'ಮುರಿದ ಮನಸಿ'ನ ತೇಜಸ್ವಿನಿ ಅನಂತ್ ಕುಮಾರ್ ಟ್ವೀಟ್ ನಲ್ಲಿ ನಾನಾ ಅರ್ಥ!

Recommended Video

      ಅಪರೂಪದ ಟ್ವೀಟ್ ಮಾಡಿದ ತೇಜಸ್ವಿನಿ ಅನಂತಕುಮಾರ್ | Oneindia Kannada

      ಬೆಂಗಳೂರು, ಏಪ್ರಿಲ್ 5: ಬೆಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿ ಪಾಲಿಗೆ ಈ ಬಾರಿ ಅದೇನು ಫಲಿತಾಂಶ ನೀಡುತ್ತದೋ ಎಂಬ ಕುತೂಹಲ ಮತ್ತೆ ಹೆಚ್ಚಾಗಿದೆ. ತೇಜಸ್ವಿ ಸೂರ್ಯ ಅವರನ್ನು ಆ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಬಿಜೆಪಿಯ ಹಿರಿ ತಲೆಗಳು ನಿರ್ಧರಿಸಿದ ಮೇಲೆ ಸ್ಥಳೀಯ ನಾಯಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಟಿಕೆಟ್ ಕೈ ತಪ್ಪಿತಲ್ಲಾ ಎಂಬ ಸಿಟ್ಟು ಅದಾಗಿತ್ತು.

      ಆ ನಂತರ ತೇಜಸ್ವಿನಿ ಅವರನ್ನು ಓಲೈಸುವ ದೃಷ್ಟಿಯಿಂದ ಪಕ್ಷದಲ್ಲಿ ರಾಜ್ಯ ಮಟ್ಟದ ಒಂದು ಸ್ಥಾನ ನೀಡಲಾಯಿತು. ಅದರೆ ಏಪ್ರಿಲ್ ನಾಅಲ್ಕನೇ ತಾರೀಕು, ಗುರುವಾರದಂದು ತೇಜಸ್ವಿನಿ ಅವರು ಮಾಡಿದ ಟ್ವೀಟ್ ಹೊಸ ಅರ್ಥ ಧ್ವನಿಸುತ್ತಿದೆ. ಅಂದ ಹಾಗೆ ಆ ಟ್ವೀಟ್ ನಲ್ಲಿ ಏನಿತ್ತು.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಮುರಿದ ಮೋಡವು ಮಳೆ ಸುರಿಸುತ್ತದೆ

      ಮುರಿದ ಮಣ್ಣು ಕ್ಷೇತ್ರವಾಗಿ ಸಿದ್ಧಗೊಳ್ಳುತ್ತದೆ

      ಮುರಿದ ಬೆಳೆಯಿಂದ ಬೀಜ ಉತ್ಪತ್ತಿ ಆಗುತ್ತದೆ... ಮುರಿದ ಬೀಜದಿಂದ ಗಿಡ ಬೆಳೆಯುತ್ತದೆ

      ಯಾವಾಗ ಮನಸು ಮುರಿಯತ್ತದೊ

      ಇದೀಗ ನಮ್ಮ ಪ್ರಗತಿಗಾಗಿ ಆ ದೇವರು ಅದ್ಬುತವಾದ ಯೋಜನೆ ಇಟ್ಟುಕೊಂಡಿದ್ದಾನೆ ಎಂದು ನಂಬಿಕೊಳ್ಳೋಣ

      ಶಾಂತಿಯಿಂದ ಬದುಕುವುದಕ್ಕೆ ಕಲಿಯೋಣ

      Tejaswini ananthkumar

      -ಹೀಗೊಂದು ಸಂದೇಶ ಟ್ವೀಟ್ ಮಾಡಿದ್ದಾರೆ. ಈಚೆಗಷ್ಟೇ ತೇಜಸ್ವಿನಿ ಅವರನ್ನು ಬಿಜೆಪಿಯಾ ರಾಜ್ಯ ಉಪಾಧ್ಯಕ್ಷೆಯನ್ನಾಗಿ ನೇಮಕ ಮಾಡಲಾಗಿದೆ. ತೇಜಸ್ವಿನಿ ಅವರ ಈಗಿನ ಟ್ವೀಟ್ ನಲ್ಲಿ ಅಸಮಾಧಾನ ಢಾಳಾಗಿ ಗೋಚರಿಸುತ್ತಿದೆ. ಜತೆಗೆ ಸನ್ನಿವೇಶದ ಜತೆಗೆ ರಾಜಿ ಮಾಡಿಕೊಂಡ ಅನಿವಾರ್ಯವನ್ನೂ ಸೂಚಿಸುತ್ತಿದೆ. ಒಟ್ಟಾರೆ ಈ ಟ್ವೀಟ್ ಅನ್ನು ನಾನಾ ಬಗೆಯಲ್ಲಿ ವಿಶ್ಲೇಷಿಸಲಾಗುತ್ತಿದೆ.


      ಇನ್ನು ತೇಜಸ್ವಿನಿ ಅವರ ಟ್ವೀಟ್ ಗೆ ನಾನಾ ಬಗೆಯ ಪ್ರತಿಕ್ರಿಯೆ ಬಂದಿದೆ. ಕೆಲವರು ಅನುಕಂಪ ಸೂಚಿಸಿದ್ದಾರೆ. ಮತ್ತೆ ಕೆಲವರು ಈ ಟ್ವೀಟ್ ನಿಂದ ತಪ್ಪಾದ ಸಂದೇಶ ರವಾನೆ ಆಗುತ್ತದೆ ಎಂದಿದ್ದಾರೆ. ಇನ್ನೂ ಆಸಕ್ತಿಕರ ಅಂದರೆ, ನೀವು ಬರೀ ಸಂಸದೆ ಆಗಬೇಕಾದವರಲ್ಲ, ಈ ರಾಜ್ಯದ ಮುಖ್ಯಮಂತ್ರಿ ಆಗಬೇಕಾದವರು ಎಂದಿದ್ದಾರೆ. ಆದರೆ ಬಿಜೆಪಿಯಿಂದ ಯಾವ ಪ್ರತಿಕ್ರಿಯೆಯೂ ಬಂದಿಲ್ಲ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+