• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆತ್ಮವಿಶ್ವಾಸ ತುಂಬಿದ್ದ ಚಿರಂಜೀವಿ ಸರ್ಜಾ: ಸಚಿವ ಸುರೇಶ್ ಕುಮಾರ್!

|

ಬೆಂಗಳೂರು, ಜೂ. 09: ಜೀವನವೇ ಹಾಗೆ. ಎಲ್ಲಿಂದಲೊ ಶುರುವಾಗಿ ಮತ್ತೆಲ್ಲಿಗೊ ಬಂದು ನಿಲ್ಲುತ್ತೆ. ನಾಲ್ಕು ತಿಂಗಳುಗಳ ಹಿಂದೆ ಬೆಂಗಳೂರು ಸೇರಿದಂತೆ ಇಡೀ ಜಗತ್ತನ್ನು ಒಂದು ಬಾರಿ ನೆನಪಿಸಿಕೊಳ್ಳಿ. ಸಧ್ಯದ ಪರಿಸ್ಥಿತಿಯನ್ನು ಒಮ್ಮೆ ನೋಡಿ. ಎಲ್ಲವೂ ಅಯೋಮಯ. ಒಂದಕ್ಕೊಂದು ಸಂಬಂಧವೆ ಇಲ್ಲದಂತೆ.

   Sriramulu taking a break at a small shop video goes viral | Oneindia Kannada

   ಓಡು, ಓಡು, ಓಡಲೋ ಎಂಬಂತಿದ್ದ ಜೀವನ ವ್ಯಕ್ತಿ ಚಿಂತನೆಗೆ ಹಚ್ಚಿದೆ. ನಾವೇನು? ನಮ್ಮ ಇತಿಮಿತಿಗಳೇನೂ ಎಂಬುದನ್ನು ತೋರಿಸಿಕೊಟ್ಟಿದೆ. ಜಗತ್ತು ಮೊದಲಿನಂತೆ ಆಗದು, ಅದು ಸಾಧ್ಯವೂ ಇಲ್ಲ. ಇತಿಹಾಸದಲ್ಲಿ ಎಂದೂ ಎದುರಾಗದ ಗೊಂದಲ, ಅತಂತ್ರ ಸ್ಥಿತಿ ಮೊದಲ ಬಾರಿಗೆ ಎದುರಾಗುತ್ತಿವೆ. ಈ ರೀತಿಯ ಪರಿಸ್ಥಿತಿಗಳನ್ನು ಎದುರಿಸಿದ ಅನುಭವ ಯಾರಿಗೂ ಇಲ್ಲ. ನಲಿ-ಕಲಿ ಎಂದು ಆಡಿಕೊಂಡಿರಬೇಕಾಗಿದ್ದ ಮಕ್ಕಳನ್ನು ಲಾಕ್‌ಡೌನ್, ಕೊರೊನಾ ವೈರಸ್ ಭೀತಿ ಹಿಡಿದು ಹಾಕಿದೆ.

   ಚಿರು ಉಜ್ವಲ ಭವಿಷ್ಯ ಹೊಂದಿದ್ದ ಕಲಾವಿದ: ಬಿಎಸ್‌ವೈ ಸಂತಾಪ

   ಮುಂದೇನೂ ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ. ಹೀಗಿದ್ದಾಗ ಮೊನ್ನೆ ಅಕಾಲಿಕವಾಗಿ ಅಗಲಿದ ಯುವ ನಟ ಚಿರಂಜೀವಿ ಸರ್ಜಾ ಅವರು ಮಕ್ಕಳಿಗೆ ಆತ್ಮವಿಶ್ವಾಸ ತುಂಬಿದ್ದನ್ನು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹಂಚಿಕೊಂಡಿದ್ದಾರೆ.

   ಮಕ್ಕಳ ಅತಂತ್ರ ಸ್ಥಿತಿ

   ಮಕ್ಕಳ ಅತಂತ್ರ ಸ್ಥಿತಿ

   ಕೊರೊನಾ ವೈರಸ್ ಸೃಷ್ಟಿಸಿದ್ದ ಆತಂಕದಿಂದ ವಲಸೆ ಕಾರ್ಮಿಕರ ಸ್ಥಿತಿ ದಾರುಣವಾಗಿತ್ತು. ಅದೇ ರೀತಿ ಈಗ ಮಕ್ಕಳ ಸ್ಥಿತಿ ಅತಂತ್ರವಾಗಿದೆ. ಪಾಲಕರು ಅಗತ್ಯಕ್ಕಿಂತ ಹೆಚ್ಚು ಒತ್ತನ್ನು ಶಿಕ್ಷಣಕ್ಕೆ ಕೊಡುತ್ತಿದ್ದಾರೆ. ಹೀಗಾಗಿಯೇ ಶಿಕ್ಷಣ ವ್ಯಾಪಾರೀಕರಣವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಂತೂ ಶಿಕ್ಷಣವನ್ನು ಉದ್ಯಮವನ್ನಾಗಿ ಮಾಡಿಕೊಂಡಿವೆ. ಈ ಲಾಕ್‌ಡೌನ್, ಕೋವಿಡ್ ಸಂಕಷ್ಟದಲ್ಲಿಯೂ ಹಣ ಮಾಡುವುದಕ್ಕೆ ಮೊದಲ ಪ್ರಾಶಸ್ತ್ಯವನ್ನು ಕೆಲ ಶಿಕ್ಷಣ ಸಂಸ್ಥೆಗಳು ಕೊಟ್ಟಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಣ ಮಾಡಿಕೊಳ್ಳುವ ಒಂದೇ ಒಂದು ಉದ್ದೇಶದಿಂದ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಶುರುಮಾಡುವಷ್ಟು ಕೆಳಮಟ್ಟಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳು ಇಳಿದಿವೆ. ಇದೇ ಸಂದರ್ಭದಲ್ಲಿ ಯುವ ನಟ ಚಿರಂಜೀವಿ ಸರ್ಜಾ ಮಕ್ಕಳಿಗೆ ಆತ್ಮವಿಶ್ವಾಸ ತುಂಬಿದನ್ನು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹಂಚಿಕೊಂಡಿದ್ದಾರೆ.

   ಪೋಷಕರ ಅಭಿಪ್ರಾಯ

   ಪೋಷಕರ ಅಭಿಪ್ರಾಯ

   ಮಕ್ಕಳ ಭವಿಷ್ಯದ ಬಗ್ಗೆ ಸರ್ಕಾರವೂ ಆತಂಕಕ್ಕೆ ಈಡಾಗಿದೆ. ಶಾಲೆ ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವುದು ಸರ್ಕಾರಕ್ಕು ಆಗುತ್ತಿಲ್ಲ. ಹೀಗಾಗಿ ಮಕ್ಕಳ ಪೋಷಕರ ಅಭಿಪ್ರಾಯ ಸಂಗ್ರಹಕ್ಕೆ ಸರ್ಕಾರ ಮುಂದಾಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಸುತ್ತೋಲೆಯನ್ನು ಹೊರಡಿಸಿದೆ. ಪೋಷಕರ ಸಭೆಗಳನ್ನು ನಡೆಸುವಂತೆ ಆಯಾ ಶಾಲೆಗಳಿಗೆ ಸೂಚಿಸಲಾಗಿದೆ.

   ಜೂನ್ 20ರ ವೆರೆಗೆ ಪೋಷಕರ ಸಭೆಗಳನ್ನು ನಡೆಸಿ ವರದಿ ಕೊಡುವಂತೆ ಶಾಲೆಗಳಿಗೆ ಸೂಚಿಸಲಾಗಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಚಿರಂಜಿವಿ ಸರ್ಜಾ ಆತ್ಮವಿಶ್ವಾಸ ತುಂಬಿದ್ದನ್ನು ಶಿಕ್ಷಣ ಸಚಿವ ತಮ್ಮ ಫೇಸ್‌ಬುಕ್‌ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದಾರೆ.

   ವಿದ್ಯಾರ್ಥಿಗಳಿಗೆ ಚಿರು ಭರವಸೆ!

   ವಿದ್ಯಾರ್ಥಿಗಳಿಗೆ ಚಿರು ಭರವಸೆ!

   ಮೇ 20 ರಂದು ವಿಧ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಲು ಚಿರಂಜೀವಿ ಸರ್ಜಾ ಟ್ವೀಟ್ ಮಾಡಿದ್ದರು. ಅದನ್ನು ಸಚಿವ ಸುರೇಶ್ ಕುಮಾರ್ ತಮ್ಮ ಫೇಸ್‌ಬುಕ್‌ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದಾರೆ.

   ಕೊರೊನಾ ವೈರಸ್‌ನಿಂದ ಇಡೀ ಪ್ರಪಂಚವೇ ನಲುಗಿ ಹೋಗುತ್ತಿದೆ. ವಿದ್ಯಾರ್ಥಿಗಳೇ ಯಾವುದೇ ಭಯ, ಆತಂಕ ಬೇಡ. ವಿದ್ಯಾರ್ಥಿಗಳೇ ದೇಶದ ಆಧಾರಸ್ತಂಭಗಳು. 'ಮನೆಯೆ ಮೊದಲ ಪಾಠಶಾಲೆ' ಎಂಬ ಮಾತು ಈಗ ಸತ್ಯವಾಗಿದೆ. ಮನೆಯಲ್ಲಿಯೇ ಇದ್ದುಕೊಂಡು ಚೆನ್ನಾಗಿ ಓದಿ ಪರೀಕ್ಷೆಗೆ ಸಿದ್ಧರಾಗಿ. ನಿಮ್ಮೊಂದಿಗೆ ಇಡೀ ದೇಶವೇ ಕೈ ಜೋಡಿಸುತ್ತದೆ. ಜೈ ಆಂಜನೇಯ.. ಎಂದು ಟ್ವೀಟ್ ಮಾಡಿದ್ದನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಂಚಿಕೊಂಡಿದ್ದಾರೆ.

   ಸರ್ಜಾ ಕುಟುಂಬ

   ಸರ್ಜಾ ಕುಟುಂಬ

   ಇಂಥದ್ದೆ ಕಾರಣಕ್ಕಾಗಿ ಸರ್ಜಾ ಕುಟುಂಬ ಜನಮನ್ನಣೆಗೆ ಗಳಿಸಿದೆ. ಹಿಂದೆ ಅರ್ಜುನ್ ಸರ್ಜಾ ಅವರು ಕ್ಯಾಪಿಟೇಶನ್ ಶುಲ್ಕ, ಡೊನೇಶನ್ ಹಾವಳಿಯ ಬಗ್ಗೆ ಜಂಟಲ್‌ಮ್ಯಾನ್ ಎಂಬ ಸಿನೆಮಾ ತಯಾರಿಸಿದ್ದರು. ಡೊನೇಶನ್ ಪಿಡುಗಿನಿಂದ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುವುದು ಸಿನೆಮಾದ ಚಿತ್ರಕಥೆ. ಆ ಸಿನೆಮಾದಿಂದ ಅನೇಕ ವಿದ್ಯಾರ್ಥಿಗಳು, rank ಬಂದರೂ ವೈದ್ಯಕೀಯ, ಇಂಜನೀಯರಿಂಗ್ ಸೀಟ್‌ಸಿಗದವರು ಆತ್ವವಿಶ್ವಾಸದಿಂದ ಬದುಕುವಂತೆಬ ಪ್ರೇರಣೆ ಆಗಿತ್ತು. ಇದೀಗ ಅಂಥದ್ದೆ ಆತ್ಮವಿಶ್ವಾವನ್ನು ಚಿರಂಜೀವಿ ಸರ್ಜಾ ವಿದ್ಯಾರ್ಥಿಗಳಿಗೆ ತುಂಬಿದ್ದನ್ನು ಸುರೇಶ್ ಕುಮಾರ್ ನೆನಪಿಸಿಕೊಮಡಿದ್ದಾರೆ!.

   English summary
   Suresh Kumar shared on his Facebook page that Chiranjeevi Sarja had tweeted to the students during the lockdown.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X