ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ತೆಲಂಗಾಣದಲ್ಲಿ TRS ಅಧಿಕಾರ ಕಳೆದುಕೊಳ್ಳುವ ದಿನ ಸಮೀಪಿಸಿದೆ''

|
Google Oneindia Kannada News

ಬೆಂಗಳೂರು, ಡಿಸೆಂಬರ್ 4: ಜಿಎಚ್ಎಂಸಿ ಚುನಾವಣಾ ಫಲಿತಾಂಶವು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ಅಭಿವೃದ್ಧಿ ರಾಜಕಾರಣವನ್ನು ಜನರು ಮೆಚ್ಚಿರುವುದನ್ನು ತೋರಿಸಿದೆ. ಹಾಗೆಯೇ ಟಿ.ಆರ್.ಎಸ್ ಮತ್ತು ಎಂಐಎಂ ಪಕ್ಷಗಳ ತುಷ್ಟೀಕರಣದ ರಾಜಕಾರಣವನ್ನು ಜನರು ತಿರಸ್ಕರಿಸಿರುವುದನ್ನು ಬಿಂಬಿಸಿದೆ ಎಂದು ಜಿಎಚ್ಎಂಸಿ ಚುನಾವಣೆಯ ಬಿಜೆಪಿ ಸಹ ಉಸ್ತುವಾರಿಯಾಗಿದ್ದ ಆರೋಗ್ಯ ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ.

ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶದಲ್ಲಿ, ಟಿ.ಆರ್.ಎಸ್ ಪಕ್ಷದ ಅಧಿಕಾರದ ದಿನಗಳು ಕೊನೆಗೊಳ್ಳುವ ಹಂತಕ್ಕೆ ಬಂದಿದೆ ಎಂಬ ಜನರ ಭಾವನೆ ಸ್ಪಷ್ಟವಾಗಿ ವ್ಯಕ್ತವಾಗಿದೆ. ಟಿ.ಆರ್.ಎಸ್ ಹಾಗೂ ಎಂಐಎಂ ಪಕ್ಷಗಳು ಬಿಜೆಪಿಯನ್ನು ತಡೆಯುವ ಪ್ರಯತ್ನ ಮಾಡಿದ್ದರೂ, ಬಿಜೆಪಿ ಎತ್ತರಕ್ಕೆ ಏರಿದೆ. 2016 ರಲ್ಲಿ ಕೇವಲ ಸೀಟುಗಳನ್ನು ಹೊಂದಿದ್ದ ಬಿಜೆಪಿ ಈಗ ಪ್ರಬಲ, ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಹೇಳಿದರು.

ಜಿಎಚ್‌ಎಂಸಿ; ಬಿಜೆಪಿ ಅಬ್ಬರದ ಪ್ರಚಾರ ಮತವಾಗಲಿಲ್ಲ! ಜಿಎಚ್‌ಎಂಸಿ; ಬಿಜೆಪಿ ಅಬ್ಬರದ ಪ್ರಚಾರ ಮತವಾಗಲಿಲ್ಲ!

ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಸೇರಿದಂತೆ ರಾಷ್ಟ್ರಮಟ್ಟದ ನಾಯಕರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರಿಂದ ಹೈದರಾಬಾದ್ ನಲ್ಲಿ ರಾಜ್ಯ ಬಿಜೆಪಿ ಘಟಕ ಹಾಗೂ ಇಡೀ ತಂಡದ ಉತ್ಸಾಹ ಮುಗಿಲು ಮುಟ್ಟಿತ್ತು. ಬಿಜೆಪಿ ಈ ಹೋರಾಟವನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯಲಿದ್ದು, ಭ್ರಷ್ಟ ಟಿ.ಆರ್.ಎಸ್-ಎಂಐಎಂ ಆಡಳಿತ ಅಂತ್ಯವಾಗುವವರೆಗೂ ಈ ಹೋರಾಟ ನಡೆಯಲಿದೆ ಎಂದು ಸಚಿವ ಡಾ.ಕೆ ಸುಧಾಜರ್ ಅಭಿಪ್ರಾಪಟ್ಟಿದ್ದಾರೆ.

GHMC Elections Result 2020: ಮೊದಲ ಗೆಲುವು ದಾಖಲಿಸಿದ ಮಾಜಿ ಮೇಯರ್ GHMC Elections Result 2020: ಮೊದಲ ಗೆಲುವು ದಾಖಲಿಸಿದ ಮಾಜಿ ಮೇಯರ್

The Day Of TRS Losing Power In Telangana Is Near: Minister K Sudhakar

ಜನಾಭಿಪ್ರಾಯ ತಮ್ಮ ವಿರುದ್ಧವಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಹಾಗೂ ಅವರ ಪುತ್ರ ಕೆ.ಟಿ.ರಾಮರಾವ್ ಅವರಿಗೆ ಮೊದಲಿನಿಂದಲೂ ಗೊತ್ತಿತ್ತು. ಆತುರದ ಚುನಾವಣೆ, ಮಧ್ಯರಾತ್ರಿ ಆದೇಶಗಳು ಕೆಸಿಆರ್ ಪರಿವಾರದಲ್ಲಿ ಸೃಷ್ಟಿಯಾಗಿರುವ ಹತಾಶೆಯ ಲಕ್ಷಣಗಳು ಎಂದು ಟೀಕಿಸಿದ್ದಾರೆ.

The Day Of TRS Losing Power In Telangana Is Near: Minister K Sudhakar

Recommended Video

ಸ್ತಬ್ದವಾಗತ್ತಾ ಕರ್ನಾಟಕ | Oneindia Kannada

"ತೆಲಂಗಾಣದ ಜನರು ಸಮರ್ಥವಾದ ಪರ್ಯಾಯ ನಾಯಕತ್ವವನ್ನು ಬಯಸುತ್ತಿದ್ದಾರೆ. ಈಗ ಟಿಐಎನ್ಎ (ದೆರ್ ಈಸ್ ನೋ ಆಲ್ಟರ್ ನೇಟಿವ್) ಬದಲು ಬಿಐಟಿಎ-ಬಿಜೆಪಿ (ಬಿಜೆಪಿ ಈಸ್ ದಿ ಆಲ್ಟರ್ ನೇಟಿವ್) ಆಗಿದೆ. ಟಿಆರ್ಎಸ್ ಹಾಗೂ ಎಂಐಎಂಗೆ ಅಧಿಕಾರ ಕಳೆದುಕೊಳ್ಳುವ ಕ್ಷಣಗಣನೆ ಆರಂಭವಾಗಿದೆ.''

English summary
GHMC election results show Prime Minister Narendra Modi's appreciation of leadership and development politics Health Minister K Sudhakar said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X