ವಿಮಾನ ನಿಲ್ದಾಣಕ್ಕೆ ಸಂರ್ಪಕ ಕಲ್ಪಿಸುವ ಮಾರ್ಗ ನೀವೇ ಸೂಚಿಸಿ!
ಬೆಂಗಳೂರು, ಸೆ.19: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋ ಮಾರ್ಗವನ್ನು ಸಾರ್ವಜನಿಕರೇ ಸೂಚಿಸಬಹುದು.
ರೇಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕಾನಾಮಿಕ್ ಸರ್ವೀಸ್ (ರೈಟ್ಸ್) ಸಂಸ್ಥೆಯು ಒಂಭತ್ತು ಪರ್ಯಾಯ ಮಾರ್ಗಗಳನ್ನು ನೀಲನಕ್ಷೆಯನ್ನು ದಾಖಲಿಸಿ ಕಾರ್ಯ ಸಾಧನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.

ಸಾರ್ವಜನಿಕರ ಪ್ರತಿಕ್ರಿಯೆ ಪಡೆಯಲು ಈ ಮಾಹಿತಿಯನ್ನು ಅಂತರ್ಜಾಲ ತಾಣದಲ್ಲಿ ಪ್ರಕಟಿಸಲಾಗಿದ್ದು, ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. [ಮೆಟ್ರೋದಲ್ಲಿ ಪ್ರತಿದಿನ 15 ಲಕ್ಷ ಪ್ರಯಾಣಿಕರ ಸಂಚಾರ ಸಾಧ್ಯ!]

ಸಾರ್ವಜನಿಕ ಅಭಿಪ್ರಾಯ ಪಡೆದು ಸಾಧಕ-ಬಾಧಕಗಳನ್ನು ಪರಿಶೀಲಿಸಿ ಈ ನಿಟ್ಟಿನಲ್ಲಿ ಮುಂದಿನ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ನಡುವೆ ಬಸವೇಶ್ವರ ವೃತ್ತದಿಂದ ಹೆಬ್ಬಾಳವರೆಗಿನ 1800 ಕೋಟಿ ರೂ ಯೋಜನಾ ವೆಚ್ಚದ ಉಕ್ಕಿನ ಮೇಲ್ಸೇತುವೆ ರಸ್ತೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆಗೆ ಚಾಲನೆ ದೊರೆತಿದೆ ಎಂದು ಸರ್ಕಾರ ಪ್ರಕಟಿಸಿದೆ.[ಮೆಟ್ರೋ ಮೊದಲನೇ ಹಂತ ಮಾರ್ಚ್ 2017ಕ್ಕೆ ಪೂರ್ಣ]


ಎಲ್ಲ ಒಂಭತ್ತು ಮಾರ್ಗಗಳ ನಕ್ಷೆಗಳನ್ನು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿರುವ ಬಿಎಂಆರ್ ಸಿಎಲ್, ಈ ಕುರಿತು ಜನರ ಆಯ್ಕೆ ಆಧರಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಉದ್ದೇಶಿತ ಮಾರ್ಗಗಳ ಸರಾಸರಿ ದೂರ 30 ಕಿ.ಮೀ ನಷ್ಟಿದೆ. ಈ ಯೋಜನೆಯ ಅಂದಾಜು ವೆಚ್ಚ 4,500 ಕೋಟಿ ರು ನಿಂದ 7,000 ಕೋಟಿ ರು ಆಗುವ ನಿರೀಕ್ಷೆಯಿದೆ.

ಬಿಎಂಆರ್ ಸಿಎಲ್ ತನ್ನ ಎರಡನೇ ಹಂತದ ಯೋಜನೆ ಹಾಗೂ ಔಟರ್ ರಿಂಗ್ ರೋಡ್ ಯೋಜನೆ ಅಥವಾ ಮೂರನೇ ಹಂತದ ಯೋಜನೆ ಕೈಗೆತ್ತಿಕೊಳ್ಳುವಾಗ ಈ ಯೋಜನೆಯೂ ಕಾರ್ಯಗತವಾಗಲಿದೆ.

72 ಕಿ.ಮೀ ದೂರದ ಮೆಟ್ರೋ ಎರಡನೇ ಹಂತದ ಕಾಮಗಾರಿ ಈಗ ದೊಡ್ಡ ಚಾಲೆಂಜ್ ಆಗಿದೆ.

ಈ ಬಗ್ಗೆ ನಿಮ್ಮ ಸಲಹೆ ಏನಾದರೂ ಇದ್ದರೆ ಬಿಎಂ ಆರ್ ಸಿಎಲ್ ಎಗೆ ಇಮೇಲ್ ಮಾಡಬಹುದು.

(ಒನ್ಇಂಡಿಯಾ ಸುದ್ದಿ)












Click it and Unblock the Notifications