ಬೆಂಗಳೂರು: 31 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್, SOP ಪಾಲನೆಗೆ ಸೂಚನೆ

ಬೆಂಗಳೂರು, ಜೂನ್ 14: ಬೆಂಗಳೂರಿನ ದಾಸರಹಳ್ಳಿ ವಲಯದ ಎರಡು ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಕೋವಿಡ್ ಪಾಸಿಟಿವ್ ರಿಪೋರ್ಟ್ ಬಂದಿದ್ದು ಆರೋಗ್ಯ ಇಲಾಖೆಯನ್ನು ಮತ್ತು ಬಿಬಿಎಂಪಿಯನ್ನು ಬೆಚ್ಚಿ ಬೀಳುವಂತೆ ಮಾಡಿದೆ. ದಾಸರ ಹಳ್ಳಿ ವಲಯದಲ್ಲಿ ಎರಡು ಶಾಲೆಗಳಲ್ಲಿ ಕೊರೋನಾ ಹೆಚ್ಚಳ ಹಿನ್ನೆಲೆ ಪ್ರತಿಯೊಂದು ಶಾಲೆಯಲ್ಲೂ SOP ಪಾಲನೆ ಮಾಡುವಂತೆ ಸೂಚನೆಯನ್ನು ನೀಡಿದೆ.

ಬಿಬಿಎಂಪಿ ದಾಸರಹಳ್ಳಿಯ ವಲಯದ ಎರಡು ಖಾಸಗಿ ಶಾಲೆಯ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದ ಹಿನ್ನೆಲೆಯಲ್ಲಿ ಮಕ್ಕಳಿಗೆ ಕೋವಿಡ್ ಪರೀಕ್ಷೆಯನ್ನು ಮಾಡಿತ್ತು. ಕೋವಿಡ್ ಪರೀಕ್ಷೆಯಲ್ಲಿ 31 ಮಕ್ಕಳಿಗೆ ಕೋವಿಡ್ ಪಾಸಿಟಿವ್ ಬಂದಿರುವುದು ದೃಡವಾಗಿರುವುದರಿಂದ ಮಾಸ್ಕ್ ಸ್ಯಾನಿಟೈಸರ್, ಸಾಮಾಜಿ ಹಂತರ ದ ಜೊತೆಗೆ ಎಲ್ಲಾ ಶಾಲಾ ಕಾಲೇಜುಗಳ ಎಂಟ್ರಿಯಲ್ಲೇ ಟೆಂಪರೇಚರ್ ಚೆಕ್ ಮಾಡುವಂತೆ ಬಿಬಿಎಂಪಿ ಆರೋಗ್ಯ ಇಲಾಖೆಗೆ ಸೂಚನೆಯನ್ನು ನೀಡಿದೆ.

ಬೆಂಗಳೂರು ನಗರದಲ್ಲಿ ನಿತ್ಯದ ಕೋವಿಡ್ ಸಂಖ್ಯೆ ಏರಿಕೆಯಾಗುತ್ತಿದೆ. 400 ರಿಂದ 500 ಜನಕ್ಕೆ ಕೋವಿಡ್ ಬರುತ್ತಿದೆ. ಕೋವಿಡ್ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆಯಿಂದಿರಿ ಎಂದು ಸರ್ಕಾರ ಮತ್ತು ಆರೋಗ್ಯ ಇಲಾಖೆ ಎಚ್ಚರಿಕೆಯನ್ನು ನೀಡಿದೆ.

ಎರಡು ಖಾಸಗಿ ಶಾಲೆಯ 31 ವಿದ್ಯಾರ್ಥಿಗಳಿಗೆ ಪಾಸಿಟಿವ್

ಎರಡು ಖಾಸಗಿ ಶಾಲೆಯ 31 ವಿದ್ಯಾರ್ಥಿಗಳಿಗೆ ಪಾಸಿಟಿವ್

""ದಾಸರಹಳ್ಳಿ ವಲಯದಲ್ಲಿ ಶಾಲಾ ಮಕ್ಕಳಿಗೆ ವ್ಯಾಕ್ಸಿನ್ ಹಾಕುವ ಸಲುವಗಿ ನಮ್ಮ ತಂಡ ಹೋಗಿತ್ತು. ಈ ವೇಳೆಯಲ್ಲಿ ಮಕ್ಕಳಿಗೆ ಕೋವಿಡ್ ಲಕ್ಷಣಗಳಿರವುದು ಕಂಡು ಬಂದಿದೆ. ಇದರಿಂದ ನಮ್ಮ ನರ್ಸ್ ತಂಡ ಆರ್‌ಟಿಪಿಸಿಆರ್‌ ಪರೀಕ್ಷೆಯನ್ನು ನಡೆಸಿದಾಗ ನ್ಯೂ ಸ್ಟಾನ್ಟರ್ಡ್ ಇಂಗ್ಲಿಷ್ ಮತ್ತು ಎಂಇಎಸ್ ಶಾಲೆಯ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಒಂದು ಶಾಲೆಯ 21 ಮಕ್ಕಳು ಮತ್ತೊಂದು ಶಾಲೆಯ 10 ಮಕ್ಕಳಿಗೆ ಕೋವಿಡ್ ಪಾಸಿಟಿವ್ ಬಂದಿರುವುದು ದೃಢವಾಗಿದೆ. ಆ ತರಗತಿಯ ಎಲ್ಲಾ ಮಕ್ಕಳಿಗೆ ರಜೆಯನ್ನು ನೀಡಿ ಎರಡು ಶಾಲೆಗೆ ಸ್ಯಾನಿಟೈಸೇಷನ್ ಮಾಡುವ ಸಲುವಾಗಿ ಕೆಲಸವನ್ನು ಮಾಡಿದ್ದೇವೆ'' ಎಂದು ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ತಿಳಿಸಿದ್ದಾರೆ.

Sop ಪಾಲಿಸುವಂತೆ ಸೂಚನೆ

Sop ಪಾಲಿಸುವಂತೆ ಸೂಚನೆ

ಸರ್ಕಾರಿ, ಅನುದಾನಿತ, ಅನುದಾನ ರಹಿತ ಖಾಸಗಿ ಶಾಲೆಗಳು ಶಾಲೆಯನ್ನು ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಬೇಕು. ಮಕ್ಕಳು ಮತ್ತು ಶಿಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ನಿಯಮಿತವಾಗಿ ಸ್ಯಾನಿಟೈಸರ್ ಬಳಕೆಯನ್ನು ಮಾಡಬೇಕು ಎಂದಿದ್ದಾರೆ. ಕೋವಿಡ್ ನಿಯಮವನ್ನು ಪಾಲಿಸಬೇಕು ಅಂದರೆ ಎಸ್ಓಪಿಯನ್ನು ಪಾಲಿಸಬೇಕು ಎಂದಿದ್ದಾರೆ.

ಬಿಬಿಎಂಪಿ ಸಹಾಯಕ ಆಯುಕ್ತರಾದ ಉಮೇಶ್ ಮಾಹಿತಿ

ಬಿಬಿಎಂಪಿ ಸಹಾಯಕ ಆಯುಕ್ತರಾದ ಉಮೇಶ್ ಮಾಹಿತಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ನಮ್ಮ ಯಾವುದೇ ಮಕ್ಕಳಿಗೂ ಕೋವಿಡ್ ಪಾಸಿಟಿವ್ ಬಂದಿಲ್ಲ. ಮಕ್ಕಳಿಗೆ ವ್ಯಾಕ್ಸಿನ್ ಮಾಡುವ ಕೆಲಸವನ್ನು ಪೂರ್ಣಗೊಳಿಸಿದ್ದೇವೆ. ಮಕ್ಕಳು ಆರೋಗ್ಯ ಸ್ಥಿರವಾಗಿದ್ದು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡವ ಕಡೆಗೆ ಬಿಬಿಎಂಪಿ ತನ್ನ ಗಮನವನ್ನು ಕೇಂದ್ರೀಕರಿಸಿದೆ ಎಂದು ಬಿಬಿಎಂಪಿ ಸಹಾಯಕ ಆಯುಕ್ತರಾದ ಉಮೇಶ್ ಸ್ಪಷ್ಟಪಡಿಸಿದ್ದಾರೆ.

ಮಾರ್ಗಸೂಚಿಯಂತೆ ನಿಯಮ ಪಾಲನೆ ಅಗತ್ಯ

ಮಾರ್ಗಸೂಚಿಯಂತೆ ನಿಯಮ ಪಾಲನೆ ಅಗತ್ಯ

ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಂತೆ ಶಾಪಿಂಗ್ ಮಾಲ್, ಮಾರುಕಟ್ಟೆ, ರೆಸ್ಟೋರೆಂಟ್, ಪಬ್‌ಗಳು, ಶಿಕ್ಷಣ ಸಂಸ್ಥೆಗಳು, ಹಾಸ್ಟಲ್‌ಗಳು, ಕಚೇರಿ ಕಾರ್ಖಾನೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು ಸಾರ್ವಜನಿಕರು ಸಹಕಾರವನ್ನು ನೀಡಬೇಕೆಂದು ಸರ್ಕಾರ ಕೋರಿದೆ. ಸ್ವಂತ ವಾಹನ ಮತ್ತು ಸಾರ್ವಜನಿಕ ಸಾರಿಗೆ ಸಂಸ್ಥೆಗಳಾದ ಬಸ್‌ ಮತ್ತು ರೈಲುಗಳಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು. ILI and SARI ಲಕ್ಷಣಗಳನ್ನು ಹೊಂದಿರುವ, ಹೈರಿಸ್ಕ್ ಗುಂಪಿನವರು ಮತ್ತು ಇತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಆಧ್ಯತೆ ಮೇರೆಗೆ ಪರೀಕ್ಷೆಗೆ ಒಳಪಡುವುದು ಮತ್ತು ಫಲಿತಾಂಶ ಲಭ್ಯವಾಗುವವರೆಗೂ ಮನೆಯಲ್ಲಿಯೇ ಪ್ರತ್ಯೇಕ ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+