ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಮುಖ ಯಾಕೆ?
ಬೆಂಗಳೂರು,
ಮಾ. 14: ಕೊರೋನಾ ವೈರಸ್ ಭಿತಿಯಿಂದ ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಗಣನೀಯ ಇಳಿಕೆ ಯಾಗಿದೆ. ಪೀಕ್ ಅವರ್ಸ್ ನಲ್ಲಿ ಮೆಟ್ರೋ ಹತ್ತುವುದೇ ಕಷ್ಟವಾಗಿತ್ತು, ಇದೀಗ ಮೆಟ್ರೊ ಟ್ರೇನುಗಳು ಖಾಲಿಯಾಗಿ ಸಂಚರಿಸುವುದು ಕಂಡು ಬಂದಿದೆ.Recommended Video
ಹವಾನಿಯಂತ್ರಿತ
ಸ್ಥಳಗಳಲ್ಲಿ ಕೊರೊನಾ ವೈರಸ್ ಹೆಚ್ಚುಕಾಲ ಇರುತ್ತದೆ ಎಂಬ ಕಾರಣವೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಜೊತೆಗೆ ಬೆಂಗಳೂರಿನ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಮತ್ತೊಂದು ಕಾರಣ. id='are-slot-2' class='oiad oi-axt oiadv'>
ಮೆಟ್ರೊ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆ
ಕಳೆದ ಫೆಬ್ರವರಿ ತಿಂಗಳಿಗೆ ಹೋಲಿಕೆ ಮಾಡಿದ್ರೆ ಮೆಟ್ರೊ ಪ್ರಯಾಣಿಕರಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಸುಮಾರು ಶೇಕಡಾ 25 ರಿಂದ 30ರಷ್ಟು ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ. ಆದರೆ ಶೇಕಡಾ 8 ರಷ್ಟು ಪ್ರಯಾಣಿಕರ ಸಂಖ್ಯೆಯಲ್ಲಿ ಕಡಿಮೆ ಯಾಗಿದೆ ಎಂದು ಬಿ ಎಂ ಆರ್ ಸಿಸಿ ಎಲ್ ಸಾರ್ವಜನಿಕ ಸಂಪರ್ಕ ಇಲಾಖೆ ಮಾಹಿತಿ.

ಮತ್ತೆ ಬಿಎಂಟಿಸಿ, ಸ್ವಂತ ವಾಹನಗಳ ಮೊರೆ ಹೋದ ಪ್ರಯಾಣಿಕರು
ಎಸಿ ಪ್ರಯಾಣದಿಂದ ಕೊರೋನಾ ವೈರಸ್ ಹರಡುವ ಶಂಕೆಯಿಂದ ಪ್ರಯಾಣಿಕರು ಸ್ವಂತ ವಾಹನ ಹಾಗೂ ಮತ್ತೆ ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದಾಗಿ ಮೆಟ್ರೊ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.

ಐಟಿ ಕಂಪನಿಗಳು ಮನೆಯಿಂದ ಕೆಲಸ ಮಾಡುವ ಅವಕಾಶ ಕೊಟ್ಟಿರುವುದು
ಕೊರೋನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಐಟಿ ಕಂಪನಿಗಳು ಮನೆಯಿಂದ ಕೆಲಸ ಮಾಡಲು ತಮ್ಮ ಉದ್ಯೋಗಿಗಳಿಗೆ ಸೂಚಿಸಿವೆ. ಮೆಟ್ರೊದಲ್ಲಿ ಐಟಿ ಕಂಪನಿಗಳ ಉದ್ಯೋಗಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಮಾಡುತ್ತಿದ್ದರು. ಐಟಿ ಕಂಪನಿಗಳು ಮನೆಯಿಂದಲೇ ಕೆಲಸ ಮಾಡಲು ಉದ್ಯೋಗಿಗಳಿಗೆ ಸೂಚಿಸಿರುವುದರಿಂದ ಮೆಟ್ರೊ ಪ್ರಯಾಣಿಕರಲ್ಲಿ ಇಳಿಕೆಯಾಗಿದೆ.

ಮೆಜೆಸ್ಟಿಕ್ ಮೆಟ್ರೊ ನಿಲ್ದಾಣ ಕೂಡ ಬಣಬಣ
ಇನ್ನು ಸದಾ ಗಿಜಿಗುಡುತ್ತಿದ್ದ ಮೆಜೆಸ್ಟಿಕ್ ಮೆಟ್ರೊ ನಿಲ್ದಾಣವೀಗ ಬಣಬಣ ಎನ್ನುತ್ತಿದೆ. ಮೆಜೆಸ್ಟಿಕ್ ಮೆಟ್ರೊ ನಿಲ್ದಾಣದಲ್ಲಿಯೂ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಮೆಜೆಸ್ಟಿಕ್ ಮೆಟ್ರೊ ನಿಲ್ದಾಣದಲ್ಲಿ ಹಸಿರು ಮತ್ತು ನೆರಳೆ ಮಾರ್ಗಗಳಿಗೆ ಪ್ರಯಾಣ ಬದಲಿಸಲು ಅವಕಾಶವಿತ್ತು. ಇದೀಗ ಎರಡೂ ಮಾರ್ಗಗಳ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿರುವುದರಿಂದ ಮೆಜೆಸ್ಟಿಕ್ ಮೆಟ್ರೊ ನಿಲ್ದಾಣದಲ್ಲಿ ಕೂಡ ಪ್ರಯಾಣಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.












Click it and Unblock the Notifications