AI ತಂತ್ರಜ್ಞಾನ ಆಧಾರಿತ Podಗೆ ಡಾ. ಸುಧಾಕರ್ ಚಾಲನೆ

ಬೆಂಗಳೂರು, ಆಗಸ್ಟ್ 20: ವೆವ್ರ ಸಂಸ್ಥೆ ಮತ್ತು ಪೋರ್ಚುಗೀಸ್ ನ ಇನೋವೇವ್ ಗ್ರೂಪ್ ಸಹಯೋಗದಲ್ಲಿ ಆರಂಭಿಸಿರುವ ಹೆಲ್ತ್ ಕೇರ್ ಪಾಡ್ ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಚಾಲನೆ ನೀಡಿದರು. ನಗರದಲ್ಲಿ ಆನ್ ಲೈನ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಸಚಿವ ಡಾ.ಕೆ.ಸುಧಾಕರ್ ಅವರು ಪಾಲ್ಗೊಂಡು ವೆವ್ರ ಪಾಡ್ ಸೌಲಭ್ಯವನ್ನು ಉದ್ಘಾಟಿಸಿದರು.

Recommended Video

      ಟ್ರಂಪ್ ವಿರುದ್ಧ ಅಖಾಡಕ್ಕಿಳಿದ ಒಬಾಮ | Oneindia Kannada

      ನಂತರ ಮಾತನಾಡಿದ ಸಚಿವರು, "ಈ ಪಾಡ್ ಗಳು ಚಲಿಸುವ ಆಸ್ಪತ್ರೆಯಂತಿದ್ದು, ಎಲ್ಲಿ ಬೇಕಾದರೂ ಅಳವಡಿಸಬಹುದಾಗಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಒಳಗೊಂಡಿರುವ ಈ ವ್ಯವಸ್ಥೆಯಿಂದ ರೋಗ ಹರಡುವಿಕೆಯನ್ನು ತಡೆಗಟ್ಟಬಹುದಾಗಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಸುಧಾರಣೆಯನ್ನೇ ತರಬಹುದು. ತಂತ್ರಜ್ಞಾನ ಕ್ಷೇತ್ರದ ನವೋದ್ಯಮಗಳು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಜನರಿಗೆ ಸೌಲಭ್ಯಗಳನ್ನು ಮಾಡಿಕೊಡುವ ಪ್ರಯತ್ನ ಮಾಡಬೇಕು" ಎಂದು ಕಿವಿಮಾತು ಹೇಳಿದರು.

      Sudhakar launches AI based Healthcare Pods by Vevra and InnoWave Group

      ಕಾರ್ಯಕ್ರಮದಲ್ಲಿ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್, ಎಂಸಿಐ ಸದಸ್ಯ ಡಾ.ವಿವೇಕ್ ಜವಳಿ ಪಾಲ್ಗೊಂಡಿದ್ದರು. ಒಂದು ಪಾಡ್ ನಲ್ಲಿ 4 ರಿಂದ 9 ಹಾಸಿಗೆಗಳಿರುತ್ತವೆ. ಈ ಪಾಡ್ ಗಳನ್ನು ಅಳವಡಿಸಲು 500 ಚದರ ಅಡಿ ಜಾಗ ಬೇಕಾಗುತ್ತದೆ. ಇವುಗಳನ್ನು ಆಸ್ಪತ್ರೆ, ಪಾರ್ಕಿಂಗ್ ಅಥವಾ ಯಾವುದೇ ಸುರಕ್ಷಿತವಾದ ಜಾಗದಲ್ಲಿ ಅಳವಡಿಸಬಹುದು.

      Sudhakar launches AI based Healthcare Pods by Vevra and InnoWave Group

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+