ತಾಂತ್ರಿಕ ದೋಷ: ಆರ್‌ವಿ ನಿಲ್ದಾಣದಲ್ಲಿ 10 ನಿಮಿಷ ನಿಂತ ಮೆಟ್ರೋ

ಬೆಂಗಳೂರು, ಜು.30: ಇತ್ತೀಚೆಗೆ ಮೆಟ್ರೋದಲ್ಲಿ ತಾಂತ್ರಿಕ ದೋಷಗಳು ಹೆಚ್ಚಾಗಿ ಕಂಡುಬರುತ್ತಿದೆ. ಯಲಚೇನಹಳ್ಳಿ ಮೆಟ್ರೋ ನಿಲ್ದಾಣದಿಂದ ನಾಗಸಂಧ್ರರದ ಕಡೆ ಹೋಗುತ್ತಿದ್ದ ಮೆಟ್ರೋ ಜಯನಗರದ ಆರ್‌.ವಿ. ರಸ್ತೆ ನಿಲ್ದಾಣದಲ್ಲಿ 10 ನಿಮಿಷಸ್ಥಗಿತಗೊಂಡು ಆತಂಕ ಪಡುವಂತಾಯಿತು.

ಭಾನುವಾರ ಬೆಳಗ್ಗೆ 11.36 ರ ವೇಳೆಗೆ ಆರ್‌ವಿ ನಿಲ್ದಾಣಕ್ಕೆ ಬಂದ ರೈಲಿನ ಚಾಲನಾ ಕ್ಯಾಬಿನ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು, ತಕ್ಷಣವಾಗಿ ಲೋಕೊ ಪೈಲೆಟ್‌ ತುರ್ತು ಬ್ರೇಕ್‌ ಒತ್ತಿ ರೈಲನ್ನು ನಿಲ್ಲಿಸಿದ್ದಾರೆ. ಬಳಿಕ ಎಲ್ಲಾ ಪ್ರಯಾಣಿಕರನ್ನು ಕಳಹಿಸಲಾಯಿತು. ನಂತರ ರೈನ್ನು ಹಿಂರುಗಿ ಹಳಿ ಬದಲಾಯಿಸಿ ಮರಳಿ ಯಲಚೇನಹಳ್ಳಿಗೆ ಕೊಂಡೊಯ್ದರು,. ಬನಶಂಕರಿ ಹಾಗೂ ಜೆಪಿ ನಗರ ನಿಲ್ದಾಣದಲ್ಲಿ ತಲಾ ಒಂದು ರೈಲನ್ನು ಸ್ಥಗಿತಗೊಳಿಸಲಾಯಿತು.

ಒಂದು ರೈಲು ಹತ್ತು ನಿಮಿಷ ತಡವಾಗಿ ಆರ್‌ವಿ ರಸ್ತೆ ನಿಲ್ದಾಣಕ್ಕೆ ಬಂದರೆ, ಮತ್ತೊಂದು 6 ನಿಮಿಷ ತಡವಾಗಿ ಆರ್‌ ನಿಲ್ದಾಣಕ್ಕೆ ಬಂದಿತು, ಮೆಜೆಸ್ಟಿಕ್‌ ಮಾರ್ಗವಾಗಿ ನಾಗಸಂದ್ರಕ್ಕೆ ಹೊರಟಿದ್ದ ಈ ರೈಲು, ಆರ್‌.ವಿ. ನಿಲ್ದಾಣದಲ್ಲೇ ಇಂತಿದ್ದರಿಂದ ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರ ತಡವಾಯಿತು.

Technical error erupts metro service for 10 minutes

ಇದರಿಂದಾಗಿ ಲಾಲ್‌ಬಾಗ್‌, ನ್ಯಾಷನಲ್‌ ಕಾಲೇಜು ಹಾಗೂ ಮೆಜೆಸ್ಟಿಕ್‌ನಲ್ಲಿ ಜನರು ಅರ್ಧಗಂಟೆಗೂ ಹೆಚ್ಚು ಕಾಲ ರೈಲಿಗಾಗಿ ಕಾದರು. ರೈಲು ತಡವಾಗಿದ್ದರಿಂದ ಮೆಜೆಸ್ಟಿಕ್‌ ಹಸಿರು ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ಅತಿಯಾಗಿತ್ತು.

ಭಾನುವಾರವಾದ್ದರಿಂದ ನಿಲ್ದಾಣದಲ್ಲಿ ಅಧಿಕಾರಿಗಳು ಇರಲಿಲ್ಲ.ಸಿಬ್ಬಂದಿಯೇ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+