Get Updates
Get notified of breaking news, exclusive insights, and must-see stories!

ಕನ್ನಡನಾಡಿನ ಹಳೇ ಆಟೋರಿಕ್ಷಾಗಳನ್ನು ಗುಜರಿ ಮಾಡಲು ಸರಕಾರದ ಚಿಂತನೆ!

ಬೆಂಗಳೂರು, ಡಿಸೆಂಬರ್ 05 : ಈಗಾಗಲೇ ಟು ಸ್ಟ್ರೋಕ್ ಆಟೋ ರಿಕ್ಷಾವನ್ನು ನಿ‍ಷೇಧಿಸಲು ಸಾರಿಗೆ ಇಲಾಖೆ ಆಲೋಚಿಸಿದೆ ಅದರ ಬೆನ್ನಲೇ ಹಳೆಯ ಆಟೋರಿಕ್ಷಾಗಳನ್ನು ರದ್ದುಗೊಳಿಸಲು ನಿರ್ಧರಿಸಿರುವ ವಿಚಾರ ಆಟೋ ಚಾಲಕರನ್ನು ಆತಂಕಕ್ಕೀಡು ಮಾಡಿದೆ.

ಹಳೆಯ ಆಟೋ ರಿಕ್ಷಾವನ್ನು ರದ್ದುಗೊಳಿಸಲು ಎರಡು ಕೇಂದ್ರಗಳನ್ನು ತೆರೆದಿರುವ ಸರ್ಕಾರ ನೂತನ ಆಟೋವನ್ನು ಖರೀದಿಸಲು 30,000 ಸಾವಿರ ಸಬ್ಸಿಡಿ ನೀಡಲು ನಿರ್ಧರಿಸಿದೆ. ವಾಯು ಮಾಲಿನ್ಯ ನಿಯಂತ್ರಿಸಿ ಉತ್ತಮ ಪರಿಸರವನ್ನು ಸೃಷ್ಟಿಸುವ ಸಲುವಾಗಿ ಮಾಲಿನ್ಯ ಭರಿತ ವಾಹನಗಳನ್ನು ಬದಲಾಯಿಸಿಕೊಳ್ಳಲು ವಾಹನ ಚಾಲಕರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 30 ಕೋಟಿ ಬಿಡುಗಡೆ ಮಾಡಲಿದೆ ಎಂದು ಸಿದ್ದರಾಮಯ್ಯ ಅವರು 2017ರ ಆರಂಭದಲ್ಲೇ ಘೋಷಿಸಿದ್ದರು.

State Government Assistance 30thousand for four stroke Autorickshaw

ಆದರೆ ಹೊಸ ನಾಲ್ಕು ಸ್ಟ್ರೋಕ್ ಆಟೋಗಳಿಗೆ ಸುಮಾರು 1.5 ಲಕ್ಷ ರೂ. ಆಗುತ್ತಿದ್ದು ಅದನ್ನು ಖರೀದಿಸಲು ಕಷ್ಟವಾಗುತ್ತಿದೆ ಎಂದು ಚಾಲಕರು ಹೇಳುತ್ತಾರೆ. ರದ್ದುಗೊಳಿಸಲು ನಾವು ಆಟೋರಿಕ್ಷಾವನ್ನು ಪಡೆದುಕೊಳ್ಳುತ್ತೇವೆ. ಸಂಪೂರ್ಣ ರದ್ದು ಮಾಡಲು 2 ಸ್ಟ್ರೋಕ್ ಗಳ ಆಟೋಗಳನ್ನು ಕಡಿಮೆ ಮಾಡಲಿದೆ. 2 ಸ್ಟ್ರೋಕ್ ಆಟೋಗಳ ದಾಖಲಾತಿಯನ್ನು ಸಂಪೂರ್ಣ ನಿಷೇಧಿಸಿದ ನಂತರ ಚಾಲಕರಿಗೆ ಸಬ್ಸಿಡಿ ನೀಡಲಾಗುತ್ತದೆ.

ಬೆಂಗಳೂರು ನಗರದಲ್ಲಿ ಸುಮಾರು 50 ಸಾವಿರದಷ್ಟು ಎರಡು ಸ್ಟ್ರೋಕ್ ಆಟೋ ರಿಕ್ಷಾಗಳಿದ್ದು ರಾಜ್ಯದಲ್ಲಿ ಸೂಮಾರು 1.29 ಲಕ್ಷಗಳಿವೆ. 2013 ರವರೆಗೆ ಸಬಸ್ಇಡಿ ಮೊತ್ತ 15,000 ಆಗಿತ್ತು ಅದನ್ನು 30 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಆದರೆ ಸಬ್ಸಿಡಿ ಮೊತ್ತ ಬರುವಾಗ ಬಹಳ ಸಮಯವಾಗುತ್ತದೆ ಎಂದು ವಾಹನ ಚಾಲಕರು ಹೇಳುತ್ತಾರೆ. ಈ ಸಮಯದಲ್ಲಿ ನಾವು ಡೌನ್ ಪೇಯ್ ಮೆಂಟ್ ಮಾಡುವುದು ಹೇಗೆ ಎನ್ನುವುದು ವಾಹನ ಚಾಲಕರ ಪ್ರಶ್ನೆಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+