• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಸವನಗುಡಿಯಲ್ಲಿ ಕೃಷ್ಣ ಜನ್ಮಾಷ್ಟಮಿ, ಲೀಲೋತ್ಸವ

By Vanitha
|

ಬೆಂಗಳೂರು, ಸೆ, 03 : ಶ್ರಾವಣ ಮಾಸದಲ್ಲಿ ಆಚರಿಸಲ್ಪಡುವ ಮತ್ತೊಂದು ಪ್ರಮುಖ ಹಬ್ಬವೇ ಶ್ರೀ ಕೃಷ್ಣ ಜನ್ಮಾಷ್ಟಮಿ. ಕೃಷ್ಣನ ಪುಟಾಣಿ ಹೆಜ್ಜೆಗಳನ್ನು ನೆನಪಿಸುವ ಈ ಹಬ್ಬದ ಪ್ರಯುಕ್ತ ನಾಡಿನಾದ್ಯಂತ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತಾದಿಗಳು ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಗರದ ಉಡುಪಿ ಶ್ರೀ ಪುತ್ತಿಗೆ ಮಠದ ಶ್ರೀ ಗೋವರ್ಧನ ಕ್ಷೇತ್ರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಕೃಷ್ಣ ಲೀಲೋತ್ಸವವನ್ನು ಅದ್ದೂರಿಯಾಗಿ ನಡೆಸಲು ಎಲ್ಲಾ ಏರ್ಪಟುಗಳನ್ನು ಮಾಡಿಕೊಂಡಿದೆ.[World premier of 'ಕೃಷ್ಣಂ ವಂದೇ ಜಗದ್ಗುರುಂ...']

ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ಈ ಪ್ರಮುಖ ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಂಡಿದ್ದು, ಕೃಷ್ಣ ಜನ್ಮಾಷ್ಟಮಿ ಸೆಪ್ಟೆಂಬರ್ 5 ರ ಶನಿವಾರ ಮತ್ತು ಸೆಪ್ಟೆಂಬರ್ 6 ರ ಭಾನುವಾರ ಕೃಷ್ಣ ಲೀಲೋತ್ಸವ ನಡೆಯಲಿದೆ, ಅಲ್ಲದೇ 5 ರ ಶನಿವಾರ ಮುಂಜಾನೆ 6 ಗಂಟೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಸೆಪ್ಟೆಂಬರ್ 5 ರ ಧಾರ್ಮಿಕ ಕಾರ್ಯಕ್ರಮಗಳು :

ಮಧ್ಯಾಹ್ನ 2.30 - ಎಂ. ಎಸ್ ಗಿರಿಧರ್ ಮತ್ತು ಬಳಗದಿಂದ ಗೋವರ್ಧನ ಸ್ಮರಣೆ
ಮಧ್ಯಾಹ್ನ 3.45 - ಎಂ.ಎಸ್ ಗಿರಿಧರ್ ಅವರಿಂದ ದಾಸ ಚಿಂತನ ಮತ್ತು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು
ಸಂಜೆ 6 - ಗಂಗಾವತಿ ಪ್ರಾಣೇಶ್ ಅವರಿಂದ ಹಾಸ್ಯ ರಸಾಯನ ಕಾರ್ಯಕ್ರಮ
ಸಂಜೆ 7.15 - ಸುಧೀರ್ ಮತ್ತು ಮಾನಸಿ ಅವರಿಂದ ನೃತ್ಯೋತ್ಸವ

ಸೆಪ್ಟೆಂಬರ್ 6 ರ ಧಾರ್ಮಿಕ ಕಾರ್ಯಕ್ರಮಗಳು :

ಬೆಳಿಗ್ಗೆ ದೇವಾಲಯದ ಪ್ರಾಂಗಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು
ಮಧ್ಯಾಹ್ನ 2.30 - ಶ್ರೀಕೃಷ್ಣ ಛದ್ಮವೇಷ ಸ್ಪರ್ಧೆ
ಸಂಜೆ 5 - ಶ್ರೀಕೃಷ್ಣ ಲೀಲೋತ್ಸವ
ಸಂಜೆ 6 - ಮೊಸರು ಕುಡಿಕೆ, ವಾಲಗ ಮಂಟಪ ಪೂಜೆ, ಅಷ್ಟಾವಧಾನ, ಮಹಾ ಮಂಗಳಾರತಿ, ಪ್ರಸಾದ ವಿತರಣೆ

ಹೆಚ್ಚಿನ ಮಾಹಿತಿಗಾಗಿ :

ಶ್ರೀ ಗೋವರ್ಧನ ಕ್ಷೇತ್ರ, ಪುತ್ತಿಗೆ ಮಠ, ಬುಲ್ ಟೆಂಪಲ್ ರಸ್ತೆ, ಬಸವನಗುಡಿ, ಬೆಂಗಳೂರು
ಮೊ. ನಂ : 9845820775

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬೆಂಗಳೂರು ಸುದ್ದಿಗಳುView All

English summary
Udupi Sri Puttige Math has organizes Sri Krishna Janmashtami(September 5th) and Krishna Lilotsava (September 6th)in Sri Govardana kshetra, Sri Puttige math, Bull Temple Road, Basavanagudi, Bengaluru. Many religional programme and Fancy dress Competation on Lord Krishna.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more