ಬೆಂಗಳೂರು: ಪಿಜಿ ಮೇಲಿಂದ ಬಿದ್ದು ಟೆಕ್ಕಿ ಅನುಮಾನಾಸ್ಪದ ಸಾವು
ಬೆಂಗಳೂರು, ಫೆಬ್ರವರಿ 17 : ಪಿಜಿ ಮೇಲಿಂದ ಬಿದ್ದು ಟೆಕ್ಕಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಮಹಾರಾಷ್ಟ್ರದ ನಾಗಪುರದ ಮೂಲದ ರಿಶಬ್(26) ಸಾವನ್ನಪ್ಪಿರುವ ಟೆಕ್ಕಿ. ರಿಶಬ್ ಆನೇಕಲ್ ತಾಲೂಕಿನ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿರುವ ಹೆಚ್.ಸಿ.ಎಲ್ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು.ರಿಶಬ್ ದೊಡ್ಡತೋಗುರಿನ ವಿಜಯ ಜೆಂಟ್ಸ್ ಪಿಜಿಯಲ್ಲಿ ವಾಸ್ತವಿದ್ದರು. ಬೆಳ್ಳಗ್ಗೆ ಎದ್ದು ಕೊನೆ ಮಹಡಿ ಮೇಲೆ ಕುಳಿತಿದ್ದರು. ಆದರೆ ಇದ್ದಕ್ಕಿದ್ದಂತೆ ಮೇಲಿಂದ ಬಿದ್ದು ಮೃತಪಟ್ಟಿದ್ದಾರೆ.

ಈ ಘಟನೆ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಿಶಬ್ ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಮುಂದುವರೆಸಿದ್ದಾರೆ.












Click it and Unblock the Notifications