SWR: ಕರ್ನಾಟಕದಿಂದ ವಿವಿಧೆಡೆ ಡಿಸೆಂಬರ್‌ವರೆಗೆ ವಿಶೇಷ ರೈಲುಗಳು ಸಂಚಾರ, ವೇಳಾಪಟ್ಟಿ

ಬೆಂಗಳೂರು, ಆಗಸ್ಟ್ 29: ಗಣೇಶ ಹಬ್ಬಕ್ಕೆ ಈಗಾಗಲೇ ವಿಶೇಷ ರೈಲು ಕಾರ್ಯಾಚರಣೆ ಮಾಡಲಾಗುತ್ತಿದೆ. ದಸರಾ, ದೀಪಾವಳಿ ಮತ್ತು ಛತ್ ಹಬ್ಬದ ಋತುಗಳಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ, ಈ ಕೆಳಗಿನ ವಿಶೇಷ ರೈಲುಗಳ ಸೇವೆ ಮುಂದುವರಿಸಲಾಗುತ್ತಿದೆ. ಅವುಗಳ ಪ್ರಸ್ತುತ ಸಮಯ ಮತ್ತು ನಿಲುಗಡೆಗಳೊಂದಿಗೆ ಸಂಚರಿಸಲಿವೆ ಎಂದು ನೈಋತ್ಯ ರೈಲ್ವೆ (SWR) ತಿಳಿಸಿದೆ.

ವಿಶೇಷ ರೈಲುಗಳು ಯಾವುವು? ಸಂಚಾರ ವೇಳಾಪಟ್ಟಿ

* ಯಶವಂತಪುರ-ಯೋಗನಗರಿ ಋಷಿಕೇಶ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (06597) 04.09.2025 ರಿಂದ 27.11.2025 ರವರೆಗೆ ಸಂಚರಿಸಲಿದೆ.

SWR Operate Special Trains From Karnataka For Festival Rush Until December 2025

* ಯೋಗ ನಗರಿ ಋಷಿಕೇಶ-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (06598) 06.09.2025 ರಿಂದ 29.11.2025 ರವರೆಗೆ ನೈಋತ್ಯ ರೈಲ್ವೆಯು ಕಾರ್ಯಾಚರಣೆ ಮಾಡಲಿದೆ.

* ವಿಶಾಖಪಟ್ಟಣ-SMVT ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (08581) 14.09.2025 ರಿಂದ 30.11.2025 ರವರೆಗೆ ಸೇವೆ ನೀಡಲಿದೆ.

* ರೈಲು ಸಂಖ್ಯೆ 08582 SMVT ಬೆಂಗಳೂರು-ವಿಶಾಖಪಟ್ಟಣಂ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು 15.09.2025 ರಿಂದ 01.12.2025 ರವರೆಗೆ ಮುಂದುವರಿಯಲಿದೆ.

* ಭುವನೇಶ್ವರ-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (02811) 13.09.2025 ರಿಂದ 29.11.2025 ರವರೆಗೆ ಮುಂದುವರಿಯಲಿದೆ.

* ಯಶವಂತಪುರ-ಭುವನೇಶ್ವರ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (02812) 15.09.2025 ರಿಂದ 01.12.2025 ರವರೆಗೆ ಸೇವೆ ನೀಡಲಿದೆ.

* ದಾನಾಪುರ-SMVT ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು 31.08.2025 ರಿಂದ 29.12.2025 ರವರೆಗೆ ತನ್ನ ಸೇವೆ ನೀಡಲಿದೆ.

* ರೈಲು ಸಂಖ್ಯೆ 03252 SMVT ಬೆಂಗಳೂರು-ದಾನಾಪುರ ಎಕ್ಸ್‌ಪ್ರೆಸ್ ವಿಶೇಷ (ವಾರದಲ್ಲಿ ಎರಡು ಬಾರಿ) ರೈಲು 02.09.2025 ರಿಂದ 31.12.2025 ರವರೆಗೆ ಕಾರ್ಯಾಚರಣೆ ಮಾಡಲಿದೆ.

* ದಾನಾಪುರ-SMVT ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (03259) 02.09.2025 ರಿಂದ 30.12.2025 ರವರೆಗೆ ಸಂಚಾರ ಸೇವೆ ನೀಡಲಿದೆ.

* ಬೆಂಗಳೂರುSMVT-ದಾನಾಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 03260) 04.09.2025 ರಿಂದ 01.01.2026 ಸಂಚರಿಸಲಿದೆ. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.

* ದಾನಾಪುರ-SMVT ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (03245) 17.09.2025 ರಿಂದ 31.12.2025 ರವರೆಗೆ ಸೇವೆ ಮುಂದುವರಿಯಲಿದೆ.

* ರೈಲು ಸಂಖ್ಯೆ 03246 SMVT ಬೆಂಗಳೂರು-ದಾನಾಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು 19.09.2025 ರಿಂದ 02.01.2026 ರವರೆಗೆ ಸಂಚರಿಸಲಿದೆ.

* ನರಸಾಪುರ-SMVT ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 07153) 03.10.2025 ರಿಂದ 26.12.2025 ರವರೆಗೆ ಸೇವೆ ನೀಡಲಿದೆ.

* SMVT ಬೆಂಗಳೂರು-ನರಸಾಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 07154) 04.10.2025 ರಿಂದ 27.12.2025 ರವರೆಗೆ ಕಾರ್ಯಾಚರಣೆ ಮಾಡಲಿದೆ ಎಂದು ನೈಋತ್ಯ ರೈಲ್ವೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ಶುಕ್ರವಾರ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+