ಕಾಂಗ್ರೆಸ್ ಅತೃಪ್ತರಿಗೆ ಮಾರ್ಚ್ 12ರಂದು ಬುಲಾವ್, ಅನರ್ಹತೆಯ ಭಯ

ಬೆಂಗಳೂರು, ಮಾರ್ಚ್ 9: ಕಾಂಗ್ರೆಸ್‌ನ ಅತೃಪ್ತ ಶಾಸಕರಿಗೆ ಮಾರ್ಚ್ 12ರಂದು ಬುಲಾವ್ ಬಂದಿದ್ದು, ಖುದ್ದು ಆಗಮಿಸಿ ತಮ್ಮ ವಿರುದ್ಧದ ಪಕ್ಷಾಂತರ ಕಾಯ್ದೆ ಉಲ್ಲಂಘನೆ ಕುರಿತ ದೂರಿನ ವಿವಿವರಣೆ ನೀಡುವಂತೆ ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.
ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ ಶಾಸಕ ಉಮೇಶ್ ಜಾಧವ್ ಸೇರಿದಂತೆ ನಾಲ್ಕು ಮಂದಿ ಬಂಡಾಯ ಕಾಂಗ್ರೆಸ್ ಶಾಸಕರಿಗೆ ಮಾರ್ಚ್ 12 ರಂದು ಮಧ್ಯಾಹ್ನ 3 ಗಂಟೆಗೆ ಖುದ್ದು ಆಗಮಿಸಲು ತಿಳಿಸಿದೆ.
ಹೀಗಾಗಿ ರಾಜೀನಾಮೆ ನೀಡಿ ಅರ್ಹತೆಯಿಂದ ಪಾರಾಗುವ ಉಮೇಶ್ ಜಾಧವ್‌ಗೆ ಭಯ ಆರಂಭವಾಗಿದೆ. ನಾಲ್ಕು ಮಂದಿ ಶಾಸಕರಿಗೆ ಪತ್ರ ಬರೆದಿದ್ದು, ಶುಕ್ರವಾರ ಖುದ್ದಾಗಿ ಆಗಮಿಸಿ ವಿವರಣೆ ನೀಡುವಂತೆ ಸೂಚಿಸಿರುವುದಾಗಿ ರಮೇಶ್ ಕುಮಾರ್ ತಿಳಿಸಿದ್ದಾರೆ.
ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಕ್ರಮಕ್ಕೆ ಒತ್ತಾಯಿಸಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು, ನಾಲ್ಕು ಮಂದಿ ಶಾಸಕರ ವಿರುದ್ಧ ದೂರು ನೀಡಿದ್ದರು.
ದೂರಿನ ಸಂಬಂಧ ಶಾಸಕರು ಸ್ಪಷ್ಟೀಕರಣ ನೀಡಿದ್ದರು. ಈ ಬಗ್ಗೆ ಮತ್ತಷ್ಟು ಸ್ಪಷ್ಟನೆ ಬಯಸಿ ಮತ್ತೊಂದು ನೋಟಿಸ್ ನೀಡಿದ್ದೇನೆ ಎಂದಿದ್ದಾರೆ.