ಬೆಂಗಳೂರಿನ ಫುಟ್‌ಪಾತ್ ತೆರವಿಗೆ ಕಠಿಣ ಕ್ರಮ ಕೈಗೊಳ್ಳಿ

ಬೆಂಗಳೂರು, ನ. 26: ನಗರದಲ್ಲಿ ಒತ್ತುವರಿಗೊಂಡಿರುವ ಫುಟ್‌ಪಾತ್ ತೆರವುಗೊಳಿ ಕಠಿಣ ಕ್ರಮ ಕೈಗೊಳ್ಳಿ. ಸಂಬಂಧಪಟ್ಟ ಅಧಿಕಾರಿಗಳು ಪೊಲೀಸ್ ಭದ್ರತೆ ಪಡೆದು ತಮ್ಮ ಅಧಿಕಾರ ಉಪಯೋಗಿಸಿ ತೆರವು ಕಾರ್ಯಾಚರಣೆ ಕೈಗೊಳ್ಳಬೇಕೆಂದು ಹೈ ಕೋರ್ಟ್ ಸೂಚಿಸಿದೆ.

ನಗರದಲ್ಲಿ ಫುಟ್‌ಪಾತ್ ತೆರವು ಕುರಿತ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಘೇಲಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಫುಟ್‌ಪಾತ್ ತೆರವು ಹಾಗೂ ಮಾಲಿನ್ಯ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. [ಜಯನಗರದಲ್ಲಿದೆ ಮಾದರಿ ಫುಟ್ ಪಾತ್]

court

ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಲು ರಾಜಕೀಯ ಒತ್ತಡ ಬಂದರೆ ಒತ್ತುವರಿದಾರರಿಗೆ ನೋಟಿಸ್ ನೀಡದೆ ತೆರವು ಕಾರ್ಯಾಚರಣೆ ಕೈಗೊಳ್ಳಬೇಕು. ಈ ಸಂದರ್ಭದಲ್ಲಿ ಜನನಿಬಿಡ ಪ್ರದೇಶಗಳಿಗೆ ಆದ್ಯತೆ ನೀಡಬೇಕು. ಈ ಕುರಿತು ಛಾಯಾಚಿತ್ರ ಸಮೇತ ಮಾಹಿತಿಗಳನ್ನು ಡಿ. 11ರಂದು ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಬಿಬಿಎಂಪಿಗೆ ಆದೇಶ ನೀಡಿತು.

ಮೂರು ಮಾಲಿನ್ಯ ರಹಿತ ರಸ್ತೆ ನಿರ್ಮಾಣ

ಬೆಂಗಳೂರಿನಲ್ಲಿ ವಾಯು ಹಾಗೂ ಶಬ್ದ ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಮೂರು ಮಾದರಿ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಬಿಬಿಎಂಪಿ ಹೈ ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದೆ. [ಪುಟ್ ಪಾತ್: ಬಿಬಿಎಂಪಿ ಆಯುಕ್ತರಿಗೆ ತರಾಟೆ]

ನಗರದಲ್ಲಿ ಹೆಚ್ಚುತ್ತಿರುವ ಶಬ್ದ ಹಾಗೂ ವಾಯು ಮಾಲಿನ್ಯ ಕುರಿತು ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಆರಂಭಿಸಿದೆ. [ಶಬ್ದ ಮಾಲಿನ್ಯಕ್ಕೆ ಬೀಳಲಿದೆ ಕಡಿವಾಣ]

ಕಬ್ಬನ್ ರಸ್ತೆಯಲ್ಲಿ ಡಿಕನ್ಸನ್ ರಸ್ತೆಯಿಂದ ಸೆಂಟ್ರಲ್ ಸ್ಟ್ರೀಟ್‌ವರೆಗೆ, ರೇಸ್‌ಕೋರ್ಸ್ ರಸ್ತೆಯಲ್ಲಿ ಚಾಲುಕ್ಯ ವೃತ್ತದಿಂದ ಶಿವಾನಂದ ವೃತ್ತದವರೆಗೆ ಹಾಗೂ ಸ್ಯಾಂಕಿ ರಸ್ತೆಯಲ್ಲಿ ವಿಂಡ್ಸರ್ ವೃತ್ತದಿಂದ ರಾಜಭವನ ರಸ್ತೆ ಜಂಕ್ಷನ್‌ವರೆಗಿನ ರಸ್ತೆಗಳನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಕಾಮಗಾರಿ ಪೂರ್ಣಗೊಂಡ ಮೇಲೆ ಇಲ್ಲಿ ಶಬ್ದ ಹಾಗೂ ವಾಯು ಮಾಲಿನ್ಯವನ್ನು ಅಳೆಯಬಹುದು ಎಂದು ಬಿಬಿಎಂಪಿ ತಿಳಿಸಿದೆ. [ಮಕ್ಕಳು ಪಟಾಕಿ ಹೊಡೆಯಲ್ಲ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+