ಸವಾರರಿಂದ 8.65 ಲಕ್ಷ ರೂ. ದಂಡ ವಸೂಲಿ
ಬೆಂಗಳೂರು, ಜು.10: ಸಂಚಾರ ನಿಯಮ ಉಲ್ಲಂಘಿಸಿದ ರಿಕ್ಷಾ ಡ್ರೈವರ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸಿದ್ದ ಸಂಚಾರ ಪೊಲೀಸರು ಇದೀಗ ಕ್ಯಾಬ್ ಮತ್ತು ಟ್ಯಾಕ್ಸಿ ಚಾಲಕರ ವಿರುದ್ಧ ಕಾರ್ಯಾಚರಣೆ ನಡೆಸಿದ್ದಾರೆ.
ಕ್ಯಾಬ್ ಮತ್ತು ಟ್ಯಾಕ್ಸಿ ಚಾಲಕರ ವಿರುದ್ಧ ಸೀಟ್ ಬೆಲ್ಟ್ ಧರಿಸದೆ ವಾಹನ ಚಾಲನೆ , ಸಿಗ್ನಲ್ ಜಂಪ್, ಪಾರ್ಕಿಂಗ್ ಗಲಾಟೆಗಳ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಸಂಚಾರ ವಿಭಾಗದ ಪೊಲೀಸರು ಸೋಮವಾರ ಮತ್ತು ಮಂಗಳವಾರ ವಿಶೇಷ ಕಾರ್ಯಾಚರಣೆ ನಡೆಸಿ 8200 ಪ್ರಕರಣ ದಾಖಲಿಸಿದ್ದಾರೆ.

ಸವಾರರಿಂದ 8.65 ಲಕ್ಷ ರೂ. ದಂಡವನ್ನು ವಸೂಲಿ ಮಾಡಿದ್ದು, 26 ವಾಹನಗಳನ್ನು ಸಂಚಾರ ಪೊಲೀಸರು ಜಪ್ತಿ ಮಾಡಿದ್ದಾರೆ.[ಫುಟ್‌ಪಾತ್ ಮೇಲೆ ಗಾಡಿ ಏರಿಸಿದರೆ ಲೈಸೆನ್ಸ್ ರದ್ದು]
ಬೆಂಗಳೂರಿನಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ 5,918 ಮಂದಿ ಚಾಲಕರ ಪರವಾನಗಿ ಪತ್ರಗಳನ್ನು ಅನರ್ಹಗೊಳಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಕಳುಹಿಸಿ ಕೊಡಲಾಗಿದೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಬುಧವಾರ ವಿಧಾನಸಭೆಯಲ್ಲಿ ತಿಳಿಸಿದ್ದರು.[ರದ್ದಾಗಲಿದೆ 5,918 ಬೆಂಗಳೂರಿಗರ ಲೈಸೆನ್ಸ್‌ಗಳು]












Click it and Unblock the Notifications