ಮೂರು ದಿನ ಬೆಂಗಳೂರಿನಲ್ಲಿ ಭಾರೀ ಬಿಸಿಲು

ಬೆಂಗಳೂರು, ಏ. 21 : ಕಳೆದ ವಾರ ಮಳೆಯ ಸಿಂಚನದಿಂದ ಸಂತಸಗೊಂಡಿದ್ದ ಬೆಂಗಳೂರಿನ ಜನರಿಗೆ ಈ ವಾರ ಕಹಿಸುದ್ದಿಯೊಂದು ಕಾದಿದೆ. ಬೆಂಗಳೂರು ನಗರದಲ್ಲಿ ಮೂರು ದಿನಗಳ ಬಿರು ಬಿಸಿಲು ಇರಲಿದ್ದು, ಮಳೆ ಬರುವ ಯಾವುದೇ ಸೂಚನೆಗಳು ಇಲ್ಲ ಎಂದು ಹಮಾಮಾನ ಇಲಾಖೆ ಹೇಳಿದೆ.

ಬೆಂಗಳೂರಿನ ಹವಾಮಾನದ ಕುರಿತು ಮಾಹಿತಿ ನೀಡಿರುವ ಹವಾಮಾನ ಇಲಾಖೆ ನಿರ್ದೇಶಕ ಬಿ.ಪುಟ್ಟಣ್ಣ, ಬೆಂಗಳೂರಿನಲ್ಲಿ ಸೋಮವಾರದಿಂದ ಮೂರು ದಿನಗಳ ಕಾಲ ಉಷ್ಣಾಂಶ ಹೆಚ್ಚಾಗಿರಲಿದೆ. ಬೆಂಗಳೂರು ನಗರದ ತಾಪಮಾನ 36 ಡಿಗ್ರಿಗೆ ತಲುಪುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

Bangalore summer

ಕಳೆದವಾರ ನಗರದಲ್ಲಿ ಮಳೆಯಾಗಿತ್ತು. ಆದರೆ, ಮೋಡಗಳು ಪೂರ್ವ ದಿಕ್ಕಿನತ್ತ ಸಾಗಿರುವುದರಿಂದ ಈ ವಾರದ ನಗರದಲ್ಲಿ ಮಳೆ ಬರುವ ಸಾಧ್ಯತೆ ಇಲ್ಲ. ಉಷ್ಟಾಂಶವೂ ಹೆಚ್ಚಾಗಿರಲಿದೆ ಎಂದು ಮಾಹಿತಿ ನೀಡಿದ್ದಾರೆ. ಹವಾಮಾನ ಇಲಾಖೆ ಮಾಹಿತಿಯಂತೆ ಭಾನುವಾರ ನಗರದಲ್ಲಿ ಗರಿಷ್ಠ 35 ಡಿಗ್ರಿ ಮತ್ತು ಕನಿಷ್ಠ 23.4 ಡಿಗ್ರಿ ಉಷ್ಣಾಂಶ ದಾಖಲಾಗಿದೆ. [ಬಿಸಿಲಿನ ಎಫೆಕ್ಟ್ ಸರ್ಕಾರಿ ಕಚೇರಿ 1.30ಕ್ಕೆ ಬಂದ್]

ಸೋಮವಾರದಿಂದ ಮೂರು ದಿನಗಳ ಕಾಲ ನಗರದ ತಾಪಮಾನದಲ್ಲಿ ಏರಿಕೆ ಉಂಟಾಗಲಿದ್ದು ಗರಿಷ್ಠ ಉಷ್ಣಾಂಶ 35 ಡಿಗ್ರಿ ತಲುಪುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ. 2013ರ ಏಪ್ರಿಲ್ ತಿಂಗಳಿನಲ್ಲಿಯೂ ನಗರದಲ್ಲಿ 36.8 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು ಎಂದು ಪುಟ್ಟಣ್ಣ ವಿವರಣೆ ನೀಡಿದ್ದಾರೆ.

ಅಂದಹಾಗೆ ಬೆಂಗಳೂರಿನಲ್ಲಿ 11 ಗಂಟೆಯ ಉಷ್ಣಾಂಶ ಇಷ್ಟಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+