ಬಸವನಗುಡಿ ಶಾಪಿಂಗ್ ಫೆಸ್ಟಿವಲ್ ಗೆ ಸಿದ್ಧರಾಗಿ

ಪ್ರತಿ ವರ್ಷದಂತೆ ಈ ಬಾರಿಯು ಬಸವನಗುಡಿ ಶಾಪಿಂಗ್ ಫೆಸ್ಟಿವಲ್ ನಡೆಯಲಿದೆ. 8ನೇ ವರ್ಷದ ಶಾಪಿಂಗ್ ಫೆಸ್ಟಿವಲ್ ಗೆ ಅ.6ರ ಭಾನುವಾರ ಚಾಲನೆ ದೊರೆಯಲಿದೆ. ಬಿಬಿಎಂಪಿ ಮೇಯರ್ ಕಟ್ಟೆ ಸತ್ಯನಾರಾಯಣ, ಶಾಸಕ ರವಿ ಸುಬ್ರಮಣ್ಯ ಫೆಸ್ಟಿವಲ್ ಉದ್ಘಾಟಿಸಲಿದ್ದಾರೆ.
ಚಿತ್ರನಟಿ ಶುಭಾ ಪೂಂಜಾ ಈ ಬಾರಿಯ ಬಸವನಗುಡಿ ಶಾಪಿಂಗ್ ಫೆಸ್ಟಿವಲ್ ರಾಯಭಾರಿ. ಮಯ್ಯಾಸ್ ಹೋಟೆಲ್ ಗ್ರೂಪ್ ಅಧ್ಯಕ್ಷ ಸದಾನಂ ಮಯ್ಯ, ಅದ್ವೈತ್ ಮೋಟಾರ್ಸ್ ನ ಗುಪ್ತಾ, ಉದ್ಘಾಟನಾ ಕಾರ್ಯಕ್ರದಲ್ಲಿ ಭಾಗವಹಿಸಲಿದ್ದಾರೆ.
ನ.10ರ ವರರೆಗೆ ಶಾಂಪಿಗ್ ಫೆಸ್ಟಿವಲ್ ನಡೆಯಲಿದೆ. ಈ ಸಂದರ್ಭದಲ್ಲಿ ಖರೀದಿ ಮಾಡುವ ಗ್ರಾಹಕರಿಗೆ ಕೂಪನ್ ಗಳನ್ನು ನೀಡಲಾಗುತ್ತದೆ. ಲಕ್ಕಿ ಡ್ರಾ ಕೂಪನ್ ಗಳು 8 ಲಕ್ಷ ರೂ.ಗಳ ಬಹುಮಾನ ಮೊತ್ತವನ್ನು ಹೊಂದಿವೆ.
ಶಾಪಿಂಗ್ ಫೆಸ್ಟಿವಲ್ ಗಾಗಿ ಡಿವಿಜಿ ರಸ್ತೆಯನ್ನು ದೀಪಾಲಂಕಾರಗಳಿಂದ ಅಲಂಕಾರ ಮಾಡಲಾಗಿದೆ. ರಸ್ತೆಗೆ ಹ್ಯಾಪಿ ಮಾಲ್ ಸ್ಟ್ರೀಟ್ ಎಂದು ಹೆಸರಿಡಲಾಗಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಶಾಪಿಂಗ್ ಫೆಸ್ಟಿವಲ್ ಸಂದರ್ಭದಲ್ಲಿ ಮಕ್ಕಳಿಗೆ ತಿಂಡಿ ಮತ್ತು ಬಲೂನ್ ಅನ್ನು ಉಚಿತವಾಗಿ ನೀಡಲು ಉದ್ದೇಶಿಸಲಾಗಿದೆ ಎಂದು ಶಾಪಿಂಗ್ ಫೆಸ್ಟಿವಲ್ ಅಧ್ಯಕ್ಷ ಮತ್ತು ಸಾಯಿ ಗೋಲ್ಟ್ ಪ್ಯಾಲೇಸ್ ಮಾಲೀಕ ಟಿ.ಎ.ಶರವಣ ಹೇಳಿದ್ದಾರೆ.












Click it and Unblock the Notifications