ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಜೂನ್ 21ರಿಂದ 'ದ ಸೋಕ್ ಮಾರ್ಕೆಟ್'

ಬೆಂಗಳೂರು ಜೂನ್ 18: ಭಾರತ ದೇಶದ ಮೂಲೆ ಮೂಲೆಗಳಲ್ಲೂ ಅತ್ಯಂತ ಹೆಮ್ಮೆಯ ಕರಕುಶಲ ಕಲಾವಿದರಿದ್ದಾರೆ. ಅವರ ಬಹುತೇಕ ಕಲಾಕೃತಿಗಳು ಹಾಗೂ ಕಲಾಪ್ರಕಾರಗಳು ಮರೆಯಾಗುವ ಆತಂಕವನ್ನು ಎದುರಿಸುತ್ತಿವೆ. ಇಂತಹ ಪ್ರಾಚೀನ ಹಾಗೂ ಭಾರತ ದೇಶದ ಸಾಂಸ್ಕೃತಿಕ ಭವ್ಯತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಜೂನ್ 21 ರಿಂದ ಜೂನ್ 30 ರ ವರೆಗೆ ನಗರದ ಕರ್ನಾಟಕ ಚಿತ್ತಕಲಾ ಪರಿಷತ್ತಿನ ಆವರಣದಲ್ಲಿ ದಿ ಸೋಕ್ ಮಾರ್ಕೆಟ್ ಎನ್ನುವ ವಿಶೇಷ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ.

ಈ ಮಾರಾಟ ಮತ್ತು ಪ್ರದರ್ಶನ ಮೇಳದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗಿನ ಕಲಾವಿದರು ಹಾಗೂ ಕಲಾಪ್ರಕಾರಗಳು ಪಾಲ್ಗೊಳ್ಳಲಿವೆ.

ನೇಕಾರರು ಮತ್ತು ಕುಶಲಕರ್ಮಿಗಳು ಉತ್ಪಾದಿಸುವ ಉತ್ಪನ್ನಗಳಿಗೆ ದೇಶದ ಮುಖ್ಯ ನಗರಗಳಲ್ಲಿ ಮಾರಾಟ ಮೇಳವನ್ನು ಆಯೋಜಿಸುವ ಮೂಲಕ ನೇರವಾಗಿ ಅವರ ಉತ್ಪನ್ನಗಳು ಗ್ರಾಹಕರಿಗೆ ತಲುಪಿಸುವಂತೆ ವ್ಯವಸ್ಥೆ ಮಾಡುವುದು ಮತ್ತು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇಕಾರರೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭವನ್ನು ಹೆಚ್ಚು ಗಳಿಸುವಂತೆ ಮಾಡುವ ಉದ್ದೇಶವನ್ನು ದ ಸೋಕ್ ಮಾರ್ಕೆಟ್ ಪ್ರದರ್ಶನ ಹಾಗೂ ಮಾರಾಟ ಮೇಳ ಹೊಂದಿದೆ.

The Souq Shopping Carnival Karnataka Chitrakala Parishat

ಈ ಮೇಳದಲ್ಲಿ ಹೋಂ ಡೆಕೋರ್‍ಗಳು, ಲ್ಯಾಂಪ್‍ಶೇಡ್‍ಗಳು, ಹ್ಯಾಂಡ್‍ಲೂಮ್ಸ್, ಹ್ಯಾಂಡ್‍ಕ್ರಾಫ್ಟ್‍ಗಳು, ತಂಜಾವೂರ್ ಪೇಂಟಿಂಗ್‍ಗಳು, ಮಧುಬನಿ, ಒರಿಸ್ಸಾ ಪೇಂಟಿಂಗ್‍ಗಳು, ಕೋಲ್ಕತ್ತಾ ಪೇಂಟಿಂಗ್‍ಗಳು, ವಿವಿಧ ಬಗೆಯ ಸೀರೆಗಳು, ರೇಷ್ಮೆ ಸೀರೆಗಳು, ಕಾಶ್ಮೀರಿ ಸೀರೆಗಳು, ಕೋಲ್ಕತ್ತಾ ಸೀರೆಗಳು, ಹುಬ್ಬಳ್ಳಿ ಸೀರೆಗಳು, ಮಣಿಪುರ, ಚಂದೇರಿ ಸೀರೆಗಳು, ಕಾಂತವರ್ಕ್ ಸೀರೆಗಳು, ಕಲಾಮ್ಕರಿ ಸೀರೆಗಳು, ಲೈನೆನ್ ಸಿಲ್ಕ್ ಸೀರೆಗಳು ಮತ್ತು ಬಾಗಲ್ಪುರಿ ಸೀರೆಗಳು ಇರಲಿವೆ.

ಮಹಿಳೆಯರಿಗೆ ಇಷ್ಟವಾಗುವ ಕಾಶ್ಮೀರಿ ಬ್ಯಾಗ್‍ಗಳು, ಕಲಾಮ್ಕರಿ ಬ್ಯಾಗ್‍ಗಳು, ಖಾದಿ ಕುರ್ತಾಗಳು ಇವೆ. ವಿವಿಧ ಬಗೆಯ ವಿನ್ಯಾಸದ ಆಭರಣಗಳು, ಒರಿಸ್ಸಾ ಆಭರಣಗಳು, ರಾಜಸ್ಥಾನಿ ಆಭರಣಗಳು, ಹ್ಯಾಂಡ್‍ಮೇಡ್ ಆಭರಣಗಳು ಹೀಗೆ ನೂರಾರು ಬಗೆಯ ಉತ್ಪನ್ನಗಳು ಗ್ರಾಹಕರನ್ನು ಆಕರ್ಷಿಸಲಿವೆ.

ನಗರದ ಶಿವಾನಂದ ವೃತ್ತದ ಬಳಿ ಇರುವ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ 21/06/2019 ರಿಂದ ಈ ಪ್ರದರ್ಶನ ಮತ್ತು ಮಾರಾಟ ಮೇಳ ಪ್ರಾರಂಭವಾಗಲಿದ್ದು, 30/06/2019 ರ ವರೆಗೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+