Get Updates
Get notified of breaking news, exclusive insights, and must-see stories!

IndiGo Airline: ಡಿಸೆಂಬರ್ 9ರಿಂದ 19ರ ವರೆಗೆ ಬೆಳಗಾವಿ-ಬೆಂಗಳೂರು ನಡುವೆ ವಿಶೇಷ ವಿಮಾನ ಸೇವೆ; ಸಮಯಗಳ ವಿವರ ತಿಳಿಯಿರಿ

Indigo Airlines: ಇಂಡಿಗೋ ಏರ್‌ಲೈನ್ಸ್‌ ಆಗಾಗಾ ಪ್ರಯಾಣಿಕೆ ಅನುಕೂಲಕ್ಕೆ ವಿಶೇಷ ಸೇವೆಗಳನ್ನು ಒದಗಿಸುತ್ತಲೇ ಇರುತ್ತದೆ. ಇನ್ನೂ ಇದೀಗ ಬೇರೆ ಉದ್ದೇಶಕ್ಕೆ ಬೆಳಗಾವಿ-ಬೆಂಗಳೂರು ನಡುವೆ ವಿಶೇಷ ಸೇವೆ ನೀಡಲು ಮುಂದಾಗಿದೆ. ಹಾಗಾದರೆ ಕಾರಣ ಏನು ಹಾಗೂ ಈ ಸೇವೆ ಯಾವಾಗಿನಿಂದ ಆರಂಭವಾಗಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಬೆಳಗಾವಿಯ ಸುವರ್ಣಸೌಧದಲ್ಲಿ ಡಿಸೆಂಬರ್ 9ರಿಂದ 19ರವರೆಗೆ ಚಳಿಗಾಲದ ಅಧಿವೇಶನ ನಡೆಯಲಿದ್ದು, ಈ ಹಿನ್ನೆಲೆ ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯು ಈ ಸಮಯದಲ್ಲಿ ಬೆಳಗಾವಿ-ಬೆಂಗಳೂರು ನಡುವೆ ವಿಶೇಷ ವಿಮಾನ ಸೇವೆ ನೀಡಲು ಮುಂದಾಗಿದೆ. ಸಮಯಗಳ ವಿವರವನ್ನು ತಿಳಿಯಿರಿ.

Special Flight Service Between Belagavi and Bengaluru from December 9 to 19 Know details

ಅಧಿವೇಶನದಲ್ಲಿ ಭಾಗಿಯಾಗಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​​ ಸೇರಿ ಸಚಿವರು, ಶಾಸಕರು, ವಿಪಕ್ಷ ನಾಯಕರು ಮತ್ತು ಸರ್ಕಾರದ ಅಧಿಕಾರಿ ವರ್ಗ ಬೆಳಗಾವಿಗೆ ಆಗಮಿದಲಿದೆ. ಆದ್ದರಿಂದ ಇವರಿಗೆಲ್ಲ ಅನುಕೂಲ ಕಲ್ಪಿಸುವ ಉದ್ದೇಶದಿಂದ ಇಂಡಿಗೋ ಏರ್‌ಲೈನ್ಸ್ ವಿಮನಯಾನ ಸಂಸ್ಥೆಯು ವಿಶೇಷ ಸೇವೆ ಒದಗಿಸಲು ಮುಂದಾಗಿದೆ ಎಂದು ತಿಳಿದುವಂದಿದೆ.

ಇನ್ನು ಈ ಬಗ್ಗೆ ಸಂಸದ ಜಗದೀಶ್‌ ಶೆಟ್ಟರ್ ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮನವಿ ಸಲ್ಲಿಸಿದ್ದರು. ಈ ವಿಮಾನವು ಬೆಳಗ್ಗೆ 6ಕ್ಕೆ ಬೆಂಗಳೂರಿನಿಂದ ಹೊರಟು ಬೆಳಗಾವಿಯನ್ನು 7 ಗಂಟೆಗೆ ತಲುಪಲಿದೆ. ಮತ್ತೆ 7.30ಕ್ಕೆ ಬೆಳಗಾವಿಯಿಂದ ಹೊರಟು 8.30ಕ್ಕೆ ಬೆಂಗಳೂರನ್ನು ತಲುಪಲಿದೆ. ಈ ವಿಶೇಷ ವಿಮಾನದಲ್ಲು 189 ಆಸನಗಳಿವೆ. ಅಧಿವೇಶನ ಮುಕ್ತಾಯದ ಬಳಿಕ ಡಿಸೆಂಬರ್ 20ರಿಂದ ATR72 ವಿಮಾನ ಸೇವೆಗಳು ಎಂದಿನಂತೆ ಮುಂದುವರೆಯಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?: ಹಾಸದಲ್ಲಿ ಕಾಂಗ್ರೆಸ್‌ ಜನಕಲ್ಯಾಣ ಸಮಾವೇಶದ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಡಾ.ರಾಜ್‌ಕುಮಾರ್ ಹೇಳಿಕೆ ಉಲ್ಲೇಖ ಮಾಡಿ ಗಮನ ಸೆಳೆದಿದ್ದಾರೆ. ಹಾಗೆಯೇ 3 ಕ್ಷೇತ್ರಗಳಲ್ಲೂ ಉಪನಾವಣೆ ಗೆದ್ದಿದ್ದು ಹೇಗೆ ಎನ್ನುವ ಮಾಹಿತಿಯನ್ನು ಇದೇ ವೇಳೆ ಹೊರಹಾಕಿದ್ದಾರೆ. ಹಾಗಾದರೆ ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಸಮಾವೇಶದಲ್ಲಿ ರಾಜ್‌ಕುಮಾರ್ ಹೇಳಿಕೆ ಉಲ್ಲೇಖಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಡಾ.ರಾಜ್‌ಕುಮಾರ್ ಅವರಿಗೆ ಅಭಿಮಾನಿಗಳೇ ದೇವರು, ಮತದಾರರಿಂದ ನಾವು ಗೆದ್ದಿದ್ದೇವೆ. ನಮಗೆ ಮತದಾರರೇ ದೇವರುಗಳು ಎಂದು ಹೇಳುವ ಮೂಲಕ ರಾಜ್‌ಕುಮಾರ್ ಹೇಳಿಕೆ ಉಲ್ಲೇಖ ಮಾಡಿ ಗಮನ ಸೆಳೆದಿದ್ದಾರೆ.

ಚನ್ನಪಟ್ಟಣ, ಶಿಗ್ಗಾಂವಿ, ಸಂಡೂಡು ಕ್ಷೇತ್ರಗಳಿಗೆ ನವೆಂಬರ್ 13ರಂದು ಚುನಾವಣೆ ನಡೆದಿದ್ದು, ನವೆಂಬರ್ 23ರಂದು ಫಲಿತಾಂಶ ಹೊರಬಿದ್ದಿತ್ತು. ಈ ವೇಳೆ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲುವು ಸಾಧಿಸಿದ್ದು, ಬಿಜೆಪಿ ಭಾರೀ ಮುಖಭಂಗ ಅನುಭವಿಸಿದೆ. ಇನ್ನು ಈ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷ ಹೇಗೆ ಗೆಲುವು ಸಾಧಿಸಿತು ಎನ್ನುವ ಮಾಹಿತಿಯನ್ನು ಹಾಸನ ಸಮಾವೇಷದಲ್ಲಿ ಹೊರಹಾಕಿದ್ದಾರೆ.

ಅದರಲ್ಲೂ ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಪುತ್ರ ಭರತ್‌ ಬೊಮ್ಮಾಯಿಯನ್ನು ಗೆಲ್ಲಿಸಿಕೊಳ್ಳಲು ಆಗಲಲಿಲ್ಲ ಹಾಗೂ ಚನ್ನಪಟ್ಟಣ ಕ್ಷೇತ್ರದಲ್ಲಿ ಕೆಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್‌ ಕುಮಾಮಾರಸ್ವಾಮಿಯನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ ಎಂದು ಕುಟುಕಿದರು. ಹಾಗೆಯೇ ಸಂಡೂರಿನಲ್ಲೂ ಕೂಡ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣ ಗೆಲುವು ಸಾಧಿಸಿದ್ದಾರೆ.

ಹಾವೇರಿಯ ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ವಿರುದ್ಧ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ಸೋಲನುಭವಿಸಿದ್ದಾರೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ ಅವರು ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದಾರೆ. ಇನ್ನು ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ವಿರುದ್ಧ ಗೆಲುವು ಸಾಧಿಸಿದ್ದಾರೆ. ಹೀಗೆ ಮೂರು ಕ್ಷೇತ್ರಗಳಲ್ಲೂ ಕೂಡ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸುವ ಮೂಲಕ ಬಿಜೆಪಿಗೆ ಸೋಲುಣಿಸಿದೆ ಎಂದು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+