ಮದುವೆ ಸಂಪ್ರದಾಯ ಭಿನ್ನಾಭಿಪ್ರಾಯ: ಟೆಕ್ಕಿ ಆತ್ಮಹತ್ಯೆ

ಬಿಹಾರ ಮೂಲದ ನಿಮಿಷಾ (28) ಆತ್ಮಹತ್ಯೆ ಮಾಡಿಕೊಂಡ ಸಾಫ್ಟ್‌ವೇರ್ ಉದ್ಯೋಗಿ. ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದು ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ವರ್ತೂರು ಸಮೀಪದ ಕುಂದಲಹಳ್ಳಿಯಲ್ಲಿ ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ ನೆಲೆಸಿದ್ದ ಅವರು ತಮ್ಮ ಕೋಣೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಮಿಷಾ ಅವರು ಮಾರತಹಳ್ಳಿ ಸಾಫ್ಟ್‌ವೇರ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಆಂಧ್ರಪ್ರದೇಶ ಮೂಲದ ದುರ್ಗಾಪ್ರಸಾದ್‌ರನ್ನು ಪ್ರೀತಿಸುತ್ತಿದ್ದರು. ದುರ್ಗಾಪ್ರಸಾದ್ ಮತ್ತು ನಿಮಿಷಾಳ ವಿವಾಹಕ್ಕೆ ಎರಡು ಕುಟುಂಬಗಳು ಒಪ್ಪಿಗೆ ಸೂಚಿಸಿದ್ದರೂ ಮದುವೆ ಸಂಪ್ರಾದಯದ ಬಗ್ಗೆ ಎರಡು ಕುಟುಂಬಗಳ ಮಧ್ಯೆ ಭಿನ್ನಾಭಿಪ್ರಾಯವಿತ್ತು.[ಪತ್ನಿ ಊಟಕ್ಕೆ ಬರಲಿಲ್ವೆಂದು ಪ್ರೊಫೆಸರ್ ಆತ್ಮಹತ್ಯೆ]
ಬುಧವಾರ ರಾತ್ರಿ 9 ಗಂಟೆಗೆ ತನ್ನ ಚಿಕ್ಕಪ್ಪನಿಗೆ ಕರೆ ಮಾಡಿ ಇದೇ ವಿಚಾರವಾಗಿ ನಿಮಿಷ ಮಾತನಾಡಿದ್ದರು. 15 ನಿಮಿಷಗಳ ನಂತರ ಪುನಃ ಆಕೆಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದೆ.[ತಮಿಳು ನಟ ಬಾಲ ಮುರಳಿ ಮೋಹನ್ ಆತ್ಮಹತ್ಯೆ]
ಗಾಬರಿಗೊಂಡ ಚಿಕ್ಕಪ್ಪ ದುರ್ಗಾಪ್ರಸಾದ್‌ಗೆ ವಿಚಾರ ತಿಳಿಸಿದ್ದಾರೆ. ಆತ ಪಿಜಿಗೆ ತೆರಳಿದಾಗ ನಿಮಿಷಾ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ.












Click it and Unblock the Notifications