ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಾಪಮಾನ ಹೆಚ್ಚಳ, ಬಿಸಿಲಿಗೆ ತತ್ತರಿಸಿದ ಉತ್ತರ ಕರ್ನಾಟಕ ಮಂದಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 30: ಬೆಂಗಳೂರಿನ ಸುತ್ತಮುತ್ತ ಮಳೆಯಾಗಿದೆ, ಬಿಸಿಲ ಝಳ ಸ್ವಲ್ಪ ಕಡಿಮೆಯಾಗಿದೆ. ಆದರೆ ರಾಜ್ಯದ ಉತ್ತರ ಒಳನಾಡಿನಲ್ಲಿ ಗಡಿಷ್ಠ ತಾಪಮಾನ 43 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗಿದೆ.

ತಾಪಮಾನ ಏರುತ್ತಿರುವ ಕುರಿತು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನ ಕೆಲವೆಡೆ ಎರಡು ದಿನಗಳಲ್ಲಿ ಗರಿಷ್ಠ ತಾಪಮಾನ 41ರಿಂದ 43 ಡಿಗ್ರಿ ಸೆಲ್ಸಿಯಸ್ ಗೆ ಏರಿದೆ. ಹೀಗಾಗಿ, ಎಚ್ಚರಿಕೆಯಿಂದಿರಬೇಕು ಎಂದು ಮುನ್ಸೂಚನೆ ನೀಡಲಾಗಿದೆ.

ಭಾರತ, ಮೊರಾಕ್ಕೊ,ಇರಾಕ್ ರಾಷ್ಟ್ರಗಳಲ್ಲಿ ಉಂಟಾಗಲಿದೆ ನೀರಿನ ಹಾಹಾಕಾರ!ಭಾರತ, ಮೊರಾಕ್ಕೊ,ಇರಾಕ್ ರಾಷ್ಟ್ರಗಳಲ್ಲಿ ಉಂಟಾಗಲಿದೆ ನೀರಿನ ಹಾಹಾಕಾರ!

ಏಪ್ರಿಲ್ ಮೊದಲ ವಾರದಿಂದಲೇ ಸಹಜವಾಗಿ ಈ ಬಗೆಯ ತಾಪಮಾನ ಕಂಡು ಬರುವುದು ನಿರೀಕ್ಷೆ ಇತ್ತು. ಆದರೆ ಟ್ರಫ್( ದಡ್ಡ ಮೋಡಗಳ ಸಾಲು) ಪರಿಣಾಮದಿಂದ ಮಳೆ ಬಂದಿದ್ದರಿಂದ ತಾಪಮಾನ ಕಡಿಮೆಯಾಗಿತ್ತು. ಟ್ರಫ್ ಹೊರಟುಹೋದ ಕೂಡಲೇ ತಾಪಮಾನ ಏರುತ್ತಿದೆ. ದಕ್ಷಿಣ ಒಳನಾಡಿನಲ್ಲಿಯೂ ಕೂಡ ತಾಪಮಾನದಲ್ಲಿ ಏರಿಕೆಯಾಗುತ್ತಿದೆ. ಕಲಬುರಗಿಯಲ್ಲಿ 43.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

Temperature in high across the state

ಈ ಭಾಗದ ಜಿಲ್ಲೆಗಳಲ್ಲಿ 38 ರಿಂದ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಕರವಾಳಿಯಲ್ಲಿ 32 ರಿಂದ 35 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದರೂ, ತೇವಾಂಶದ ಹೆಚ್ಚಳದಿಂದ ಸೆಕೆ ಅಧಿಕವಾಗಿದೆ. ಮೇ.4 -5ರ ಹೊತ್ತಿಗೆ ರಾಜ್ಯದಲ್ಲಿ ಮತ್ತೆ ಮೋಡ ಕವಿದ ವಾತಾರವರಣ ಹಾಗೂ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ.

English summary
Indian Meteorological Department has warned on Sunday that as trough melting in south interior parts of the state, temperature would be reach 43 degree Celsius in north Karnataka within a day or two.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X