ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುನ್ನೋಟದ ಅರಿಮೆಯಲ್ಲಿ 'ಗಣರಾಜ್ಯಕ್ಕೊಂದು ಮರುನೋಟ'

|
Google Oneindia Kannada News

ಬೆಂಗಳೂರು, ಜನವರಿ 22: ಲೇಖಕ ವಸಂತಶೆಟ್ಟಿ ಅವರ ಮುನ್ನೋಟ ಮಳಿಗೆಯಲ್ಲಿ ಜನವರಿ 26 ರಂದು 'ಗಣರಾಜ್ಯಕ್ಕೊಂದು ಮರುನೋಟ' ಶೀರ್ಷಿಕೆಯಲ್ಲಿ ಅರಿಮೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಗಣರಾಜ್ಯೋತ್ಸವಕ್ಕೆ ಮುನ್ನೋಟದಲ್ಲಿ ನಡೆಯಲಿರುವ ವಿಶೇಷ ಮಾತುಕತೆಯಲ್ಲಿ ನಗರ ಯೋಜನಾ ತಜ್ಞ ಅಶ್ವಿನ್ ಮಹೇಶ್ ಅವರು ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ. ಗಣತಂತ್ರಕ್ಕೊಂದು ಮರುನೋಟ ನೀಡುವ, ಭಾರತದ ಏಳಿಗೆಯಲ್ಲಿ ಅಧಿಕಾರ ವಿಕೇಂದ್ರಿಕರಣ ಮತ್ತು ಒಕ್ಕೂಟ ವ್ಯವಸ್ಥೆಯ ಪಾತ್ರದ ಬಗ್ಗೆ ಬೆಳಕು ಚೆಲ್ಲುವ ಮಾತುಕತೆಯನ್ನು ಅವರು ನಡೆಸಿಕೊಡಲಿದ್ದಾರೆ.

ಶ್ರೀ ರಾಮಾಯಣ ದರ್ಶನಂ ಆಧಾರಿತ ನಾಟಕ 'ವಾಲಿವಧೆ' ಪ್ರದರ್ಶನಶ್ರೀ ರಾಮಾಯಣ ದರ್ಶನಂ ಆಧಾರಿತ ನಾಟಕ 'ವಾಲಿವಧೆ' ಪ್ರದರ್ಶನ

ದೇಶಕ್ಕೆ ಸ್ವಾತಂತ್ರ್ಯ ಬಂದಾಗ ದೇಶದ ರಾಜಕೀಯ ನಾಯಕತ್ವದ ಬಗ್ಗೆ ಜನರು ಅಪಾರ ನಂಬಿಕೆ ಇರಿಸಿದ್ದರು. ತಡವಿಲ್ಲದೇ ಭಾರತ ಒಕ್ಕೂಟ ಏಳಿಗೆಯತ್ತ ಧಾಪುಗಾಲು ಹಾಕಲಿದೆ ಎಂದೇ ನಂಬಿದ್ದರು. ಎಪ್ಪತ್ತು ವರ್ಷಗಳ ನಂತರ ನೋಡಿದರೆ ಈ ನಂಬಿಕೆ ಹುಸಿಯಾಗಿದ್ದಷ್ಟೇ ಅಲ್ಲದೆ ರಾಜಕೀಯ ನಾಯಕತ್ವದ ಬಗ್ಗೆಯೇ ಒಂದು ರೀತಿಯ ನಿರಾಸೆ ಕವಿದಿದೆ ಹಾಗಾದರೆ ನಾವು ಎಡವಿದ್ದು ಎಲ್ಲಿ ಇಂತಹ ಸಾವಿರಾರು ಪ್ರಶ್ನೆಗಳ ಕುರಿತು ಚರ್ಚೆ ನಡೆಯಲಿದೆ.

Talk on revisiting on Republic by Ashwin Mahesh

ಏನು- ಗಣರಾಜ್ಯಕ್ಕೊಂದು ಮರುನೋಟ
ಎಲ್ಲಿ-ಮುನ್ನೋಟ ಬುಕ್ ಸ್ಟೋರ್, ನಂ67 , ಸೌತ್ ಅವೆನ್ಯೂ ಕಾಂಪ್ಲೆಕ್ಸ್, ಡಿವಿಜಿ ರಸ್ತೆ, ನಾಗಸಂದ್ರ ಸರ್ಕಲ್ ಬಳಿ, ಬಸವನಗುಡಿ.
ಯಾವಾಗ-ಜನವರಿ 26, ಬೆಳಗ್ಗೆ ಭಾನುವಾರ ಬೆಳಿಗ್ಗೆ 11.30

English summary
Munnota Book stall is organising weekend talk series on January 26 by urban planning expert Ashwin Mahesh on topic of revisiting republics which gives decentralization and federal system.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X