ಬೆಂಗಳೂರಿನ ಕಲ್ಕೆರೆ ಕೆರೆಯಲ್ಲಿ ಟೆಕ್ಕಿ ಸಚಿನ್ ಶವ ಪತ್ತೆ

ಬೆಂಗಳೂರು, ಫೆಬ್ರವರಿ 09 : ಬೆಂಗಳೂರಿನ ರಾಮಮೂರ್ತಿ ನಗರ ಸಮೀಪದ ಕಲ್ಕೆರೆ ಕೆರೆಯಲ್ಲಿ ಟೆಕ್ಕಿ ಸಚಿನ್ ಶವ ಪತ್ತೆಯಾಗಿದೆ. 21 ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಅಗ್ನಿ ಶಾಮಕ ದಳ, ಎನ್‌ಡಿಆರ್‌ಎಫ್ ಸಿಬ್ಬಂದಿ ಶವ ಹೊರತೆಗೆದಿದ್ದಾರೆ.

ಭಾನುವಾರ ಮಧ್ಯಾಹ್ನ ಸಚಿನ್ ಮೃತ ದೇಹ ಪತ್ತೆಯಾಗಿದ್ದು, ಅಂಬೇಡ್ಕರ್ ವೈದ್ಯಕೀಯ ಕಾಲೇಜಿಗೆ ರವಾನೆ ಮಾಡಲಾಗಿದೆ. ಶನಿವಾರ ಮುಂಜಾನೆ 3 ಗಂಟೆ ಸುಮಾರಿಗೆ ಸಚಿನ್ ಮತ್ತು ಉಲ್ಲಾಸ್ ಕಲ್ಕೆರೆ ಕೆರೆಗೆ ಇಳಿದಿದ್ದರು. ಉಲ್ಲಾಸ್ ಈಜಿ ದಡ ಸೇರಿದ್ದರು.

ಕೊಡಗು ಜಿಲ್ಲೆಯ ವಿರಾಜಪೇಟೆ ಮೂಲದ ಸಚಿನ್ ಕೆರೆಯಲ್ಲಿ ಮುಳುಗಿದ್ದರು. ಶನಿವಾರ ಪೂರ್ತಿ ಮತ್ತು ಭಾನುವಾರ ಬೆಳಗ್ಗೆ ಹುಡುಕಾಟ ನಡೆಸಿದರೂ ಶವ ಪತ್ತೆಯಾಗಿರಲಿಲ್ಲ. ಮಧ್ಯಾಹ್ನ ಶವ ಸಿಕ್ಕಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

Techie Sachin Body Found In Kalkere Lake

ಸಚಿನ್ ಮತ್ತು ಆರ್. ಟಿ. ನಗರದ ನಿವಾಸಿ ಉಲ್ಲಾಸ್ ಇಬ್ಬರೂ ಟೆಕ್ಕಿಗಳು. ಶುಕ್ರವಾರ ರಾತ್ರಿಯಿಂದ ಶನಿವಾರ ಮುಂಜಾನೆ ತನಕ ಇಬ್ಬರು ಪಾರ್ಟಿ ಮಾಡಿದ್ದರು. ನಂತರ ಕಲ್ಕೆರೆ ಏರಿ ಮೇಲೆ ಬಂದಿದ್ದರು. ಈ ವೇಳೆ ಕೆರೆ ಏರಿ ಬದಿ ಇದ್ದ ತೆಪ್ಪ ಕಂಡು ಅದರಲ್ಲಿ ವಿಹಾರಕ್ಕೆ ಹೊರಟಿದ್ದರು.

ತೆಪ್ಪದಲ್ಲಿ ಹೋಗುವಾಗ ಹುಟ್ಟು ಜಾರಿ ಕೆರೆಗೆ ಬಿದ್ದಿದೆ. ಈ ವೇಳೆ ಕೈಯಲ್ಲಿ ತೆಪ್ಪ ನಡೆಸುವ ಹೋಗಿ ತೆಪ್ಪ ಮಗುಚಿ ಇಬ್ಬರು ನೀರಿಗೆ ಬಿದಿದ್ದಾರೆ. ಉಲ್ಲಾಸ್ ಈಜಿ ದಡ ಸೇರಿದ್ದಾರೆ. ಸಚಿನ್ ನೀರಿನಲ್ಲಿ ಮುಳುಗಿದ್ದರು. ಇಂದು ಶವ ಪತ್ತೆಯಾಗಿದೆ.

ಉಲ್ಲಾಸ್ ಸಚಿನ್ ನೀರಿನಲ್ಲಿ ಮುಳುಗಿರುವ ವಿಚಾರವನ್ನು ಸಚಿನ್ ಸಹೋದರನಿಗೆ ಕರೆ ಮಾಡಿ ಹೇಳಿದ್ದರು. ಅಗ್ನಿ ಶಾಮಕ ದಳ, ಪೊಲೀಸರು ಹುಡುಕಾಟ ನಡೆಸಿದರೂ ಶನಿವಾರ ಶವ ಸಿಕ್ಕಿರಲಿಲ್ಲ. ರಾಮಮೂರ್ತಿ ನಗರ ಠಾಣೆ ಪೊಲೀಸರು ಎನ್‌ಡಿಆರ್‌ಎಫ್‌ಗೂ ಮಾಹಿತಿ ನೀಡಿದ್ದರು.

ಭಾನುವಾರ ಬೆಳಗ್ಗೆ ಅಗ್ನಿ ಶಾಮಕ ದಳ, ಎನ್‌ಡಿಆರ್‌ಎಫ್ ತಂಡ ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿದ್ದವು. ಸಚಿನ್‌ಗೆ ಈಜು ಬರುತ್ತಿತ್ತು, ಆದರೆ, ತೆಪ್ಪ ಮಗಿಚಿದ ಗಾಬರಿಯಲ್ಲಿ ಈಜಲಾಗದೆ ಜಲಸಮಾಧಿಯಾಗಿದ್ದಾರೆ.

ಅಪರೂಪದ ಭೇಟಿ: ಸಚಿನ್ ಮತ್ತು ಉಲ್ಲಾಸ್ ಮೊದಲು ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಬಳಿಕ ಇಬ್ಬರು ಬೇರೆ-ಬೇರೆ ಕಂಪನಿ ಸೇರಿದ್ದರು. ಅಪರೂಪಕ್ಕೆ ಇಬ್ಬರು ಭೇಟಿಯಾಗಿದ್ದರು. ಅದೇ ಖುಷಿಗೆ ಪಾರ್ಟಿ ಮಾಡಿದ್ದರು.

ಸಚಿನ್ ವಿರಾಜಪೇಟೆ ತಾಲೂಕಿನ ಹಾತೂರು ಗ್ರಾಮದ ಕೊಂಗೇಪಂಡ ಮಾಚಯ್ಯ ಅವರ ಪುತ್ರ. ಒಂದು ವರ್ಷದ ಹಿಂದಷ್ಟೇ ಅವರು ಮದುವೆಯಾಗಿದ್ದರು. ಜನವರಿಯಲ್ಲಿ ಹೊಸ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+