ಸಾಲ ಮನ್ನಾ ಮಾಡುವುದು ಕಷ್ಟ ಅನ್ನೋದು ಅಂಬರೀಶ್‌ಗೆ ಗೊತ್ತಿತ್ತು: ಸುಮಲತಾ
ಬೆಂಗಳೂರು, ಏ.4: ರಾಜ್ಯದ ರೈತರ ಸಾಲಮನ್ನಾ ಮಾಡುವುದು ಕಷ್ಟ ಎಂದು ಅಂಬರೀಶ್‌ಗೆ ಮೊದಲೇ ಗೊತ್ತಿತ್ತು ಎಂದು ಮಂಡ್ಯ ಲೋಕಸಭೆ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಪ್ರೆಸ್‌ಕ್ಲಬ್ ಆಫ್ ಬೆಂಗಳೂರು ಗುರುವಾರ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣೆ ಕುರಿತ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರೈತರ ಸಾಲಮನ್ನಾ ಮಾಡೋಕೆ ಆಗಲ್ಲ ಎಂದು ಅಂಬರೀಶ್ ಅವರಿಗೆ ಸರ್ಕಾರದ ಹಣಕಾಸು ಕಾರ್ಯದರ್ಶಿ ಹೇಳಿದ್ದರು.
ಅಲ್ಲದೇ ರಾಜ್ಯ ಬೊಕ್ಕಸದಲ್ಲಿ ಅಷ್ಟು ದುಡ್ಡಿಲ್ಲ, ರಾಜ್ಯದ ನೌಕರರ ಸಂಬಳ ಕೊಡಲು ಹಣ ಇಲ್ಲ, ಸಾಲ ತೀರಿಸಲು ಹಣ ಎಲ್ಲಿ ತರುತ್ತಾರೆ ಎಂದು ನಿಮ್ಮ ಸ್ನೇಹಿತರಿಗ ತಿಳಿಸಿ ಎಂದೂ ಕೂಡ ಹೇಳಿದ್ದರು.

ಕೇಂದ್ರ ಮಂತ್ರಿಯಾಗಿ ಅಂಬರೀಶ್ ಎರಡು ತಿಂಗಳು ಮಾತ್ರ ಇದ್ದರೂ ಉತ್ತಮ ಸಾಧನೆ ಮಾಡಿದ್ದಾರೆ. ಇದನ್ನು ಮಂಡ್ಯದಲ್ಲಿ ಬಹಳ ಜನ ಹೇಳುತ್ತಾರೆ. ಇದು ಇದು ಸುಳ್ಳು ಆಶ್ವಾಸನೆ ಆಗುತ್ತೆ ಎಂದು ಹೇಳಿದ್ದರು ಎಂದು ಸುಮಲತಾ ವಿವರಿಸಿದರು.
ಆದರೆ ದೇವೇಗೌಡರು ಹಿರಿಯರು, ತಂದೆ ಸಮಾನ. ಅಂಬರೀಶ್ ಸ್ಪರ್ಧೆ ಮಾಡಿದಾಗ ದೇವೇಗೌಡರು ಅವರ ವಿರುದ್ಧ ಪ್ರಚಾರ ಮಾಡಿದ್ದಾರೆ. ಆದರೆ ಅಂದು ಅವರು ಎಂದು ವಿರುದ್ಧ ಮಾತನಾಡಿಲ್ಲ. ಈಗಲೂ ದೇವೇಗೌಡರು ನಮ್ಮ ವಿರುದ್ಧ ಮಾತನಾಡಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಜೆಡಿಎಸ್ ನಾಯಕರ ಟೀಕೆಗೆ ಉತ್ತರಿಸಲ್ಲ ಎಂದರು.












Click it and Unblock the Notifications