ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಹಿ ಸುದ್ದಿ: ಬೈಯಪ್ಪನಹಳ್ಳಿ-ವೈಟ್‌ಫಿಲ್ಡ್ ಮೆಟ್ರೋ ಮಾರ್ಗದಲ್ಲಿ ಅ.25ರಂದು ಪ್ರಾಯೋಗಿಕ ಸಂಚಾರ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 06: ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಅತೀ ಹೆಚ್ಚು ಸಂಚಾರ ದಟ್ಟಣೆಯ ಮಾರ್ಗವಾದ ಬೈಯ್ಯಪ್ಪನಹಳ್ಳಿ-ವೈಟ್‌ಫೀಲ್ಡ್ ಮೆಟ್ರೋ ರೈಲು ಮಾರ್ಗ ನಿರ್ಮಾಣ ಶೀಘ್ರವೇ ಪೂರ್ಣಗೊಳಿಸುವ ಜತೆಗೆ ಇದೇ ತಿಂಗಳ ಅಕ್ಟೋಬರ್ 25ಕ್ಕೆ ಪ್ರಾಯೋಗಿಕ ಪರೀಕ್ಷೆಯು ನಡೆಸಲಿದೆ.

ಬೆಂಗಳೂರಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಕಿರಿಕಿರಿ ಎಂದರೆ ಇಲ್ಲಿನ ಸಂಚಾರ ದಟ್ಟಣೆ. ಅದರಲ್ಲೂ ವೈಟ್‌ಫಿಲ್ಡ್, ಕೆಆರ್‌ಪುರಂ, ಟಿನ್‌ ಫ್ಯಾಕ್ಟರಿ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಹೆಚ್ಚು. ಅದಕ್ಕಾಗಿಯೇ ನಗರದಲ್ಲಿ ಹಲವು ಹಂತಗಳಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಇರುವ ಹಸಿರು ಮತ್ತು ನೇರಳೆ ಮೆಟ್ರೋ ಮಾರ್ಗದಲ್ಲಿ ಲಕ್ಷಾಂತರ ಜನರು ಸಂಚರಿಸುತ್ತಾರೆ.

The trial run on Baiyappanahalli to Whitefield metro line on 25th

ನಮ್ಮ ಮೆಟ್ರೋ ಬಳಕೆದಾರರ ಏರಿಕೆ: ನಿತ್ಯ 5ಲಕ್ಷ ಜನ ಸಂಚಾರ

ಅದೇ ರೀತಿ ವೈಟ್‌ಫಿಲ್ಡ್- ಬೈಯಪ್ಪನಹಳ್ಳಿ ಮಧ್ಯೆ ಮೆಟ್ರೋ ಕಾಮಗಾರಿ ಇನ್ನೇನು ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ವಿವಿಧ ಕಾರಣಗಳಿಂದ ಕಾಮಗಾರಿ ತುಸು ನಿಧಾನವಾದರೂ ಸದ್ಯ ಪ್ರಾಯೋಗಿಕ ಘಟ್ಟಕ್ಕೆ ಬಂದು ತಲುಪಿದೆ. ಇಲ್ಲಿನ ಮೆಟ್ರೋ ಸಂಚಾರ ಮಾರ್ಗದಿಂದ ವೈಟ್‌ಫಿಲ್ಡ್‌ ಭಾಗಕ್ಕೆ ಸಂಚರಿಸುವ ಸಾರ್ವಜನಿಕರು ಸೇರಿದಂತೆ ಮುಖ್ಯವಾಗಿ ಐಟಿ ಬಿಟಿ ಕಂಪನಿಗಳ ನೌಕರರಿಗೆ ಸಹಾಯವಾಗುತ್ತದೆ. ಇದು ಈ ಭಾಗದಲ್ಲಿನ ಸಂಚಾರ ದಟ್ಟಣೆ ಸಹ ಕಡಿಮೆ ಮಾಡಲಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.

ಹಲವು ವರ್ಷಗಳ ಕನಸು ಇದೇ ತಿಂಗಳು ನನಸಾಗಲು ದಿನಗಣನೆ ಶುರುವಾಗಿದೆ. ಕೆಂಗೇರಿಯಿಂದ ಬೈಯ್ಯಪ್ಪನಹಳ್ಳಿವರೆಗಿನ ನೇರಳೆ ಮಾರ್ಗದಲ್ಲಿ ಲಕ್ಷಾಂತರ ಮಂದಿ ಪ್ರಯಾಣ ಮಾಡುತ್ತಿದ್ದಾರೆ. ಈಗ ವೈಟ್‌ಫಿಲ್ಡ್‌ವರೆಗಿನ ಸಂಚಾರದಿಂದ ಐಟಿಬಿಟಿ ಮಂದಿ ಸೇರಿ ಲಕ್ಷಾಂತರ ಪ್ರಯಾಣಿಕರಿಗೆ ಇನ್ನಷ್ಟು ಸಹಾಯವಾಗಲಿದೆ.

ಬೈಯಪ್ಪನಹಳ್ಳಿ- ವೈಟ್‌ಫೀಲ್ಡ್ ವ್ಯಾಪ್ತಿಗೆ 14 ನಿಲ್ದಾಣ
ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ವರೆಗೆ ನಿರ್ಮಿಸಲಾಗಿರುವ ನೂತನ ಮೆಟ್ರೋ ಮಾರ್ಗದಲ್ಲಿ ಒಟ್ಟು 14 ನಿಲ್ದಾಣಗಳು ಬರುತ್ತವೆ. ವೈಟ್‌ಫಿಲ್ಡ್, ಸಾದರ ಮಂಗಲ, ನಲ್ಲೂರಹಳ್ಳಿ, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಕುಂದಲಹಳ್ಳಿ, ಸೀತಾರಾಮಪಾಳ್ಯ, ಹೂಡಿ ಜಂಕ್ಷನ್, ಗರುಡಾಚಾರ್ ಪಾಳ್ಯ, ಮಹದೇವಪುರ, ಕೆ.ಆರ್.ಪುರ, ಬೆನ್ನಿಗಾನಹಳ್ಳಿ, ಬೈಯಪ್ಪನ ಹಳ್ಳಿಗಳು ಬರುತ್ತವೆ. ಇಷ್ಟು ನಿಲ್ದಾಣ ವ್ಯಾಪ್ತಿಯ ಲಕ್ಷಾಂತರ ಪ್ರಯಾಣಿಕರಿಗೆ ಈ ಮಾರ್ಗದಿಂದ ಪ್ರಯೋಜನವಾಗಲಿದೆ.

The trial run on Baiyappanahalli to Whitefield metro line on 25th

ಅ.25ಕ್ಕೆ 15 ಕಿ.ಮೀ ಪ್ರಾಯೋಗಿಕ ಪರೀಕ್ಷೆ
ಬೈಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ ವರೆಗಿನ ಮೆಟ್ರೋ ಮಾರ್ಗಕ್ಕೆ ಭಾರಿ ಬೇಡಿಕೆ ಇದೆ. ಈ ನೂತನ ಮಾರ್ಗದ ಉದ್ದ ಸುಮಾರು 15ಕಿ.ಮೀ. ಇಷ್ಟು ದೂರದ ಪ್ರಾಯೋಗಿಕ ಪರೀಕ್ಷೆ ಅ.25ರಂದು ನಡೆಯಲಿದೆ. ನಂತರ ಮುಂದಿನ ಒಂದೂವರೆ ತಿಂಗಳಲ್ಲಿ ರೈಲ್ವೆ ಸೇಫ್ಟಿ ಕಮಿಷನರ್ ರಿಂದ ಮಾರ್ಗ ಪರೀಕ್ಷೆಗೆ ಒಳಪಡುತ್ತದೆ. ಗುಣಮಟ್ಟ ಪರೀಕ್ಷೆಯಲ್ಲಿ ಯಶಸ್ವಿಯಾದ ಬಳಿಕ ಈ ಮಾರ್ಗವು ಪ್ರಯಾಣಿಕರಿಗೆ ಮುಕ್ತವಾಗುತ್ತದೆ. ಈ ಮಾರ್ಗ ಲೋಕಾರ್ಪಣೆಯಾದ ಬಳಿಕ ನಿತ್ಯ ಸುಮಾರು 8 ಲಕ್ಷ ಮಂದಿಗೆ ಇದರ ಪ್ರಯೋಜನವಾಗಲಿದೆ ಎಂದು ಬಿಎಂಆರ್‌ಸಿಎಲ್ ವಿಶ್ವಾಸ ಇಟ್ಟುಕೊಂಡಿದೆ.

English summary
The trial run on Baiyappanahalli to Whitefield metro line on 25th, said Bangalore Metro Rail Corporation Limited (BMRCL)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X