ಪೊಲೀಸರ ಮುಂದೆ ಕಣ್ಣೀರು ಹಾಕಿದ ತೆಲಗು ನಟ ತನೀಶ್ ಅಲ್ಲಾಡಿ !

ಬೆಂಗಳೂರು, ಮಾರ್ಚ್‌ 26: ಸ್ಯಾಂಡಲ್ ವುಡ್ ಡ್ರಗ್ ಡೀಲ್ ಪ್ರಕರಣ ಸಂಬಂಧ ಬೆಂಗಳೂರು ಪೊಲೀಸರ ವಿಚಾರಣೆ ಎದುರಿಸಿದ ತೆಲುಗು ಸಿನಿಮಾ ನಟ ತನೀಶ್ ಅಲ್ಲಾಡಿ ಪೊಲೀಸರ ಎದುರಲ್ಲೇ ಕಣ್ಣೀರು ಹಾಕಿಕೊಂಡಿದ್ದಾರೆ. ದೊಡ್ಡ ಸ್ಟಾರ್‌ಗಳಂತೆ ನಮ್ಮ ಜೀವನ ಇರಲ್ಲ. ಒಂದೊಂದು ರೂಪಾಯಿಗೂ ಪರದಾಡುತ್ತಿದ್ದೇನೆ. ಇಎಮ್ಐ ಕೊಟ್ಟೋಕೂ ಕಷ್ಟ ಆಗುತ್ತಿದೆ ಎಂದು ನಟ ಅನೀಶ್ ತನ್ನ ನೋವನ್ನು ಪೊಲೀಸರ ಮುಂದೆ ತೋಡಿಕೊಂಡಿದ್ದಾನೆ.

ಡ್ರಗ್ ಡೀಲ್ ಹಾಗೂ ಹೈಫೈ ಪಾರ್ಟಿ ಆಯೋಜನೆ ಮಾಡುತ್ತಿದ್ದ ಆರೋಪದಡಿ ಗೋವಿಂದಪುರ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ನಿರ್ಮಾಪಕ ಶಂಕರೇಗೌಡ ಬಂಧನ ಹಿನ್ನೆಲೆಯಲ್ಲಿ ನಟ ತನೀಶ್ ಅಲ್ಲಾಡಿಗೂ ನೋಟಿಸ್ ನೀಡಲಾಗಿದೆ. ನಿರ್ಮಾಪಕ ಶಂಕರೇಗೌಡ ಜತೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದ ತನೀಶ್ ಇದೀಗ ವಿಚಾರಣೆ ಎದುರಿಸುವಂತಾಗಿದೆ. ಬಿಗ್ ಬಾಸ್ ಸ್ಪರ್ಧಿಯಾಗಿ ಗೆದ್ದ ನಂತರ ಸಿನಿಮಾ ಮಾಡಲು ಮುಂದಾಗಿದ್ದೆ. ಇದೇ ಸಮಯದಲ್ಲಿ ನಿರ್ಮಾಪಕ ಶಂಕರೇಗೌಡ ಪರಿಚಯ ಆಗಿದ್ದರು. ನಿನಗೆ ತೆಲುಗಿನಲ್ಲಿ ಸುದೀಪ್ ರಂತೆ ಮಾಡುತ್ತೇನೆ ಎಂದು ಹೇಳಿದರು. ಅವರ ಮಾತನ್ನು ನಂಬಿ ಪದೇ ಪದೇ ಬೆಂಗಳೂರಿಗೆ ಬಂದು ನಿರ್ಮಾಪಕನನ್ನು ಸಂಪರ್ಕಿಸುತ್ತಿದ್ದೆ. ಆ ಸಂಪರ್ಕ ಹೊರತು ಪಡಿಸಿ ಬೇರೆ ಯಾವ ಸಂಪರ್ಕವೂ ಇಲ್ಲ ಎಂದು ತನೀಶ್ ಗೋವಿಂದಪುರ ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾರೆ.

Telugu actor Tanish Alladi broke down with tears in front of the police

Recommended Video

      IPL ನಲ್ಲಿ Abd ಮೀರಿಸಿದ ಪೊಲ್ಲಾರ್ಡ್ | Oneindia Kannada

      ಇನ್ನು ಬೇರೆ ನಟರಂತೆ ನಮ್ಮ ಜೀವನ ಇರಲ್ಲ. ಸ್ಟಾರ್ ನಟರ ಮಾದರಿ ನಮ್ಮ ಲೈಫ್ ಇರಲ್ಲ. ಐಷಾರಾಮಿ ಜೀವನ ನಡೆಸಲು ನಮ್ಮಿಂದ ಸಾಧ್ಯವಿಲ್ಲ. ಬದಲಿಗೆ ತಿಂಗಳ ಇಎಮ್ಐ ಕಟ್ಟಲಿಕ್ಕೂ ಕಷ್ಟವಾಗಲಿದೆ. ನಾನು ಯಾವುದೇ ಡ್ರಗ್ ಡೀಲ್‌ನಲ್ಲಿ ಪಾಲ್ಗೊಂಡಿಲ್ಲ ಎಂದು ಗೋವಿಂದಪುರ ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+