ಬೆಂಗ್ಳೂರಿಗೆ ವಿಮಾನದಲ್ಲೇ ಬರ್ತಿದ್ರು, ಆದ್ರೆ ಮಾಡ್ತಿದ್ದ ಕೆಲಸ ಶಾಕಿಂಗ್!

ಬೆಂಗಳೂರು ನೋಡೋಕೆ ಸಾಮಾನ್ಯವಾಗಿ ದೂರದ ಪ್ರದೇಶಗಳಿಂದ ಆರ್ಥಿಕ ಸ್ಥಿತಿವಂತರು ವಿಮಾನದಲ್ಲಿ ಬಂದು ಹೋಗ್ತಾರೆ. ಆದರೆ ಕಳ್ಳತನ ಮಾಡೋಕೂ ಕದೀಮರು ವಿಮಾನದಲ್ಲಿ ಬೆಂಗಳೂರಿಗೆ ಬರುತ್ತಿದ್ದ ಶಾಕಿಂಗ್‌ ವಿಚಾರ ಬೆಳಕಿಗೆ ಬಂದಿದೆ. ಇಂತಹ ಪ್ರೊಫೆಶನಲ್‌ ಕಳ್ಳರ ಗ್ಯಾಂಗ್‌ ಈಗ ಖಾಕಿ ಕೈಗೆ ಲಾಕ್‌ ಆಗಿದೆ.

ಹೌದು ಕಳ್ಳರ ಗ್ಯಾಂಗ್‌ವೊಂದು ದೂರದ ರಾಜಸ್ಥಾನದಿಂದ ವಿಮಾನದಲ್ಲಿ ಬೆಂಗಳೂರಿಗೆ ಬರುತ್ತಿತ್ತು. ಇಲ್ಲಿನ ಕಾರುಗಳನ್ನು ಲಪಟಾಯಿಸುವುದೇ ಅವರು ದೊಡ್ಡ ಪ್ರೊಫೆಶನ್‌ ಮಾಡಿಕೊಂಡಿದ್ರು ಎನ್ನಲಾಗಿದೆ. ಸದ್ಯ ಈ ವಿಐಪಿ ಕಳ್ಳರ ಪೈಕಿ ಒಬ್ಬನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಈ ಗ್ಯಾಂಗ್‌ನಲ್ಲಿ ಇನ್ನೂ ನಾಲ್ಕು ಮಂದಿ ಇದ್ದು ಹುಡುಕಾಟ ನಡೆಸುತ್ತಿದ್ದಾರೆ.

The Police Have Arrested The Thieves Who Came To Bengaluru By Plane For Stole The Cars

ಈ ಗ್ಯಾಂಗ್‌ನಲ್ಲಿದ್ದ ಮುಕೇಶ್‌ ಕುಮಾರ್‌ ಸದ್ಯ ಪೊಲೀಸರ ಆತಿಥ್ಯದಲ್ಲಿದ್ದಾನೆ. ಸದ್ಯ ಈ ವಿಐಪಿ ಕಳ್ಳನನ್ನು ರಾಜಸ್ಥಾನದಲ್ಲಿ ಅರೆಸ್ಟ್‌ ಮಾಡಲಾಗಿದ್ದು, ಮೂರು ಕಾರುಗಳನ್ನು ಸೀಜ್‌ ಮಾಡಿದ್ದಾರೆ. ಬೆಂಗಳೂರಿಗೆ ಗ್ಯಾಂಗ್‌ ಕಟ್ಟಿಕೊಂಡು ಬರುತ್ತಿದ್ದ ಇವರು, ಜಾಲಿಯಾಗಿ ಇಲ್ಲೇ ಐದಾರು ದಿನ ಉಳಿದುಕೊಳ್ಳುತ್ತಿದ್ದರು ಎನ್ನಲಾಗಿದೆ.

ಇನ್ನು ಇವರು ಸಣ್ಣ ಪುಟ್ಟ ರೇಂಜಿನ ಕಾರುಗಳನ್ನು ಟಚ್‌ ಕೂಡ ಮಾಡುತ್ತಿರಲಿಲ್ಲವಂತೆ. ಎಲ್ಲವನ್ನೂ ದೊಡ್ಡದಾಗಿ ಯೋಚಿಸ್ತಿದ್ದ ಇವರು ಐಷಾರಾಮಿ ಕಾರುಗಳನ್ನೇ ಕದಿಯುತ್ತಿದ್ದದ್ದು ಸ್ಪೆಷಲ್.‌ ಮೊದಲಿಗೆ ಯಾವ ಏರಿಯಾದಲ್ಲಿ ಕಾಸ್ಟ್ಲಿ ಕಾರುಗಳಿವೆ ಎಂದು ಪತ್ತೆ ಹಚ್ಚುತ್ತಿದ್ದರು. ಬಳಿಕ ಸ್ಕೆಚ್‌ ಹಾಕಿ ಕಾರುಗಳನ್ನು ಎಗರಿಸುತ್ತಿದ್ದರು. ಸಿಸಿಟಿವಿ ಕ್ಯಾಮೆರಾಗಳಿಗೂ ಕಣ್ತಪ್ಪಿಸಿ, ಕಾರುಗಳನ್ನ ಕದ್ದೊಯ್ಯುತ್ತಿದ್ದರು ಎಂದು ತಿಳಿದುಬಂದಿದೆ.

ಕಳ್ಳತನಕ್ಕೆ ಲೋಕಲ್‌ನಲ್ಲೆ ಕೆಲವರ ಹೆಲ್ಪ್‌ ಪಡೆದು, ಪೊಲೀಸರಿಗೆ ಅನುಮಾನ ಬರದಂತೆ ನೋಡಿಕೊಳ್ಳುತ್ತಿದ್ದರು. ಕ್ಯಾಮೆರಾಗಳಿಲ್ಲದ ರಸ್ತೆಗಳಲ್ಲೇ ಕದ್ದ ಕಾರುಗಳನ್ನು ಎತ್ತಾಕೊಂಡು ಹೋಗ್ತಿದ್ರು. ಇದೇ ರೀತಿ ಈ ಗ್ಯಾಂಗ್ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿದ್ದ ಐಷಾರಾಮಿ ಕಾರುಗಳನ್ನು ಕಳ್ಳತನ ಮಾಡಿತ್ತು. ಬ್ಯಾಡರಹಳ್ಳಿ, ಅನ್ನಪೂರ್ಣೇಶ್ವರಿನಗರ ವ್ಯಾಪ್ತಿಯಲ್ಲಿ ಸುಮಾರು ಐದು ಕಾರುಗಳನ್ನು ಕದ್ದಿದ್ದರು.

The Police Have Arrested The Thieves Who Came To Bengaluru By Plane For Stole The Cars

ಈ ಸಂಬಂಧ ಕಾರಿನ ಮಾಲೀಕರು ಪೊಲೀಸರು ದೂರು ಕೊಟ್ಟಿದ್ದರು. ಇದನ್ನು ಆಧರಿಸಿ ಕೇಸ್‌ ದಾಖಲಿಸಿಕೊಂಡು ಪೊಲೀಸರು ಬಲೆ ಬೀಸಿದಾಗ ಒಬ್ಬ ಸಿಕ್ಕಾಕಿಕೊಂಡಿದ್ದಾನೆ. ಸೀದಾ ರಾಜಸ್ಥಾನಕ್ಕೆ ತೆರಳಿ ಒಬ್ಬನನ್ನು ಪೊಲೀಸರು ಎತ್ತಾಕೊಂಡು ಬಂದಿದ್ದಾರೆ ಎನ್ನಲಾಗಿದೆ.

ಆರೋಪಿಗಳು ಮುಕೇಶ್‌ ಗ್ಯಾಂಗ್‌ ಐಷಾರಾಮಿ ಕಾರುಗಳನ್ನು ಮಾತ್ರವೇ ಕದಿಯುತ್ತಿತ್ತು. ಟೆಕ್ನಾಲಜಿ ಬಳಸಿ ಕಾರಿನ ಲಾಕ್‌ ಓಪನ್‌ ಮಾಡಿ ಸುಲಭವಾಗಿ ಕದಿಯುತ್ತಿದ್ದರು ಎನ್ನಲಾಗಿದೆ. ವಿಚಾರಣೆ ವೇಳೆ ಆರೋಪಿ ತಮ್ಮ ಕಥೆಯನ್ನು ಬಿಚ್ಚಿಟ್ಟಿದ್ದಾನೆ. ಅಲ್ಲದೆ ನಕಲಿ ಬೀಗ ಬಳಸಿಯೂ ಹಲವು ಕಾರುಗಳನ್ನು ಕದ್ದಿದ್ದ ಎಂದು ಒಪ್ಪಿಕೊಂಡಿದ್ದಾನೆ. ಉಳಿದವರು ಪೊಲೀಸರಿಗೆ ಸಿಕ್ಕರೆ, ಮತ್ತಷ್ಟು ಸತ್ಯ ಹೊರಬರಲಿದೆ ಎಂದು ಹೇಳಲಾಗುತ್ತಿದೆ. ಕಳ್ಳತನ ಮಾಡಲು ವಿಮಾನದಲ್ಲಿ ಬರುತ್ತಿದ್ದ ವಿಚಾರ ಕೇಳಿ ಪೊಲೀಸರು ಶಾಕ್‌ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+