ಬೆಂಗಳೂರಿನಲ್ಲಿ ಟ್ಯಾಕ್ಸಿ ಆಲ್ವೇಸ್ ಸೇವೆ ಆರಂಭ

ಬೆಂಗಳೂರು, ಮೇ 27 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಮತ್ತೊಂದು ಟ್ಯಾಕ್ಸಿ ಸೇವೆ ಆರಂಭವಾಗಿದೆ. ಟ್ಯಾಕ್ಸಿ ಆಲ್ವೇಸ್ ನಗರದಲ್ಲಿ ತನ್ನ ಸಂಚಾರ ಆರಂಭಿಸಿದ್ದು, ಹಿರಿಯ ನಾಗರಿಕರು ಮತ್ತು ಗರ್ಭಿಣಿಯರ ಪ್ರಯಾಣಕ್ಕೆ ಶೇ 25ರಷ್ಟು ರಿಯಾಯಿತಿ ಘೋಷಣೆ ಮಾಡಿದೆ.

ಸಾರಿಗೆ ಮತ್ತು ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರು ಬುಧವಾರ ಟ್ಯಾಕ್ಸಿ ಆಲ್ವೇಸ್ ಸೇವೆಗೆ ಚಾಲನೆ ನೀಡಿದರು. ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿ ಎಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು. [ಟ್ಯಾಕ್ಸಿ ಆಲ್ವೇಸ್ ವೆಬ್ ಸೈಟ್]

ramalinga reddy

ಟ್ಯಾಕ್ಸಿ ಆಲ್ವೇಸ್ ಕುರಿತು ಸಂಸ್ಥೆಯ ಮುಖ್ಯಸ್ಥ ಹಮೀದ್ ಅಕ್ಬರ್ ಆಲಿ ಮಾಹಿತಿ ನೀಡಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಎಲ್ಲಾ ಟ್ಯಾಕ್ಸಿಗಳಲ್ಲಿಯೂ ಜಿಪಿಎಸ್ ಅಳವಡಿಸಲಾಗಿದೆ. ಫೇರ್ ಮೀಟರ್ ಮುಂತಾದ ಸೌಲಭ್ಯಗಳಿವೆ. ದಿನದ 24 ಗಂಟೆಯೂ ಈ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ ಎಂದು ಹೇಳಿದರು. [APP ಡೌನ್ ಲೋಡ್ ಮಾಡಲು ವಿಳಾಸ]

ಜನರು 60706070, 60606060 ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ಟ್ಯಾಕ್ಸಿ ಸೇವೆಯ ಮಾಹಿತಿಯನ್ನು ಪಡೆಯಬಹುದಾಗಿದೆ. ಮುಂಬೈ, ಚೆನ್ನೈ ಮುಂತಾದ ನಗರಗಳಲ್ಲಿ ಸೇವೆ ನೀಡುತ್ತಿರುವ ಟ್ಯಾಕ್ಸಿ ಆಲ್ವೇಸ್ ಸದ್ಯ ಬೆಂಗಳೂರಿನಲ್ಲಿ ಸೇವೆ ಆರಂಭಿಸಿದೆ. [ಬೆಂಗಳೂರು ಸಿಟಿ ಟ್ಯಾಕ್ಸಿ ದೂರವಾಣಿ ಸಂಖ್ಯೆಗಳು]

ಟ್ಯಾಕ್ಸಿ ಆಲ್ವೇಸ್ ದರಪಟ್ಟಿ ಇಲ್ಲಿದೆ

Taxi always
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+