ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ಬಳಕೆದಾರರ ಏರಿಕೆ: ನಿತ್ಯ 5ಲಕ್ಷ ಜನ ಸಂಚಾರ

|
Google Oneindia Kannada News

ಬೆಂಗಳೂರು ಸೆಪ್ಟಂಬರ್ 28: ಕೊರೋನಾ ನಂತರ ಹಂತ ಹಂತವಾಗಿ ನಮ್ಮ ಮೆಟ್ರೋದಲ್ಲಿ ಸಂಚರಿಸುವವರ ಸಂಖ್ಯೆ ಏರಿಕೆ ಆಗುತ್ತಿದೆ. ನಿತ್ಯ ಸರಿಸುಮಾರು ಐದು ಲಕ್ಷ ಮಂದಿ ನಮ್ಮ ಮೆಟ್ರೋ ಸಾರಿಗೆ ಬಳಕೆ ಮಾಡುತ್ತಿದ್ದ, ಈ ಪೈಕಿ ಕಳೆದ ಆಗಸ್ಟನಲ್ಲಿ 1.52ಕೋಟಿ ಜನ ಪ್ರಯಾಣಿಸಿದ್ದು, 36.66ಕೋಟಿ ಆದಾಯ ಸಂಗ್ರಹವಾಗಿದೆ.

ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಈ ಕುರಿತು ಮಾಹಿತಿ ನೀಡಿದ್ದು, ಕೋವಿಡ್ ಲಾಕ್ ಡೌನ್‌ ತೆರವಿನ ನಂತರ ಆರಂಭದ 2021ನವೆಂಬರ್ ಸುಮಾರು 80ಲಕ್ಷದಷ್ಟು ಮಂದಿ ಪ್ರಯಾಣಿಸಿದ್ದರು. ಅದರಿಂದ 20ಕೋಟಿಗೂ ಅಧಿಕ ಹಣ ಸಂಗ್ರಹವಾಗಿತ್ತು.

ಬೆಂಗಳೂರು: 16,000 ಕೋಟಿ ವೆಚ್ಚದ 3ನೇ ಹಂತದ ಮೆಟ್ರೋ ಡಿಪಿಆರ್‌ಗೆ ಸರ್ಕಾರ ಒಪ್ಪಿಗೆ ಬೆಂಗಳೂರು: 16,000 ಕೋಟಿ ವೆಚ್ಚದ 3ನೇ ಹಂತದ ಮೆಟ್ರೋ ಡಿಪಿಆರ್‌ಗೆ ಸರ್ಕಾರ ಒಪ್ಪಿಗೆ

ನಮ್ಮ ಮೆಟ್ರೋ ಬಳಸುವವರ ಸಂಖ್ಯೆ ಕ್ರಮೇಣ ಏರಿಕೆ ಆಗಿದ್ದರೂ ಸಹ ಸಾಮಾನ್ಯವಾಗಿ ನಿತ್ಯದ ಓಡಾಟದಲ್ಲಿ ಐದು ಲಕ್ಷ ತಲುಪಿರಲಿಲ್ಲ. ಕೇವಲ ನಾಲ್ಕು ಲಕ್ಷದ ಆಸುಪಾಸಿನಲ್ಲಿತ್ತು. ನಂತರ ಬಿಎಂಆರ್‌ಸಿಎಲ್ ತನ್ನ ಪ್ರಯಾಣಿಕರಿಗೆಂದೇ ಹಲವು ಯೋಜನೆಗಳನ್ನು ಪ್ರಕಟಿಸುತ್ತಲೇ ಬಂದಿದೆ. ಅದರ ಪರಿಣಾಮವೆಂಬಂತೆ ಕಳೆದ ಒಂದು ತಿಂಗಳಿನಿಂದ ಪ್ರತಿನಿತ್ಯ ಸರಿಸುಮಾರು ಐದು ಲಕ್ಷ ಮಂದಿಗೆ ಬಿಎಂಆರ್‌ಸಿಎಲ್ ಸೇವೆ ನೀಡುತ್ತಿದೆ.

Increased Bengaluru Metro Daily users, 1.52crore commuters travel in metro on August

ಆಗಸ್ಟ್‌ನಲ್ಲಿ 1.52ಕೋಟಿ ಜನ ಪ್ರಯಾಣಿಸಿದ್ದಾರೆ. ಜುಲೈನಲ್ಲಿ 1.45ಕೋಟಿ ಪ್ರಯಾಣಿಕರ ಸಂಚಾರದಿಂದ ಒಟ್ಟು 35.62ಕೋಟಿ ರೂ. ಸಂಗ್ರಹವಾಗಿದೆ. ಜೂನ್‌ನಲ್ಲಿ 1.37ಕೋಟಿ ಜನರು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ್ದು ನಿಗಮಕ್ಕೆ ಆ ತಿಂಗಳು34.01ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಅದರ ಹಿಂದಿನ ಮೇ ತಿಂಗಳಲ್ಲಿ 1.26ಕೋಟಿ ಜನ ಓಡಾಡಿದ್ದರಿಂದ ಒಟ್ಟು 31.45ಕೋಟಿ ರೂ. ಹಣ ಗಳಿಕೆ ಆಗಿದೆ. ಇದರ ಜತೆಗೆ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸಿದ್ದರಿಂದ ಅದರಿಂದ ತಕ್ಕಮಟ್ಟಿನ ಆದಾಯ ಸಂಗ್ರಹವಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಪ್ರಯಾಣಿಕರನ್ನು ಸೆಳೆದ ಬಿಎಂಆರ್‌ಸಿಎಲ್

ನಮ್ಮ ಮೆಟ್ರೋ ಸಾರಿಗೆ ಬಳಕೆ ಕ್ರಮೇಣ ಹೆಚ್ಚಾಗುವಲ್ಲಿ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ ಘೋಷಿಸಿದ ಹಲವು ಯೋಜನೆಗಳು ಕಾರಣ ಎನ್ನಲಾಗಿದೆ. ಪ್ರಯಾಣಿಕರಿಗೆಂದೆ ಒಂದು, ಎರಡು, ಮೂರು, ಐದು ದಿನದ ಪಾಸ್ ವಿತರಣೆಯನ್ನು ಪ್ರಕಟಿಸಿತು. ಟಿಕೆಟ್ ಗಳ ಮೇಲೆ ವಿವಿಧ ರಿಯಾಯಿತಿಯನ್ನು ಸಹ ನೀಡಿತು. ಮುಂದಿನ ಅಕ್ಟೋಬರ್ ನಿಂದ ನಮ್ಮ ಮೆಟ್ರೋ ಅಪ್ಲಿಕೇಷನ್ ನಡಿ ಕ್ಯೂಆರ್‌ ಕೋಡ್‌ ಸ್ಕಾನ್ ಆಧಾರಿತ ಟಿಕೆಟ್ ಅನ್ನು ಸಹ ಪರಿಚಯಿಸಲು ಬಿಎಂಆರ್‌ಸಿಎಲ್ ಸಜ್ಜಾಗಿದೆ. ಮುಂದಿನ ತಿಂಗಳಿನಿಂದ ಟೋಕನ್, ಸ್ಮಾರ್ಟ್‌ಕಾರ್ಡ್ ಇಲ್ಲದೇಯೇ ಸಂಚರಿಸಲು ಅವಕಾಶ ಕಲ್ಪಿಸುತ್ತಿದೆ.

Increased Bengaluru Metro Daily users, 1.52crore commuters travel in metro on August

ಸ್ಮಾರ್ಟ್‌ಕಾರ್ಡ್ ಮಾರಾಟದಲ್ಲೂ ಏರಿಕೆ; ಮುಖ್ಯವಾಗಿ ನಮ್ಮ ಮೆಟ್ರೋದಲ್ಲಿ ಟಿಕೆಟ್ ಟೋಕನ್, ಸ್ಮಾರ್ಟ್‌ಕಾರ್ಡ್ ಬಳಸಿ ಓಡಾಡುವವರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಮೇ ತಿಂಗಳಲ್ಲಿ ಶೇ.59ರಷ್ಟು ಸ್ಮಾರ್ಟ್‌ಕಾರ್ಡ್‌ಗಳು ವಿತರಣೆ ಆಗಿದೆ. ಜೂನ್‌ನಲ್ಲಿ ಶೇ. 61ರಷ್ಟು, ಜುಲೈ ತಿಂಗಳಲ್ಲಿ ಶೇ 62ರಷ್ಟು ಮತ್ತು ಆಗಸ್ಟ್‌ ನಲ್ಲಿ ಶೇ.60ರಷ್ಟು ಸ್ಮಾರ್ಟ್‌ಕಾರ್ಡ್ ಮಾರಾಟವಾಗಿದೆ. ನಿತ್ಯ ಪ್ರಯಾಣಿಕರ ಜತೆ ವಾರದಲ್ಲಿ ಎರಡು ಮೂರು ಬಾರಿ ಸಂಚರಿಸುವವರು ಸ್ಮಾರ್ಟ್ ಬಳಸುತ್ತಿದ್ದಾರೆ.

English summary
Increased Bengaluru Metro Daily users, 1.52crore commuters travel in metro on August, Bangalore Metro Rail Corporation Limited (BMRCL) said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X