಕವಾದ ವ್ಯವಸ್ಥೆಯನ್ನು ಹೊಂದಿದೆ. ಬೆಂಗಳೂರಿನ ರಿಚ್‌ಮಂಡ್ ರಸ್ತೆಯಲ್ಲಿರುವ ITC ಹೋಟೆಲ್‌ಗಳ ವೆಲ್‌ಕಾಮ್‌ಹೋಟೆಲ್ ಬೆಂಗಳೂರಿನಲ್ಲಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 37 ಕಿಮೀ ದೂರದಲ್ಲಿ ಇದಿದೆ. ವಿಮಾನ ನಿಲ್ದಾಣಕ್ಕೆ ಹತ್ತಿರವಾಗಿರುವುದರಿಂದ ಇದು ದಿನದ 24-ಗಂಟೆಗಳ ಕಾಲ ಅತಿಥಿಗಳನ್ನು ಸ್ವಾಗತಿಸುತ್ತದೆ. ಇಲ್ಲಿ ಸಂತೋಷದ ಕ್ಷಣಗಳನ್ನು ನೀವು ನಿಮ್ಮ ಸಂಗಾತಿಯೊಂದಿಗೆ ಕಳೆಯಬಹುದು.
- ಸ್ಥಳ: ಬೆಂಗಳೂರಿನ ರಿಚ್ಮಂಡ್ ರಸ್ತೆ
- ದರ: 7,200 ಒಂದು ರಾತ್ರಿಗೆ

4.ಐಟಿಸಿ ವಿಂಡ್ಸರ್, ಐಷಾರಾಮಿ ಕಲೆಕ್ಷನ್ ಹೋಟೆಲ್, ಬೆಂಗಳೂರು (ITC Windsor, a Luxury Collection Hotel, Bengaluru)
ಐಟಿಸಿ ವಿಂಡ್ಸರ್ ಕೇವಲ 3 ಕಿಮೀ ದೂರದಲ್ಲಿದೆ. ಐಟಿಸಿ ವಿಂಡ್ಸರ್ ಐಷಾರಾಮಿ ಕಲೆಕ್ಷನ್ ಹೋಟೆಲ್ 239 ಕೊಠಡಿಗಳು 12 ಸೂಟ್ ರೂಂಗಳನ್ನು ಹೊಂದಿದೆ. ವಿಶಾಲವಾದ ಹೊರಾಂಗಣ ಪೂಲ್, 24-ಗಂಟೆಗಳ ಕೊಠಡಿ ಸೇವೆ, 5 ರೆಸ್ಟೊರೆಂಟ್‌ಗಳು ಮತ್ತು 1 ಬಾರ್ ಅನ್ನು ಒಳಗೊಂಡಿದೆ. ಐಷಾರಾಮಿ ಸುಸಜ್ಜಿತ ಕೊಠಡಿಗಳಲ್ಲಿ ಉಚಿತ ವೈ-ಫೈ ಸೇವೆಯನ್ನು ಒದಗಿಸುತ್ತದೆ.
- ಸ್ಥಳ: ಬೆಂಗಳೂರು
- ದರ: 8,010 ಒಂದು ರಾತ್ರಿಗೆ

5.ಐಟಿಸಿ ಗಾರ್ಡೇನಿಯಾ, ಐಷಾರಾಮಿ ಕಲೆಕ್ಷನ್ ಹೋಟೆಲ್, ಬೆಂಗಳೂರು (ITC Gardenia, a Luxury Collection Hotel, Bengaluru)
ಐಟಿಸಿ ಗಾರ್ಡೇನಿಯಾ ಹೆಲಿಪ್ಯಾಡ್ ಮತ್ತು ವಿಶಾಲವಾದ ಹೊರಾಂಗಣ ಈಜುಕೊಳ ಹೊಂದಿದ್ದು, ಐಷಾರಾಮಿ ಕೊಠಡಿಗಳನ್ನು ನೀಡುತ್ತದೆ. ಅತಿಥಿಗಳು ರೆಸ್ಟೋರೆಂಟ್‌ಗಳು ಮತ್ತು ಬಾರ್ ಕೂಡ ಆಯ್ಕೆ ಮಾಡಬಹುದು.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 35 ಕಿ.ಮೀ ದೂರದಲ್ಲಿರುವ ಬೆಂಗಳೂರು ರೈಲು ನಿಲ್ದಾಣದಿಂದ ಕೇವಲ 5.9 ಕಿ.ಮೀ ದೂರದಲ್ಲಿರುವ ಹೋಟೆಲ್ ಐತಿಹಾಸಿಕ ಟಿಪ್ಪು ಸುಲ್ತಾನರ ಬೇಸಿಗೆ ಅರಮನೆಯಿಂದ 3.5 ಕಿ.ಮೀ ದೂರದಲ್ಲಿದೆ. ನೀವು ಈ ರೋಮ್ಯಾಂಟಿಕ್ ಸ್ಥಳದಲ್ಲಿ ಪ್ರೇಮಿಗಳ ದಿನವನ್ನು ಆಚರಿಸಬಹುದು.
- ಸ್ಥಳ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಬೆಂಗಳೂರು
- ದರ: 9,350 ಒಂದು ರಾತ್ರಿಗೆ

6.ಲೀಲಾ ಪ್ಯಾಲೇಸ್ ಬೆಂಗಳೂರು (The Leela Palace Bengaluru)
7 ಎಕರೆಗಳಷ್ಟು ವಿಸ್ತಾರವಾದ ಸೊಂಪಾದ ಉದ್ಯಾನವನಗಳ ಮಧ್ಯೆ ನೆಲೆಸಿರುವ ಲೀಲಾ ಪ್ಯಾಲೇಸ್ ಬೆಂಗಳೂರು ಹಿಂದಿನ ಕಾಲದ ವೈಭವವನ್ನು ಪ್ರತಿಬಿಂಬಿಸುವ ಅಲಂಕಾರವನ್ನು ಹೊಂದಿದೆ. ಹೊರಾಂಗಣ ಈಜುಕೊಳ, ಸ್ಪಾ ಮತ್ತು ವಿಶ್ರಾಂತಿ ಕೇಂದ್ರ, ಯೋಗ ಸ್ಟುಡಿಯೋ ಮತ್ತು ವಿಶೇಷ ಆಹಾರ ಸೌಲಭ್ಯಗಳನ್ನು ಹೊಂದಿದೆ.
- ಸ್ಥಳ: ಕೊಡಿಹಳ್ಳಿ, ಬೆಂಗಳೂರು
- ದರ: 16,000 ಒಂದು ರಾತ್ರಿಗೆ

7.ತಾಜ್ ಯಶವಂತಪುರ ಬೆಂಗಳೂರು (Taj Yeshwantpur Bengaluru)
ತಾಜ್ ಹೋಟೆಲ್ ಐಷಾರಾಮಿ ರೂಮ್‌ನೊಂದಿಗೆ, ಪೂಲ್, ಡೇ ಸ್ಪಾ ಮತ್ತು ಫಿಟ್‌ನೆಸ್ ಸೌಲಭ್ಯಗಳನ್ನು ಹೊಂದಿದೆ. ಆಧುನಿಕ ಕೊಠಡಿ, ಬೃಹತ್ ಕಿಟಕಿಗಳು, ಫ್ಲಾಟ್-ಸ್ಕ್ರೀನ್ ಟಿವಿ ಮತ್ತು ಡಿವಿಡಿ ಪ್ಲೇಯರ್ ಅನ್ನು ರೂಮ್‌ಗಳಲ್ಲಿ ಕಾಣಬಹುದು. ಜಿವಾ ಸ್ಪಾದಲ್ಲಿ ವಿಶ್ರಾಂತಿ ಮಸಾಜ್ ಮತ್ತು ಸ್ಪಾ ಸ್ನಾನವನ್ನು ಆನಂದಿಸಬಹುದು. ಇಲ್ಲಿ ನೀವು ನಿಮ್ಮ ವಿಶೇಷ ದಿನವನ್ನು ಆನಂದಿಸಬಹುದು.
- ಸ್ಥಳ: ಯಶವಂತಪುರ, ಬೆಂಗಳೂರು
- ದರ: 10,500 ಒಂದು ರಾತ್ರಿಗೆ
-
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ









Click it and Unblock the Notifications