ಈ ವಾರ ಬೆಂಗಳೂರು-ಶಿವಮೊಗ್ಗ ನಡುವೆ ಪ್ರಯಾಣಿಸುವವರ ಗಮನಕ್ಕೆ: ಜನಶತಾಬ್ದಿ, ಟೌನ್‌ ಎಕ್ಸ್‌ಪ್ರೆಸ್ ಸೇರಿ ಹಲವು ರೈಲುಗಳ ಸಂಚಾರ ರದ್ದು

ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ನಿತ್ಯ ಪ್ರಯಾಣಿಸುವವರ ಗಮನಕ್ಕೆ ಪ್ರಮುಖ ಮಾಹಿತಿಯೊಂದು ಇಲ್ಲಿದೆ. ರಾಜ್ಯದ ಪ್ರಮುಖ ರೈಲ್ವೆ ಮಾರ್ಗವಾಗಿರುವ ತಿಪಟೂರು ಮತ್ತು ಹೊನ್ನವಳ್ಳಿ ರಸ್ತೆ ರೈಲ್ವೆ ನಿಲ್ದಾಣಗಳ ನಡುವೆ ತುರ್ತು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದರಿಂದ, ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳ ವೇಳಾಪಟ್ಟಿಯಲ್ಲಿ ಭಾರೀ ವ್ಯತ್ಯಾಸ ಮಾಡಲಾಗಿದೆ.

ಲೆವೆಲ್ ಕ್ರಾಸಿಂಗ್‌ ಸಂಖ್ಯೆ 88ರ ಬಳಿ ಕಾಂಪೋಸಿಟ್ ಗಿರ್ಡರ್ ಅಳವಡಿಸುವ ಮಹತ್ವದ ಕಾಮಗಾರಿ ನಡೆಯುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಹಳಿ ಮತ್ತು ವಿದ್ಯುತ್ ಮಾರ್ಗದ ಲೈನ್ ಬ್ಲಾಕ್ ಮಾಡಲಾಗುತ್ತಿದೆ.

South Western Railway Announces Train Cancellations and Diversions Due To Engineering Works

ಈ ಹಿನ್ನೆಲೆಯಲ್ಲಿ ಅಕ್ಟೋಬರ್ 26 ರಿಂದ 28ರವರೆಗೆ ಮೂರು ದಿನಗಳ ಕಾಲ ಬೆಂಗಳೂರು, ಮೈಸೂರು, ಶಿವಮೊಗ್ಗ ಭಾಗದ ಹಲವು ರೈಲು ಸಂಚಾರ ರದ್ದು ಮಾಡಲಾಗಿದೆ. ಇನ್ನು ಕೆಲವು ರೈಲುಗಳ ಮಾರ್ಗ ಬದಲಾವಣೆ ಹಾಗೂ ಸಮಯ ಪರಿಷ್ಕರಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ್ ಕನಮಡಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಯಾಣಿಕರು ಮುಂಚಿತವಾಗಿ ವೇಳಾಪಟ್ಟಿಯನ್ನು ಪರಿಶೀಲಿಸುವುದು ಸೂಕ್ತ.

ಯಾವೆಲ್ಲ ರೈಲು ಸಂಚಾರ ರದ್ದು?

ಅಕ್ಟೋಬರ್ 26, 27 ಹಾಗೂ 28ರಂದು ಪ್ರಮುಖವಾಗಿ ಬೆಂಗಳೂರು, ತುಮಕೂರು ಹಾಗೂ ಶಿವಮೊಗ್ಗ ಭಾಗದ ರೈಲುಗಳ ಸಂಚಾರ ಸಂಪೂರ್ಣವಾಗಿ ರದ್ದಾಗಲಿದೆ.

* ಅಕ್ಟೋಬರ್ 26: ತುಮಕೂರು - ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16567)

* ಅಕ್ಟೋಬರ್ 27: ಶಿವಮೊಗ್ಗ ಟೌನ್ - ತುಮಕೂರು ಎಕ್ಸ್‌ಪ್ರೆಸ್ (16568), ಅರಸೀಕೆರೆ - ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್ (56224), ಬೆಂಗಳೂರು - ಚನ್ನಪಟ್ಟಣ (56229), ಚನ್ನಪಟ್ಟಣ - ಬೆಂಗಳೂರು (56230), ಹಾಗೂ ಬೆಂಗಳೂರು - ಅರಸೀಕೆರೆ ಪ್ಯಾಸೆಂಜರ್ (56223) ರೈಲುಗಳು ರದ್ದಾಗಿವೆ.

* ಅಕ್ಟೋಬರ್ 28: ತುಮಕೂರು - ಶಿವಮೊಗ್ಗ ಟೌನ್ ಮೆಮು (66577), ಶಿವಮೊಗ್ಗ ಟೌನ್ - ತುಮಕೂರು ಮೆಮು (66578), ಯಲಹಂಕ - ಅರಸೀಕೆರೆ ಮೆಮು (66505) ಹಾಗೂ ಅರಸೀಕೆರೆ - ಯಲಹಂಕ ಮೆಮು (66506) ರೈಲುಗಳ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ.

ಪ್ರಮುಖ ರೈಲುಗಳ ಮಾರ್ಗ ಬದಲಾವಣೆ

ಹಲವು ಎಕ್ಸ್‌ಪ್ರೆಸ್ ರೈಲುಗಳು ತಿಪಟೂರು ಮತ್ತು ತುಮಕೂರು ಮಾರ್ಗವನ್ನ ಕೈಬಿಟ್ಟು, ಪರ್ಯಾಯವಾಗಿ ಅರಸೀಕೆರೆ, ಹಾಸನ, ನೆಲಮಂಗಲ ಮಾರ್ಗವಾಗಿ ಸಂಚರಿಸಲಿವೆ.

* ಅಕ್ಟೋಬರ್ 26: ಸಿಂಧನೂರು - ಯಶವಂತಪುರ ಎಕ್ಸ್‌ಪ್ರೆಸ್ (16546) ಮತ್ತು ಉದಯಪುರ ಸಿಟಿ - ಮೈಸೂರು ಎಕ್ಸ್‌ಪ್ರೆಸ್ (19667)

* ಅಕ್ಟೋಬರ್ 27: ಶಿವಮೊಗ್ಗ ಟೌನ್ - ಕೆಎಸ್‌ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್ (12090), ಬೆಂಗಳೂರು - ಹೊಸಪೇಟೆ ಪ್ಯಾಸೆಂಜರ್ (56519), ಮತ್ತು ಪುದುಚೇರಿ - ದಾದರ್ ಎಕ್ಸ್‌ಪ್ರೆಸ್ (11006) ರೈಲುಗಳು ಹೊಸ ಮಾರ್ಗದಲ್ಲಿ ಚಲಿಸಲಿವೆ.

* ಅಕ್ಟೋಬರ್ 28: ಕೆಎಸ್‌ಆರ್ ಬೆಂಗಳೂರು - ಎಸ್‌ಎಸ್‌ಎಸ್ ಹುಬ್ಬಳ್ಳಿ ಜನಶತಾಬ್ದಿ (12079) ಹಾಗೂ ಬೆಂಗಳೂರು - ಹೊಸಪೇಟೆ ಪ್ಯಾಸೆಂಜರ್ (56519) ರೈಲುಗಳ ಮಾರ್ಗದಲ್ಲಿ ಬದಲಾವಣೆಯಾಗಲಿದೆ.

ಈ ರೈಲುಗಳು ತಮ್ಮ ನಿಗದಿತ ನಿಲ್ದಾಣಗಳಾದ ತುಮಕೂರು, ತಿಪಟೂರು ಮುಂತಾದೆಡೆ ನಿಲುಗಡೆ ಹೊಂದುವುದಿಲ್ಲ.

ರೈಲುಗಳ ಸಮಯ ಪರಿಷ್ಕರಣೆ ಮತ್ತು ವಿಳಂಬ

ಕಾಮಗಾರಿಯ ದೃಷ್ಟಿಯಿಂದ ಕೆಲವು ರೈಲುಗಳು ತಮ್ಮ ನಿಗದಿತ ಸಮಯಕ್ಕಿಂತ ವಿಳಂಬವಾಗಿ ಸಂಚರಿಸಲಿವೆ. ಅಕ್ಟೋಬರ್ 27ರಂದು ವಾಸ್ಕೋಡಗಾಮ - ಯಶವಂತಪುರ ಎಕ್ಸ್‌ಪ್ರೆಸ್ (17310) 120 ನಿಮಿಷ ತಡವಾಗಿ ಹೊರಡಲಿದೆ. ಅದೇ ದಿನ ತುಮಕೂರು - ಶಿವಮೊಗ್ಗ ಮೆಮು 20 ನಿಮಿಷ, ಬೆಂಗಳೂರು - ಹುಬ್ಬಳ್ಳಿ ಜನಶತಾಬ್ದಿ ಮಾರ್ಗಮಧ್ಯೆ 90 ನಿಮಿಷ ತಡವಾಗಿ ಚಲಿಸಲಿದೆ.

ಅಕ್ಟೋಬರ್ 28ರಂದು ತಾಳಗುಪ್ಪ - ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ (20652) ನಿಗದಿತ ಸಮಯಕ್ಕಿಂತ 140 ನಿಮಿಷ ತಡವಾಗಿ ಹೊರಡಲಿದೆ. ಚಿಕ್ಕಮಗಳೂರು - ಯಶವಂತಪುರ ಎಕ್ಸ್‌ಪ್ರೆಸ್ (16239) 60 ನಿಮಿಷ, ಹಾಗೂ ಯಶವಂತಪುರ - ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (20689) ಮಾರ್ಗಮಧ್ಯೆ 30 ನಿಮಿಷ ತಡವಾಗಿ ಸಂಚರಿಸಲಿದೆ. ಧಾರವಾಡ - ಬೆಂಗಳೂರು ಎಕ್ಸ್‌ಪ್ರೆಸ್ ಕೂಡ 30 ನಿಮಿಷ ವಿಳಂಬವಾಗಲಿದೆ.

ಪ್ರಯಾಣಿಕರು ಕೊನೆಯ ಕ್ಷಣದ ಗೊಂದಲಗಳನ್ನ ತಪ್ಪಿಸಲು ಈ ಮೇಲಿನ ಬದಲಾವಣೆಗಳನ್ನು ಗಮನಿಸಿ, ಎನ್‌ಟಿಇಎಸ್ ಆ್ಯಪ್ ಮೂಲಕ ರೈಲುಗಳ ನೈಜ ಸಮಯವನ್ನ ಖಚಿತಪಡಿಸಿಕೊಂಡು ತಮ್ಮ ಪ್ರಯಾಣವನ್ನ ಯೋಜಿಸಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+