Get Updates
Get notified of breaking news, exclusive insights, and must-see stories!

ಪತ್ನಿ ಊಟಕ್ಕೆ ಬರಲಿಲ್ವೆಂದು ಪ್ರೊಫೆಸರ್ ಆತ್ಮಹತ್ಯೆ

professor-sunil-doddannaiah-commits-suicide-over-dinner-issue-with-wife
ಬೆಂಗಳೂರು, ಜೂ. 21: ಕೈಹಿಡಿದ ಪತ್ನಿ ಸಕಾಲಕ್ಕೆ ಊಟಕ್ಕೆ ಬರಲಿಲ್ಲವೆಂದು ಮುನಿಸಿಕೊಂಡು ವ್ಯಕ್ತಿಯೊಬ್ಬರು ಗುರುವಾರ ರಾತ್ರಿ ತಮ್ಮ ರೂಮಿಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದಿರಾನಗರದ ಲಾಲಬಹಾದೂರ್ ಶಾಸ್ತ್ರಿ ನಗರದಲ್ಲಿ ಈ ಪ್ರಕರಣ ನಡೆದಿದೆ. ಮೃತ ವ್ಯಕ್ತಿ 32 ವರ್ಷದ ಪ್ರೊಫೆಸರ್ ಸುನಿಲ್ ದೊಡ್ಡಣ್ಣಯ್ಯ ಎಂದು ತಿಳಿದುಬಂದಿದೆ.

ಇವರು ಕೆಆರ್ ಪುರಂ ನಲ್ಲಿರುವ ಈಸ್ಟ್ ವೆಸ್ಟ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಪ್ರೊಫೆಸರ್ ಸುನಿಲ್ ದೊಡ್ಡಣ್ಣಯ್ಯ ಅವರು ತಮ್ಮತಂದೆ-ತಾಯಿ ಮತ್ತು ಇಬ್ಬರು ಮಕ್ಕಳೊಂದಿಗೆ ಕೂಡುಕುಟುಂಬದಲ್ಲಿದ್ದರು. (ಮಾಜಿ ಸಚಿವ ರವೀಂದ್ರನಾಥ್‌ ಮೊಮ್ಮಗ ಆತ್ಮಹತ್ಯೆ )

ಗುರುವಾರ ರಾತ್ರಿ ಸುನಿಲ್ ತಮ್ಮ ಪತ್ನಿಯನ್ನು ಊಟಕ್ಕೆ ಕರೆದಿದ್ದಾರೆ. ಆಕೆಗೆ ಅದೇನು ಮನೆಗೆಲಸವಿತ್ತೋ, ತಡವಾಗಿ 10 ನಿಮಿಷದ ನಂತರ ಊಟದ ಟೇಬಲ್ ಮುಂದೆ ಪ್ರತ್ಯಕ್ಷರಾಗಿದ್ದಾರೆ. ಹೆಂಡತಿ ಎದುರಿಗೆ ಕಾಣುತ್ತಿದ್ದಂತೆ ದೂರ್ವಾಸ ಮುನಿಯಾದ ಪ್ರೊಫೆಸರ್, ದಡಬಡಾ ಅಂತ ತಮ್ಮ ಕೋಣೆಗೆ ತೆರಳಿ, ರೂಮಿನ ಬಾಗಿಲು ಹಾಕಿಕೊಂಡಿದ್ದಾರೆ ಎಂದು ಪ್ರೊಫೆಸರ್ ಸುನಿಲ್ ಅವರ ತಂದೆ ದೊಡ್ಡಣ್ಣಯ್ಯ ಅವರ ಹೇಳಿಕೆಯನ್ನು ಆಧರಿಸಿ ಪೊಲೀಸರು ತಿಳಿಸಿದ್ದಾರೆ.

ತಂದೆ ದೊಡ್ಡಣ್ಣಯ್ಯ ಅವರ ಪ್ರಕಾರ ಸುನಿಲ್ ತುಂಬಾ ಮೂಡಿಯಾಗಿದ್ದ. ಕ್ಷಣ ಪಿತ್ತ ಕ್ಷಣ ಚಿತ್ತ ಆತನದಾಗಿತ್ತು. ಕುಟುಂಬದಲ್ಲಿ ಯಾರ ಜತೆಗಾದರೂ ಕೋಪ ಮಾಡಿಕೊಂಡಿರೆ ಸೀದಾ ರೂಮಿಗೆ ಹೋಗಿ ಬಾಗಿಲುಹಾಕಿಕೊಂಡುಬಿಡುತ್ತಿದ್ದ. ಈಗಲೂ ಹಾಗೆಯೇ ಸಮಧಾನವಾದ ಮೇಲೆ ಬಾಗಿಲು ತೆಗೆದು ಬರುತ್ತಾನೆ ಅಂದುಕೊಂಡಿವಿ. ಆದರೆ ಬೆಳಗಾದರೂ ಆತನ ರೂಮಿನ ಬಾಗಿಲು ತೆರಯಲೇ ಇಲ್ಲ.

ಆತಂಕಗೊಂಡು ಬಾಗಿಲುಬಡಿದೆವು. ಅತ್ತ ಕಡೆಯಿಂದ ಯಾವುದೇ ಉತ್ತರ ಬಾರದೇ ಹೋಯ್ತು. ಅನುಮಾನ ಹೆಚ್ಚಾಗಿ ನಾವೇ ಬಾಗಿಲು ಮುರಿದು ಒಳಹೊಕ್ಕಿ ನೋಡಿದಾಗ ಸೀಲಿಂಗ್ ಫ್ಯಾನಿಗೆ ಮಗ ನೇತಾಡುತ್ತಿದ್ದ. ಆ ವೇಳೆಗೆ ಆತನ ಪ್ರಾಣ ಪಕ್ಷಿಯೂ ಹಾರಿಹೋಗಿತ್ತು ಎಂದು ತಮ್ಮ ಮಗನ ಬಗ್ಗೆ ದೊಡ್ಡಣ್ಣಯ್ಯ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+