BMTC: ಬಸ್‌ ಆಕ್ಸಿಡೆಂಟ್‌ ತಪ್ಪಿಸಲು ನೆರವಾಗ್ತಿದೆ ಪೊಲೀಸರ ಈ ಪ್ಲ್ಯಾನ್‌

ಸಿಲಿಕಾನ್‌ ಸಿಟಿ ಬೆಂಗಳೂರು ಟ್ರಾಫಿಕ್‌ ಜಾಮ್‌ನಲ್ಲಿ ಖ್ಯಾತಿ ಪಡೆದಿರುವುದು ಒಂದೆಡೆಯಾದರೆ, ಈ ನಡುವೆ ಅಪಘಾತಗಳು ಕೂಡ ಮಿತಿಮೀರಿ ನಡೆಯುತ್ತಲೇ ಇರುತ್ತವೆ. ಇದಕ್ಕಾಗಿ ಬೆಂಗಳೂರು ಟ್ರಾಫಿಕ್‌ ಪೊಲೀಸರು ವಿಶೇಷ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಅಪಘಾತಗಳು ಹೆಚ್ಚಾಗುವುದಕ್ಕೆ ಕಾರಣವನ್ನೂ ಪತ್ತೆ ಹಚ್ಚಿದ್ದಾರೆ.

ಮೂಲಗಳ ಪ್ರಕಾರ ಬೆಂಗಳೂರಿಗರ ಜೀವನಾಡಿ ಬಿಎಂಟಿಸಿ ಬಸ್‌ಗಳಿಂದಲೂ ಅಪಘಾತಗಳು ಸಂಭವಿಸುತ್ತಿರುವುದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಸಂಚಾರ ಪೊಲೀಸರು ಬಿಎಂಟಿಸಿ ಡ್ರೈವರ್‌ಗಳು ಹಾಗೂ ಕಂಡಕ್ಟರ್‌ಗಳಿಗೆ ವಿಶೇಷ ತರಬೇತಿ ನೀಡುತ್ತಿದ್ದಾರೆ.

Special Training By Bangalore Traffic Police To Prevent Accidents Of BMTC Buses

ಕಳೆದ ಒಂಬತ್ತು ತಿಂಗಳಿಂದ ಬಿಎಂಟಿಸಿ ಅವರಿಗೆ ಪೊಲೀಸರು ವಿಶೇಷ ತರಬೇತಿ ನೀಡುತ್ತಿದ್ದು, ಇದರಿಂದ ಬಸ್‌ಗಳ ಅಪಘಾತಗಳು ಕೂಡ ಕಡಿಮೆಯಾಗಿದೆ ಎಂದು ವರದಿಯಾಗಿದೆ. ಸಂಚಾರ ಪೊಲೀಸರು ಹೇಳುವಂತೆ, ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಬಿಎಂಟಿಸಿ ಬಸ್‌ಗಳಿಂದ 19 ಅಪಘಾತಗಳಷ್ಟೇ ವರದಿಯಾಗಿದೆ. ಹಿಂದಿನ ವರ್ಷಗಳಲ್ಲಿ ಇದರ ಪ್ರಮಾಣ ಜಾಸ್ತಿ ಇತ್ತು.

ಇನ್ನು ಪೊಲೀಸರು ಇಲ್ಲಿಯವರೆಗೆ 8,000ಕ್ಕೂ ಹೆಚ್ಚು ಸಿಬ್ಬಂದಿಗೆ ಈ ತರಬೇತಿ ನೀಡಿದ್ದು, 12,000 ಸಿಬ್ಬಂದಿಗೆ ತರಬೇತಿ ನೀಡುವ ಗುರಿ ಹೊಂದಿದ್ದಾರೆ. ಸಿಬ್ಬಂದಿ ಸುಮಾರು ಹನ್ನೆರಡು ಗಂಟೆಗಳ ಕಾಲ ಡ್ಯೂಟಿ ಮಾಡುತ್ತಾರೆ. ದೂರದ ಜಿಲ್ಲೆಗಳಿಂದ ಬಂದು ಇಲ್ಲಿ ಕೆಲಸ ಮಾಡುತ್ತಾರೆ. ಟ್ರಾಫಿಕ್‌ ಜಾಮ್‌ ನಡುವೆ ಬಸ್‌ ಓಡಿಸುತ್ತಾ ಹೆಚ್ಚು ಆಯಾಸಕ್ಕೂ ಒಳಗಾಗುತ್ತಾರೆ. ಹಾಗಾಗಿ ಅಚಾನಕ್‌ ಆಗಿ, ಕೆಲವು ಸ್ಥಳಗಳಲ್ಲಿ ಅಪಘಾತಗಳು ಸಂಭವಿಸುತ್ತವೆ ಎನ್ನಲಾಗಿದೆ.

Special Training By Bangalore Traffic Police To Prevent Accidents Of BMTC Buses

ಇದರ ನಿಯಂತ್ರಣಕ್ಕೆ ಟ್ರಾಫಿಕ್‌ ಪೊಲೀಸರೇ ಖುದ್ದಾಗಿ ಕಳೆದ ಒಂಬತ್ತು ತಿಂಗಳಿನಿಂದ ಪ್ರತಿದಿನವೂ ಐವತ್ತು ಜನರಿಗೆ ತರಬೇತಿ ನೀಡುತ್ತಿದ್ದಾರೆ. ಇದಕ್ಕೆ ಸೇವ್‌ ಲೈಫ್‌ ಫೌಂಡೇಶನ್ ಸಂಸ್ಥೆ ಕೂಡ ಸಾಥ್‌ ನೀಡಿದ್ದು, ಸುರಕ್ಷಿತವಾಗಿ ಬಸ್‌ ಚಾಲನೆ ಮಾಡುವ ಬಗ್ಗೆ ಚಾಲಕ ಮತ್ತು ನಿರ್ವಾಹಕರಿಗೆ ಡಿಸಿಪಿ, ಎಸಿಪಿ ಮತ್ತು ಇನ್‌ಸ್ಪೆಕ್ಟರ್‌ಗಳು ತರಬೇತಿ ಕೊಡುತ್ತಿದ್ದಾರೆ.

ನಗರದ ವಿವಿಧೆಡೆ ಸಿಸಿಟಿವಿ ಕ್ಯಾಮರಾಗಳಲ್ಲಿ ರೆಕಾರ್ಡ್‌ ಆಗಿರುವ ಅಪಘಾತದ ವಿಡಿಯೋಗಳನ್ನು ಸಿಬ್ಬಂದಿಗೆ ತೋರಿಸುವ ಮೂಲಕ ಅಪಾಯಕಾರಿ ಚಾಲನೆ ಬಗ್ಗೆ ಸಿಬ್ಬಂದಿಗೆ ವಿವರಣೆ ನೀಡುವ ಜೊತೆಗೆ ಅಂತಹ ಸಂದರ್ಭಗಳಲ್ಲಿ ಯಾವ ರೀತಿ ಜಾಗ್ರತೆ ವಹಿಸಬೇಕು ಎನ್ನುವ ಮಾಹಿತಿ ಕೂಡ ನೀಡಲಾಗುತ್ತಿದೆ.

ಅಪಘಾತ ನಡೆಯಲು ಕಾರಣಗಳೇನು? ಚಾಲಕನ ನಿರ್ಲಕ್ಷ್ಯವೇ? ಅಥವಾ ಅವೈಜ್ಞಾನಿಕ ರಸ್ತೆ ಅಥವಾ ಗುಂಡಿ ಬಿದ್ದ ರಸ್ತೆ ಕಾರಣನಾ? ಅತಿಯಾದ ವೇಗವೇ? ಎನ್ನುವ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ನಿದ್ದೆ ಮಂಪರು ಬಂದರೆ ಚಾಲಕರು ಏನು ಮಾಡಬೇಕು? ಪ್ರಯಾಣಿಕರ ಜೊತೆ ಹೇಗೆ ನಡೆದುಕೊಳ್ಳಬೇಕು? ಎಂಬ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ.

ಸಂಚಾರ ಪೊಲೀಸರ ಮಾಹಿತಿ ಪ್ರಕಾರ, ಬಿಎಂಟಿಸಿ ಬಸ್‌ಗಳಿಂದ ಸಂಭವಿಸುವ ಅಪಘಾತಗಳಲ್ಲಿ ಪಾದಚಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ. ಬೈಕ್‌ಗಳೂ ಬಸ್‌ಗೆ ಡಿಕ್ಕಿಯಾಗಿರುವ ನಿದರ್ಶನಗಳಿವೆ. ಡ್ರೈವರ್‌ಗಳು ಎಚ್ಚರಿಕೆಯಿಂದ ವಾಹನ ಚಲಾಯಿಸಿದರೆ ಅಪಘಾತಗಳನ್ನು ತಡೆಯಬಹುದು. ಈ ತರಬೇತಿ ಶುರುವಾದ ದಿನದಿಂದ ನಗರದಲ್ಲಿ ಬಿಎಂಟಿಸಿ ಬಸ್‌ಗಳಿಂದ ಅಪಘಾತಗಳು ಕಡಿಮೆಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+