ರಾಜ್ಯದಲ್ಲಿ ವಿದ್ಯುತ್ ಕೊರತೆಗೆ ಕಡಿವಾಣ: ಡಿಕೆಶಿ
ಸದನದಲ್ಲಿ ಶಾಸಕ ಅರವಿಂದ್ ಲಿಂಬಾವಳಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ರಾಜ್ಯದಲ್ಲಿ ದೈನಂದಿನ ಬಳಕೆಗೆ ಲಭ್ಯವಾಗುವ ವಿದ್ಯುತ್ತಿನ ಪ್ರಮಾಣವನ್ನಾಧರಿಸಿ ಸರ್ಕಾರ ವಿದ್ಯುತ್ ಪೂರೈಕೆಯ ಅವಧಿಯನ್ನು ಘೋಷಿಸುತ್ತದೆ ಎಂದರು.
ಬೆಂಗಳೂರು, ಮಾರ್ಚ್ 25: ರಾಜ್ಯದಲ್ಲಿ ದೈನಂದಿನ ಬಳಕೆಗೆ ಲಭ್ಯವಾಗುವ ವಿದ್ಯುತ್ತಿನ ಪ್ರಮಾಣವನ್ನಾಧರಿಸಿ ಸರ್ಕಾರ ವಿದ್ಯುತ್ ಪೂರೈಕೆಯ ಅವಧಿಯನ್ನು ಘೋಷಿಸುತ್ತದೆ ಎಂದು ಇಂಧನ ಸಚಿವ ಡಿಕೆಶಿ ಹೇಳಿದರು.
ಮಾರ್ಚ್ 24 ರಂದು ಸದನಲ್ಲಿ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ವಿದ್ಯುತ್ ಸರಬರಾಜು ಮಾಡುವ ನಿಟ್ಟಿನಲ್ಲಿ ಸರ್ಕಾರವು ದಿನಬಳಕೆಯ ವಿದ್ಯುತ್ ಪ್ರಮಾಣವನ್ನಾಧರಿಸಿ ವಿದ್ಯುತ್ ಪೂರೈಕೆಯ ಅವಧಿಯನ್ನು ಘೋಷಣೆ ಮಾಡುತ್ತದೆ ಎಂದರು.[ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್, ಘೋಷಣೆ ಬಾಕಿ!]

ನಗರ - ಪಟ್ಟಣಗಳಲ್ಲಿ 22-24 ಗಂಟೆ, ಗ್ರಾಮೀಣ ಪ್ರದೇಶದಲ್ಲಿ 3 ಫೇಸ್ ವಿದ್ಯುತ್ ಅನ್ನು 7 ಗಂಟೆಗಳ ಕಾಲ ಬ್ಯಾಚ್ ಗಳಲ್ಲಿ ಸಂಜೆ 6 ರಿಂದ ಬೆಳಗ್ಗೆ 6 ವರೆಗೆ, 10 ಗಂಟೆಗಳ ಸಿಂಗಲ್ ಫೇಸ್ ವಿದ್ಯುತ್ತನ್ನು ಪೂರೈಸಲಾಗುತ್ತಿದೆ. ಉದ್ಯುತ್ ಘಟಕಗಳು ಸ್ಥಗಿತವಾದಾಗ ಮಾರ್ಗಗಳ ಅಡಚಣೆಯಿಂದ ಕೆಲವೊಮ್ಮೆ ವ್ಯತ್ಯಯ ಉಂಟಾಗುತ್ತದೆ ಎಂದು ಕನಕಪುರ ಶಾಸಕ ಡಿಕೆಶಿ ಹೇಳಿದರು.[ಅಧಿವೇಶನದಲ್ಲಿ ವಿದ್ಯುತ್ ದರ ಏರಿಕೆ ಸುಳಿವು ನೀಡಿದ ಡಿಕೆಶಿ!]
ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಶಾಲಾ-ಕಾಲೇಜುಗಳ ಪರೀಕ್ಷೆಗಳು ಪ್ರಾರಂಭವಾಗಿದ್ದು, ಮಕ್ಕಳ ಹಿತದೃಷ್ಟಿಯಿಂದ ಸಮರ್ಪಕ ವಿದ್ಯುತ್ ಪೂರೈಸಲು ರಾಜ್ಯ ಸರ್ಕಾರ ಮುಂಜಾಗ್ರತೆಕ್ರಮ ತೆಗೆದುಕೊಂಡಿದೆ. ಮೂರು ವರ್ಷಗಳಿಂದ ಸತತ ಬರಗಾಲವಿದ್ದ ಕಾರಣ ವಿದ್ಯುತ್ ಉತ್ಪಾದನೆ ಲಭ್ಯತೆ ಕಡಿಮೆ ಇದ್ದು, ಬೇಡಿಕೆಯನ್ನಾಧರಿಸಿ ವಿದ್ಯುತ್ ಖರೀದಿಸಿ ಕೊರತೆಯನ್ನು ಸರಿದೂಗಿಸಲಾಗುತ್ತಿದೆ ಎಂದವರು ಹೇಳಿದರು.[ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ: ಡಿಕೆ ಶಿವಕುಮಾರ್]
ದೀರ್ಘಾವಧಿ ಆಧಾರದಲ್ಲಿ ದಾಮೋದರ್ ವ್ಯಾಲಿ ಕಾರ್ಪೊರೇಷನ್ ನಿಂದ 450 ಮೆ.ವ್ಯಾ., ಮಹಾರಾಷ್ಟ್ರದಿಂದ ಮೇ 2017 ರವರೆಗೆ 300 ವೆ.ವ್ಯಾ., ಮೇ 2017 ರವರೆಗೆ ಮೆ. ಪಿಟಿಸಿ ಇಂಡಿಯಾ ಲಿ. ಮತ್ತು ಮೆ: ಜೆಎಸ್ ಡಬ್ಲ್ಯು ಎನರ್ಜಿ ಲಿ. ಅವರಿಂದ 900 ಮೆ. ವ್ಯಾ. ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.












Click it and Unblock the Notifications