Get Updates
Get notified of breaking news, exclusive insights, and must-see stories!

ಟ್ರಾಫಿಕ್ ಕಿರಿಕಿರಿ ಕಂಟ್ರೋಲ್‌ಗೆ ತಂತ್ರಜ್ಞಾನ ಇದೆ ಎಂದ ಟೆಕ್ಕಿ: ಬಾರಪ್ಪ ಕಂದಾ ಎಂದ ಬೆಂಗಳೂರು ಪೊಲೀಸರು

ಬೆಂಗಳೂರು: ಬೆಂಗಳೂರಿನಲ್ಲಿ ವರ್ಷಗಳಿಂದ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಾಗುತ್ತಲ್ಲೇ ಇದೆ. ಟ್ರಾಫಿಕ್‌ಜಾಮ್‌ ಹೆಚ್ಚಳವಾಗುವುದಕ್ಕೆ ಕೇವಲ ವಾಹನಗಳ ಸಂಖ್ಯೆ ಹೆಚ್ಚಳ, ಕಿರಿದಾದ ರಸ್ತೆಗಳು ಮಾತ್ರ ಕಾರಣವಲ್ಲ. ಇದರೊಂದಿಗೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವವರಿಂದಲೂ ವಿಪರೀತವಾದ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗುತ್ತಿದೆ.

ಬೆಂಗಳೂರು ಪೊಲೀಸರೊಂದಿಗೆ ಇದೀಗ ಬೆಂಗಳೂರಿನ 27 ವರ್ಷದ ಪಂಕಜ್ ತನ್ವರ್ ಟೆಕ್ಕಿ ಕೈಜೋಡಿಸಿದ್ದಾರೆ. ಬೆಂಗಳೂರಿನ ಟೆಕ್ಕಿ ಪಂಕಜ್ ಸಿದ್ಧಪಡಿಸಿರುವ 'AI ಹೆಲ್ಮೆಟ್' ಇದೀಗ ಬೆಂಗಳೂರಿನ ಟ್ರಾಫಿಕ್ ಜಾಮ್ ಕಂಟ್ರೋಲ್‌ಗೆ ಮತ್ತೊಂದು ಅಸ್ತ್ರವಾಗುತ್ತಿದೆ. ಪ್ರಯೋಗ, ಪರಿಶ್ರಮ ಹಾಗೂ ಸೋಷಿಯಲ್ ಮೀಡಿಯಾ ಟ್ರೆಂಡ್ ಇದೀಗ ಬೆಂಗಳೂರು ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ವರವಾಗಿ ಬದಲಾಗಿದೆ. ಅಲ್ಲದೇ ನಗರದ ಟ್ರಾಫಿಕ್ ಕಿರಿಕಿರಿಗೆ ಕಡಿವಾಣ ಹಾಕುವ ತಂತ್ರಜ್ಞಾನ ನನ್ನಲ್ಲಿದೆ. ಅನುಷ್ಠಾನಕ್ಕೆ ಸಹಾಯ ಮಾಡಿ ಅಂತಲೂ ಕೇಳಿದ್ದಾರೆ.

Techie Pankaj Says Tech Can Control Bengaluru Traffic City Police Join Hands

ಬೆಂಗಳೂರಿನಲ್ಲಿ ಜನ ಟ್ರಾಫಿಕ್‌ಜಾಮ್‌ನಿಂದ ಹೈರಾಣಾಗಿದ್ದಾರೆ. ಗಂಟೆಗಳ ಕಾಲ ಟ್ರಾಫಿಕ್‌ನಲ್ಲೇ ಸಮಯ ಸರಿದು ಹೋಗುತ್ತಿದೆ. 10 ಜನ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರೂ ನೂರಾರು ಜನ ಪರದಾಡಬೇಕಾದ ಪರಿಸ್ಥಿತಿ ಇದೆ. ಏಕಕಾಲದಲ್ಲಿ ಹಾಗೂ ನಿಖರವಾದ ಸಮಯದಲ್ಲಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡುವವರನ್ನು ಪತ್ತೆ ಮಾಡುವುದಕ್ಕೆ ಹಾಗೂ ಹೆಲ್ಮೆಟ್, ಸೀಟ್ ಬೆಲ್ಟ್‌ ಧರಿಸದೆ ಇರುವವರನ್ನು ಪತ್ತೆ ಮಾಡುವುದಕ್ಕೆ ಬೆಂಗಳೂರಿನ ಟೆಕ್ಕಿ ಪಂಕಜ್ ಸಿದ್ಧಪಡಿಸಿರುವ AI ಹೆಲ್ಮೆಟ್ ಇದೀಗ ಪ್ರಯೋಗಿಕ ಜಾರಿ ಹಂತದಲ್ಲಿದೆ. ಇದಕ್ಕೆ ಬೆಂಗಳೂರು ನಗರ ಪೊಲೀಸರ ಮುತುವರ್ಜಿಯೂ ಕಾರಣ.

ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಮತ್ತು ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲು ನಮ್ಮೂರಿನ ಟೆಕ್ಕಿ ಪಂಕಜ್ ಸಿದ್ಧಪಡಿಸಿರುವ AI ಹೆಲ್ಮೆಟ್ ಈಗ ನಗರದ ಸಂಚಾರ ವ್ಯವಸ್ಥೆಯಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗಿದೆ. ಇತ್ತೀಚೆಗೆ ಈ ಹೆಲ್ಮೆಟ್ ಅಭಿವೃದ್ಧಿಪಡಿಸಿದ ಟೆಕ್ಕಿಯು ಬೆಂಗಳೂರು ಸಂಚಾರ ಜಂಟಿ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ, ಈ ತಂತ್ರಜ್ಞಾನದ ಕಾರ್ಯವೈಖರಿ ಮತ್ತು ಅದರ ಅಳವಡಿಕೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ಚರ್ಚೆಯಲ್ಲಿ ಹಲವು ಮಹತ್ವದ ವಿಷಯಗಳನ್ನು ಚರ್ಚಿಸಲಾಗಿದೆ.

ಬೆಂಗಳೂರು ನಗರ ಪೊಲೀಸರ ಪ್ರಕಾರ, ಕೇವಲ ದಂಡ ವಿಧಿಸುವುದರಿಂದ ಸಂಚಾರ ವ್ಯವಸ್ಥೆ ಸುಧಾರಿಸುವುದಿಲ್ಲ. ಬದಲಿಗೆ, ಈ ರೀತಿಯ ತಂತ್ರಜ್ಞಾನಗಳಿಂದ ಸಾರ್ವಜನಿಕರಲ್ಲಿ "ನನ್ನನ್ನು ಯಾರೋ ಗಮನಿಸುತ್ತಿದ್ದಾರೆ" (Sense of being observed) ಎಂಬ ಭಾವನೆ ಮೂಡುತ್ತದೆ.

ಇದು ದೀರ್ಘಾವಧಿಯಲ್ಲಿ ಜನರು ಸ್ವಯಂಪ್ರೇರಿತರಾಗಿ ನಿಯಮ ಪಾಲಿಸುವಂತೆ ಮಾಡುತ್ತದೆ ಎಂದು ಅವರು ನಂಬಿದ್ದಾರೆ. ಈ ತಂತ್ರಜ್ಞಾನವನ್ನು ನೇರವಾಗಿ ಪೊಲೀಸರ ಅಧಿಕೃತ Astram API ಗಳೊಂದಿಗೆ ಸಂಯೋಜಿಸಲು (Integration) ಅವರು ಸಮ್ಮತಿಸಿದ್ದಾರೆ. ಇದರಿಂದ ಸಾರ್ವಜನಿಕರು ವರದಿ ಮಾಡುವ ಉಲ್ಲಂಘನೆಗಳು ನೇರವಾಗಿ ಇಲಾಖೆಯ ಡೇಟಾಬೇಸ್‌ಗೆ ಸೇರಲಿವೆ. ಇದರಿಂದ ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ಹಲವು ಮಾದರಿಯ ಟ್ರಾಫಿಕ್ ನಿಯಮ ಉಲ್ಲಂಘನೆಗೆ ಕಡಿವಾಣ ಬೀಳಲಿದೆ.

ತಪ್ಪು ವರದಿ ಮಾಡುವುದು ತಪ್ಪಲ್ಲ

ಇನ್ನು ಬೇರೆಯವರ ತಪ್ಪುಗಳನ್ನು ವರದಿ ಮಾಡುವುದು ತಪ್ಪು ಎಂಬ ವಾದವನ್ನು ಅಧಿಕಾರಿಗಳು ತಳ್ಳಿಹಾಕಿದ್ದಾರೆ. ಸಮಾಜದ ಸುರಕ್ಷತೆ ಮತ್ತು ರಸ್ತೆ ಶಿಸ್ತು ಕಾಪಾಡುವಲ್ಲಿ ನಾಗರಿಕರ ಭಾಗವಹಿಸುವಿಕೆ ಅತ್ಯಗತ್ಯ ಎಂದು ಅವರು ಈ ತಂತ್ರಜ್ಞಾನವನ್ನು ಬೆಂಬಲಿಸಿದ್ದಾರೆ. ಹೀಗಾಗಿ, ಬೇರೆಯವರ ತಪ್ಪುಗಳನ್ನು ವರದಿ ಮಾಡುವುದು ತಪ್ಪಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+