Bengaluru: ಗಮನಿಸಿ ಈ ರೈಲುಗಳ ಸಮಯದಲ್ಲಿ ಬದಲಾವಣೆ: ಜೂನ್‌ನಿಂದ ಹೊಸ ವೇಳಾಪಟ್ಟಿ

ಬೆಂಗಳೂರು, ಮೇ 18: ಭಾರತೀಯ ರೈಲ್ವೆಯ ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ಏಳು ರೈಲುಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು SWR ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ್ ಕನಮಡಿ ಮಾಹಿತಿ ನೀಡಿದ್ದಾರೆ.

ನೈಋತ್ಯ ರೈಲ್ವೆ ವಲಯ ಅಧಿಕಾರಿಗಳ ವ್ಯಾಪ್ತಿಯಲ್ಲಿ, ಕರ್ನಾಟಕದ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಬೆಂಗಳೂರಿನಿಂದ ತಿರುಪತಿಗೆ ಹೊರಡುವ ಹರಿಪ್ರಿಯ ರೈಲು ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಗದಗ, ಕೊಪ್ಪಳ, ಬಳ್ಳಾರಿ ಮಾರ್ಗಮಾಗಿ ಸಂಚರಿಸುತ್ತದೆ.

South Western Railways Revised Timings of Some 7 Trains due Operational Reasons Schedule

ಬೆಂಗಳೂರು ಮಾರ್ಗವಾಗಿ ಮೈಸೂರಿನಿಂದ ಹೋಗುವ ಕಾಚೀಗುಡ ರೈಲು, ನೆರೆ ರಾಜ್ಯ ಗೋವಾದ ವಾಸ್ಕೋದಿಂದ ಕರ್ನಾಟಕ ಮಾರ್ಗವಾಗಿ ಸಂಚರಿಸುವ ನಾಲ್ಕು ರೈಲುಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಕಾರ್ಯಾಚರಣೆ ಪರಿಣಾಮವಾಗಿ ಕೆಲವು ರೈಲುಗಳ ಸಮಯ ಪರಿಷ್ಕರಿಸಳಾಗಿದೆ ಎಂದು ಕನಮಡಿ ತಿಳಿಸಿದ್ದಾರೆ.

ಈ ರೈಲುಗಳು ಆಯಾ ನಿಲ್ದಾಣಗಳಿಗೆ ಬರುವ ಸಮಯದಲ್ಲಿ ದಬಲಾವಣೆ ಆಗಿದೆ. ಈ ರೈಲುಗಳ ಬದಲಾವಣೆ ಸಮಯ ಜೂನ್ ಮೊದಲ ವಾರದಿಂದ ಅನುಷ್ಠಾನಕ್ಕೆ ಬರಲಿದೆ ಎಂದರು.

ರೈಲುಗಳ ಸಮಯ ಪರಿಷ್ಕರಣೆ-ವೇಳಾಪಟ್ಟಿ

* ಬೆಂಗಳೂರು-ಧರ್ಮಪುರಿ ಮೆಮು ವಿಶೇಷ ರೈಲು (ಸಂಖ್ಯೆ. 06277) ಬದಲಾದ ಸಮಯದಲ್ಲಿ ಜೂನ್ 6ರಿಂದ ಜಾರಿಗೆ ಬರಲಿದೆ.

* ಮೈಸೂರು-ಕಾಚೇಗೌಡ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (ಸಂಖ್ಯೆ 12786) ರೈಲು ಜೂನ್ 6 ಜಾರಿ ಬರುತ್ತದೆ.

* ವಾಸ್ಕೋ ಡ ಗಾಮಾ-ಜಸಿದಿಹ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17321) ಜೂನ್ 7 ರಿಂದ ಜಾರಿಗೆ ಬರಲಿದೆ.

* ಜಸಿದಿಹ್-ವಾಸ್ಕೋ ಡ ಗಾಮಾ ವೀಕ್ಲಿ ಎಕ್ಸ್‌ಪ್ರೆಸ್ (ಸಂಖ್ಯೆ 17322) ಜೂನ್ 10ರಿಂದ ಬದಲಾದ ಸಮಯದಲ್ಲಿ ಚಲಿಸಲಿದೆ.

* ಯಶವಂತಪುರ-ವಾಸ್ಕೋ ಡ ಗಾಮಾ ಡೈಲಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17309) ಜೂನ್ 6ರಿಂದ ಹೊಸ ಪರಿಷ್ಕರಿಸಿದ ಸಮಯದಲ್ಲಿ ಓಡಲಿದೆ.

* ಪಾಟ್ನಾ-ವಾಸ್ಕೋ ಡ ಗಾಮಾ ವೀಕ್ಲಿ ಎಕ್ಸ್‌ಪ್ರೆಸ್ (ಸಂಖ್ಯೆ. 12742) ಜೂನ್ 8 ರಿಂದ ಜಾರಿಗೆ ಬರಲಿದೆ.

* ತಿರುಪತಿ-ಕೊಲ್ಹಾಪುರ ಹರಿಪ್ರಿಯಾ ಡೈಲಿ ಎಕ್ಸ್‌ಪ್ರೆಸ್ (ಸಂಖ್ಯೆ 17415) ಜೂನ್ 11 ರಿಂದ ಹೊಸ ಸಮಯಕ್ಕೆ ಓಡಲಿದೆ.

ಈ ರೈಲುಗಳಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಗಳು ಪರಿಷ್ಕೃತ ಸಮಯ, ವೇಳಾಪಟ್ಟಿ ನಿಲ್ದಾಣಗಳಿಗಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 139 ಅನ್ನು ಸಂಪರ್ಕಿಸಬಹುದು. ಅಧಿಕೃತ ವೆಬ್‌ಸೈಟ್‌ಗೂ http://enquiry.indianrail.gov.in ಭೇಟಿ ನೀಡಬಹುದು.

ಬೆಂಗಳೂರಿನಿಂದ, ಮೈಸೂರಿನಿಂದ ತೆರಳುವವರು ಮತ್ತು ಮರಳಿ ಇಲ್ಲಿಗೆ ಬರುವ ಪ್ರಯಾಣಿಕರು ಮೊದಲೇ ರೈಲಿನ ಸಮಯ, ವೇಳಾಪಟ್ಟಿ ತಿಳಿದು ಸಂಚಾರ ನಡೆಸಬೇಕು ಎಂದು SWR ಕೋರಿದೆ.

ಈ ಹಿಂದೆ ವಿಜಯವಾಡ ಹುಬ್ಬಳ್ಳಿ-ಬೆಂಗಳೂರಿನ ಕೆಲವು ರೈಲುಗಳನ್ನು ರದ್ದು ಮಾಡಲಾಗಿತ್ತು. ತುರ್ತು ಕಾಮಗಾರಿ ಹಿನ್ನೆಲೆಯ ಜೂನ್ ವರೆಗೆ ರದ್ದುಗೊಳಿಸಲಾಗಿದೆ. ಇತ್ತೀಚಿಗೆ ಬೇಸಿಗೆ ವಿಶೇಷ ರೈಲುಗಳನ್ನು ಬೆಂಗಳೂರಿನಿಂದ ಕಾರ್ಯಾಚರಣೆ ಮಾಡಲಿವೆ ಎಂದು ಅವರು ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+