ಬೆಂಗಳೂರು; ನಾಲ್ಕು ಮೆಮು ರೈಲುಗಳ ಸಂಚಾರ ಆರಂಭ
ಬೆಂಗಳೂರು, ಫೆಬ್ರವರಿ 02; ನೈಋತ್ಯ ರೈಲ್ವೆ ನಾಲ್ಕು ಜೊತೆ ಮೆಮು ರೈಲುಗಳ ಸಂಚಾರವನ್ನು ಆರಂಭಿಸಿದೆ. ಬಂಗಾರಪೇಟೆ-ಬಾಣಸವಾಡಿ ನಡುವಿನ ರೈಲು ಫೆಬ್ರವರಿ 6ರಿಂದ ವಾರಕ್ಕೊಮ್ಮೆ ಶನಿವಾರ ಸಂಚಾರ ನಡೆಸಲಿದೆ ಎಂದು ಪ್ರಕಟಣೆ ಹೇಳಿದೆ.
ಫೆಬ್ರವರಿ 1ರಿಂದಲೇ ನಾಲ್ಕು ಜೊತೆ ಮೆಮು ರೈಲುಗಳ ಸಂಚಾರವನ್ನು ಆರಂಭಿಸಲಾಗಿದೆ. ಬಂಗಾರಪೇಟೆ, ಕುಪ್ಪಂ, ಕೆ. ಆರ್. ಪುರಂ, ಕೆ. ಎಸ್. ಆರ್. ಬೆಂಗಳೂರು ಸೇರಿದಂತೆ ವಿವಿಧ ಮಾರ್ಗದಲ್ಲಿ ಈ ರೈಲುಗಳು ಸಂಚಾರ ನಡೆಸಲಿವೆ.
ಬಂಗಾರಪೇಟೆ-ಕುಪ್ಪಂ (06289), ಕುಪ್ಪಂ-ಬಂಗಾರಪೇಟೆ (06290). ಕೃಷ್ಣರಾಜಪುರಂ-ಕುಪ್ಪಂ (06291), ಕುಪ್ಪಂ-ಕೆ. ಎಸ್. ಆರ್ ಬೆಂಗಳೂರು (06292), ಕೆ. ಎಸ್. ಆರ್. ಬೆಂಗಳೂರು-ಬಂಗಾರಪೇಟೆ (06293) ಮತ್ತು ಬಂಗಾರಪೇಟೆ-ಕೃಷ್ಣರಾಜಪುರಂ (06294) ರೈಲುಗಳು ಭಾನುವಾರ ಹೊರತುಪಡಿಸಿ ವಾರದ 6 ದಿನ ಸಂಚಾರ ನಡೆಸಲಿವೆ.

ಫೆಬ್ರವರಿ 6ರಿಂದ ಬಂಗಾರಪೇಟೆ-ಬಾಣಸವಾಡಿ (06297) ರೈಲು ವಾರಕ್ಕೊಮ್ಮೆ (ಶನಿವಾರ) ಸಂಚಾರ ನಡೆಸಲಿದೆ. ಫೆಬ್ರವರಿ 7ರಿಂದ ಬಣಸವಾಡಿ-ಬಂಗಾರಪೇಟೆ (06298) ರೈಲು ವಾರಕೊಮ್ಮೆ ( ಭಾನುವಾರ) ಸಂಚಾರ ನಡೆಸಲಿದೆ.
ಬಾಣಸವಾಡಿ-ಬಂಗಾರಪೇಟೆ ರೈಲು ಕೃಷಣರಾಜಪುರಂ, ಹೂಡಿ ಹಾಲ್ಟ್, ವೈಟ್‌ಫೀಲ್ಡ್, ಮಾಲೂರು, ತ್ಯಾಕಲ್ ನಿಲ್ದಾಣಗಳಲಿ ನಿಲುಗಡೆಗೊಳ್ಳಲಿದೆ.












Click it and Unblock the Notifications