Hosur Airport: ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೂ ಮೊದಲೇ ಹೊಸೂರಿನಲ್ಲಿ ಏರ್‌ಪೋರ್ಟ್‌?

ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ. ಆದರೆ ಪಕ್ಕದ ತಮಿಳುನಾಡು ಕೂಡ ಬೆಂಗಳೂರಿಗೆ ಸಮೀಪವೇ ಇರುವ ಹೊಸೂರಿನಲ್ಲಿ ಏರ್‌ಪೋರ್ಟ್‌ ನಿರ್ಮಿಸಲು ಮುಂದಾಗಿದೆ. ಹೊಸೂರಿನ ಕೈಗಾರಿಕಾ ಪಟ್ಟಣಕ್ಕಾಗಿ ವಿಶೇಷ ವಿಮಾನ ನಿಲ್ದಾಣವನ್ನು ನಿರ್ಮಿಸಲು ಬದ್ಧವಾಗಿದೆ ಎಂದು ತಮಿಳುನಾಡು ಸರ್ಕಾರ ಹೊಸೂರಿನಲ್ಲಿ ಕೈಗಾರಿಕಾ ಸಂಘಗಳಿಗೆ ಭರವಸೆ ನೀಡಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಜೂನ್ 2024ರಲ್ಲಿ ಹೊಸೂರು ಬಳಿ ಏರ್‌ಪೋರ್ಟ್‌ ನಿರ್ಮಿಸುವ ಸಂಬಂಧ ಘೋಷಿಸಿದ್ದರು. ಸದ್ಯ ಹೊಸೂರಿಗೆ ಎರಡು ದಿನಗಳ ಭೇಟಿಯಲ್ಲಿರುವ ಅಲ್ಲಿನ ಕೈಗಾರಿಕಾ ಸಚಿವ ಟಿಆರ್‌ಬಿ ರಾಜಾ ಅವರು ವಿವಿಧ ಕ್ಷೇತ್ರಗಳಲ್ಲಿ ವಿಶೇಷವಾಗಿ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕ್ ವಾಹನಗಳ ನಿರಂತರ ಹೂಡಿಕೆಯಿಂದಾಗಿ ಮುಂದಿನ ಐದು ವರ್ಷಗಳಲ್ಲಿ ಹೊಸೂರು ಭಾರಿ ಬೆಳವಣಿಗೆ ಕಾಣಲಿದೆ ಎಂದು ಹೇಳಿದ್ದಾರೆ.

Tamil Nadu Plans New Airport In Hosur Before Bengaluru Second Airport

ಕೈಗಾರಿಕಾ ಸಚಿವ ಟಿಆರ್‌ಬಿ ರಾಜಾ ಅವರು ಹೊಸೂರು ಸಣ್ಣ ಮತ್ತು ಸಣ್ಣ ಕೈಗಾರಿಕೆಗಳ ಸಂಘದ ಪ್ರತಿನಿಧಿಗಳೊಂದಿಗೆ ವಿಶೇಷ ಸಭೆ ಕೂಡ ನಡೆಸಿದ್ದಾರೆ. ಹೊಸೂರು ವಿಮಾನ ನಿಲ್ದಾಣಕ್ಕೆ ಸ್ಥಳವನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಸರ್ಕಾರವು ತ್ವರಿತವಾಗಿ ಮಾಡಲಿದೆ. ಈ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದೂ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು (ಎಎಐ) ಖಾಸಗಿ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿರುವ ತನೇಜಾ ಏರೋಸ್ಪೇಸ್ ಮತ್ತು ಏವಿಯೇಷನ್ ಲಿಮಿಟೆಡ್ (ಟಿಎಎಎಲ್) ಹೊಸೂರು ಸಮೀಪದ ಬೆಳಗೊಂದಪಲ್ಲಿಗೆ ಸಮೀಪವಿರುವ ಗ್ರಾಮಗಳು ಸೇರಿದಂತೆ ಪ್ರಸ್ತುತ ಎರಡು ಸ್ಥಳಗಳ ವಿವರವಾದ ಅಧ್ಯಯನ ನಡೆಸುತ್ತಿದೆ. ಈ ವರದಿಗಾಗಿ ತಮಿಳುನಾಡು ಸರ್ಕಾರ ಕಾಯುತ್ತಿದ್ದು, ವಿವರವಾದ ವರದಿಯನ್ನು ಪಡೆದ ನಂತರ, ವಿಷಯಗಳು ಅಂತಿಮ ರೂಪಕ್ಕೆ ಬರಲಿವೆ ಎಂದು ಹೇಳಲಾಗುತ್ತಿದೆ.

Tamil Nadu Plans New Airport In Hosur Before Bengaluru Second Airport

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ತಮಿಳುನಾಡು ಸರ್ಕಾರವು ಸೂಚಿಸಿದ ಐದು ಸ್ಥಳಗಳನ್ನು ಕಳೆದ ಸೆಪ್ಟೆಂಬರ್-ಅಕ್ಟೋಬರ್‌ನಲ್ಲೇ ಸಮೀಕ್ಷೆಯೂ ನಡೆಸಿದೆ. ಈ ಪೈಕಿ ಎರಡು ಸ್ಥಳಗಳಲ್ಲಿ ಅಂತಿಮಗೊಳಿಸಲಾಗಿದೆ. ಈ ಎರಡೂ ಸ್ಥಳಗಳ ವಿವರವಾದ ಅಧ್ಯಯನ ನಡೆಸಲು ಪ್ರಾಧಿಕಾರಕ್ಕೆ ತಿಳಿಸಲಾಗಿದ್ದು, ಈ ಪ್ರಕ್ರಿಯೆ ನಡೆಯುತ್ತಿದೆ ಎಂದೂ ವರದಿಯಾಗಿದೆ.

ಹೊಸೂರು ಬೆಂಗಳೂರಿಗೆ ಸಮೀಪದಲ್ಲೇ ಇದೆ. ಈಗಾಗಲೇ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಜೊತೆಗೆ ಕರ್ನಾಟಕ ಸರ್ಕಾರವು ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ನಿರ್ಮಿಸಲು ಯೋಜನೆ ರೂಪಿಸಿದೆ. ಇದರ ಬೆನ್ನಲ್ಲೇ ತಮಿಳುನಾಡು ಸರ್ಕಾರದ ಕೂಡ ಏರ್‌ಪೋರ್ಟ್‌ ನಿರ್ಮಿಸಲು ಪೈಪೋಟಿಗೆ ಬಿದ್ದಿದೆ. ಹೊಸೂರಿನಲ್ಲಿ ಬರಲಿರುವ ಹೊಸ ವಿಮಾನ ನಿಲ್ದಾಣದಿಂದ ದಕ್ಷಿಣ ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ವಾಸಿಸುವ ಜನರಿಗೂ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.

ಈ ಹೊಸ ವಿಮಾನ ನಿಲ್ದಾಣ ನಿರ್ಮಿಸಲು ಕನಿಷ್ಠ ಎಂದರೂ ಆರು ಅಥವಾ ಏಳು ವರ್ಷಗಳು ಬೇಕಾಗುತ್ತದೆ. ಆ ವೇಳೆಗೆ ಒಪ್ಪಂದ ಕೂಡ ಮುಗಿದಿರುತ್ತೆ ಎಂಬ ಅಂದಾಜಿನಲ್ಲಿ ತಮಿಳುನಾಡು ಸರ್ಕಾರವು ಹೊಸ ವಿಮಾನ ನಿಲ್ದಾಣವನ್ನು ನಿರ್ಮಿಸಲು ಸ್ಥಳಗಳನ್ನು ಪಟ್ಟಿ ಮಾಡಿಕೊಂಡಿದೆ. ಇದೇ ವಿಚಾರವಾಗಿ ತಮಿಳುನಾಡು ಸರ್ಕಾರವು ಕಳೆದ ಮೂರು ವರ್ಷಗಳಿಂದ ಬೆಂಗಳೂರು ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ ಲಿಮಿಟೆಡ್‌ನೊಂದಿಗೆ (ಬಿಐಎಎಲ್‌) ಸಂಪರ್ಕದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+