ನೆರೆ ರಾಜ್ಯದ ಶಿಕ್ಷಣ ಸಚಿವರಿಗೆ ದಿಢೀರ್ ಎದೆನೋವು: ಆಸ್ಪತ್ರೆಗೆ ಬರುವಾಗ ಹೆವಿ ಟ್ರಾಫಿಕ್, ಬೆಂಗಳೂರು ಪೊಲೀಸರ ನೆರವು, ಘಟನೆ ವಿವರ

ಬೆಂಗಳೂರು, ಆಗಸ್ಟ್ 13: ನೆರೆ ರಾಜ್ಯದ ಸಚಿವರೊಬ್ಬರಿಗೆ ಕಾರ್ಯಕ್ರಮವೊಂದರಲ್ಲಿ ದಿಢೀರ್ ಎದೆನೋವು ಕಾಣಿಸಿಕೊಂಡಿದೆ. ಅಲ್ಲಿಂದ ಅವರನ್ನು ಕೂಡಲೇ ಬೆಂಗಳೂರು ಟ್ರಾಫಿಕ್ ಪೊಲೀಸರ ಸಹಾಯದಿಂದ ಇಲ್ಲಿನ ನಾರಾಯಣ ಹೆಲ್ಟ್ ಸಿಟಿ ಆಸ್ಪತ್ರೆಗೆ ದಾಖಲಿಸಲಾಯಿತು.

ನೆರೆಯ ತಮಿಳು ನಾಡು ರಾಜ್ಯದ ಸರ್ಕಾರದ ಶಿಕ್ಷಣ ಸಚಿವರಾದ ಅನ್ಬಿಲ್ ಮಹೇಶ್ ಪೊಯ್ಯಪೊಳಿ (Anbil Mahesh Poyyamozhi) ಅವರು ಭಾನುವಾರ ಕೃಷ್ಣಗಿರಿಯಲ್ಲಿ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರ ಎದೆಯಲ್ಲಿ ದಿಢೀರ್ ನೋವು ಕಾಣಿಸಿಕೊಂಡಿದೆ. ಕಾರ್ಯಕ್ರಮದಲ್ಲಿದ್ದವರು ಆತಂಕಕ್ಕೆ ಒಳಗಾದರು.

Tamil Nadu Minister Anbil Mahesh Poyyamozhi Chest Pain Bengaluru Traffic Police Clear, Hospitalised

ಕೂಡಲೇ ಅವರನ್ನು ಕೃಷ್ಣಗಿರಿಯಿಂದ ಸಿಲಿಕಾನ್ ಸಿಟಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ತರಲು ನಿರ್ಧರಿಸಲಾಯಿತು. ಈ ವೇಳೆ ಅನೇಕಲ್ ಸುತ್ತಮುತ್ತ ತೀವ್ರ ಟ್ರಾಫಕ್ ಸಮಸ್ಯೆ ಇದ್ದ ಕಾರಣ. ಸಚಿವರು ಸಹಿತ ಆಸ್ಪತ್ರೆಗೆ ಬರುತ್ತಿದ್ದ ಕಾರಿಗೆ ಆಗಾಗ ಅಡಚರಣೆ ಉಂಟಾಯಿತು.

ಈ ವೇಳೆ ಬೆಂಗಳೂರು ಸಂಚಾರಿ ಪೊಲೀಸರ ನೆರವಿನ ಮೇರೆಗೆ ಅಲ್ಲಲ್ಲಿ ವಾಹನ ದಟ್ಟಣೆ (Traffic) ಕ್ಲಿಯರ್ ಮಾಡುತ್ತಾ ಶಿಕ್ಷಣ ಸಚಿವರನ್ನು ಪೊಲೀಸರ ನೆರವಿನಲ್ಲಿ ಆಸ್ಪತ್ರೆಗೆ ಸೂಕ್ತ ಸಮಯಕ್ಕೆ ದಾಖಲಾಯಿಸಲು ಸಾಧ್ಯವಾಯಿತು. ಈ ವೇಳೆ ಕೃಷ್ಣಗಿರಿ ಜಿಲ್ಲಾ ಪೊಲೀಸರು ಸಹ ಆಸ್ಪತ್ರೆಗೆ ಆಗಮಿಸಿದ್ದಾರೆ. ಸದ್ಯ ಸಚಿವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+