ಬೆಂಗಳೂರು ನಗರದಲ್ಲಿ ಮಳೆ ನಿಂತ ಮೇಲೆ....

ಬೆಂಗಳೂರು, ಏ. 13: 'ಅಯ್ಯೋ, ಇದೇನಪ್ಪಾ ಇದು, ಇವತ್ತು ಮಳೆ ಬಂದು ಬಿಡ್ತಾ, ಬೆಳಗ್ಗೆ ಬರಬೇಕಿದ್ರೇ ಸಾಕಿ ಸಾಕಾಗಿ ಹೋಗಿತ್ತು. ಈಗ ಮತ್ತೆ ಅದ್ವಾನ' ಇದು ಪ್ರತಿಯೊಬ್ಬ ಬೆಂಗಳೂರಿಗರ ಬಾಯಿಂದ ಹೊರ ಬರುತ್ತಿರುವ ಮಾತು.

ಬಿಸಿಲಿನ ಬೇಗೆ ತಣಿಸಿದ್ದ ಮಳೆರಾಯ ಸೋಮವಾರ ಸ್ವಲ್ಪ ಜೋರಾಗಿಯೇ ಆರ್ಭಟಿಸಿದ್ದಾನೆ. ಕಳೆದ ಎರಡು ದಿನಗಳಿಂದ ಪ್ರತಿದಿನ ಸಂಜೆ ಬೀಳುತ್ತಿದ್ದ ಮಳೆ ಸೋಮವಾರ ಮಧ್ಯಾಹ್ನವೇ ತನ್ನ ಆರ್ಭಟ ತೋರಿಸಿದೆ.[ಇದೆಲ್ಲ ಇಲ್ಲದಿದ್ದರೆ ಬೆಂಗಳೂರನ್ನು ಬೆಂಗಳೂರು ಅಂತಾರಾ?]

ಯಶವಂತಪುರದಲ್ಲಿ ಮರ ರಸ್ತೆಗೆ ಉರುಳಿದೆ. ಶಾಂತಿನಗರ ಬಸ್ ನಿಲ್ದಾಣಕ್ಕೆ ನೀರು ನುಗ್ಗಿದೆ. ಶಿವಾಜಿನಗರ, ರೆಸಿಡೆನ್ಸಿ ರಸ್ತೆ, ಕೋರಮಂಗಲ, ಬನಶಂಕರಿ ಸೇರಿದಂತೆ ಎಲ್ಲ ಕಡೆ ಮಳೆಯಾಗಿದೆ. ಸೋಮವಾರ ಬೆಳಗ್ಗೆಯೇ ಅನೇಕ ಕಡೆ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಅಂತೂ ಇಂತೂ ಕಚೇರಿ ತಲುಪಿದ್ದವರೂ ಸೋಮವಾರ ವಾಪಸ್ ಮನೆಗೆ ಹಿಂದಿರುಗುವುದು ಮಧ್ಯರಾತ್ರಿಯೇ. ಸೋಮವಾರ ಮಳೆ ನಿಂತ ಮೇಲಿನ ಕೆಲ ದೃಶ್ಯಗಳನ್ನು ನೋಡಿದರೆ 'ಸ್ವಚ್ಛ ಬೆಂಗಳೂರ' ದರ್ಶನ ವಾಗಿವುದು.

ರೆಸಿಡೆನ್ಸಿ ರಸ್ತೆ ಅವಸ್ಥೆ

ರೆಸಿಡೆನ್ಸಿ ರಸ್ತೆ ಅವಸ್ಥೆ

ನಗರದ ಹೃದಯ ಭಾಗದಲ್ಲಿರುವ ರೆಸಿಡೆನ್ಸಿ ರಸ್ತೆ ಅವಸ್ಥೆಯನ್ನು ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ. ಪ್ರತಿಷ್ಠಿತ ಏರಿತಯಾದಲ್ಲಿ ಮಳೆ ಬಂದರೆ ಕತೆ ಅಷ್ಟೇ. ಚರಂಡಿ ಎಲ್ಲಿದೆ? ಎಂಬುದನ್ನು ಹುಡುಕುತ್ತ ಗಲೀಜು ನೀರು ಸಾಗಿದರೆ ಪಾದಚಾರಿಗಳು ಮನೆ ತಲುಪಲು ಹರಸಾಹಸ ಪಡುತ್ತಿದ್ದರು.

ಪೋಲಿಸಪ್ಪನ ಮಾತು ಕೇಳಿವರು ಯಾರು?

ಪೋಲಿಸಪ್ಪನ ಮಾತು ಕೇಳಿವರು ಯಾರು?

ಮಳೆ ಬಾರದೇ ಎಲ್ಲ ಸರಿಯಾಗಿದ್ದಾಗಲೇ ಸಿಗನಲ್ ಜಂಪ್ ಮಾಡುವ ನಾವು ಮಳೆ ಎಂಬ ನೆವ ಸಿಕ್ಕರೆ ಬಿಡುತ್ತೆವೆಯೇ? ಟ್ರಾಫಿಕ್ ಪೊಲೀಸರ ಮಾತು ಕೇಳಲು ಯಾರಿಗೂ ಪುರುಸೋತ್ತು ಇರಲ್ಲ. ಎಲ್ಲರೂ ಒಮ್ಮೆಲೆ ನುಗ್ಗಿ ಮತ್ತಷ್ಟು ಜಾಮ್ ಆಗಿ ಸಮಯ ವ್ಯರ್ಥ್ಯವಾದಕ್ಕೆ ಪಾಲಿಕೆಯನ್ನು ಬೈಯಲು ಮರೆಯಲ್ಲ.

ಅಪಘಾತ ಸಾಧ್ಯತೆ ಹೆಚ್ಚು

ಅಪಘಾತ ಸಾಧ್ಯತೆ ಹೆಚ್ಚು

ಇಂಥ ಮಳೆ ಬಂದ ಸಂದರ್ಭ ಅಪಘಾತ ಸಾಧ್ಯತೆ ಹೆಚ್ಚಿರುತ್ತದೆ. ಎಷ್ಟು ಎಚ್ಚರದಿಂದಿದ್ದರೂ ಸಾಕಾಗುವುದಿಲ್ಲ. ಮಳೆ ಬಂದಾಗ ಬಸ್ ಸ್ಟಾಪ್, ಅಂಗಡಿ ಮುಂಗಟ್ಟುಗಳ ಎದುರು ರಕ್ಷಣೆ ಪಡೆಯುವ ಜನರು ಒಮ್ಮೆಲೇ ಹೊರಡುವುದು ಟ್ರಾಫಿಕ್ ಸಮಸ್ಯೆಗೆ ಮೂಲ ಕಾರಣವಾಗುತ್ತದೆ.

ಇದೆಲ್ಲಾ ಹೇಳಲೇಬೇಡಿ

ಇದೆಲ್ಲಾ ಹೇಳಲೇಬೇಡಿ

ಬೆಂಗಳೂರಲ್ಲಿ ಪ್ರತಿಬಾರಿ ಮಳೆ ಬಂದಾಗ ಟ್ರಾಫಿಕ್ ಜಾಮ್, ಕರೆಂಟ್ ಖೋತಾ, ಗಾಳಿ ಆಂಜನೇಯ ದೇವಾಲಯಕ್ಕೆ ನೀರು ನುಗ್ಗುವುದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗುವುದು ಸಾಮಾನ್ಯ. ಇದನ್ನು ಹೊಸದಾಗಿ ಹೇಳಿ ಪ್ರಯೋಜನ ಇಲ್ಲ ಬಿಡಿ.

ಸ್ವಲ್ಪ ಮುನ್ನೆಚ್ಚರಿಕೆ ವಹಿಸಿ

ಸ್ವಲ್ಪ ಮುನ್ನೆಚ್ಚರಿಕೆ ವಹಿಸಿ

ಇನ್ನು ಎರಡು ದಿನ ಮಳೆಯಾಗುವ ನೀರಿಕ್ಷೆಯಿದ್ದು ನಾಳೆ ಮನೆಯಿಂದ ಹೊರಡುವಾಗ ಜರ್ಕಿನ್, ಛತ್ರಿ ಮತ್ತಿತರ ರಕ್ಷಣಾ ಸಾಮಗ್ರಿಗಳನ್ನು ಜತೆಗೆ ಕೊಂಡೊಯ್ಯಿರಿ. ಅಲ್ಲದೇ ಮಳೆಯಲ್ಲಿ ಸಿಕ್ಕಿಹಾಕಿಕಂಡಿದ್ದರೆ ಅಥವಾ ಮಳೆ ಬರಿತ್ತಿದ್ದರೆ ಆಗಾಗ ಕುಟುಂಬದವರಿಗೆ ಸಂದೇಶ ತಿಳಿಸುತ್ತಿರುವುದನ್ನು ಮರೆಯಬೇಡಿ. ಸಹಾಯವಾಣಿಗಳ ನಂಬರ್ ಗಳನ್ನು ಮೊಬೈಲ್ ನಲ್ಲಿ ಸೇವ್ ಮಾಡಿ ಇಟ್ಟುಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+