ಅಂಬೇಡ್ಕರ್ ಜಯಂತ್ಯುತ್ಸವ: ಸಾಮಾಜಿಕ ನ್ಯಾಯ ದಿನ
ಬೆಂಗಳೂರು, ಏಪ್ರಿಲ್ 13: ಕರ್ನಾಟಕ ರಾಜ್ಯ ದಲಿತ ಸಂಘಟನೆಗಳ ಒಕ್ಕೂಟ ಡಾ.ಬಿ.ಆರ್.ಅಂಬೇಡ್ಕರ್‌ರವರ 127ನೇ ಜಯಂತ್ಯೋತ್ಸವದ ಅಂಗವಾಗಿ ಸಾಮಾಜಿಕ ನ್ಯಾಯ ದಿನಾಚರಣೆಯನ್ನು ಟೌನ್‌ಹಾಲ್ ನಲ್ಲಿ ಏ.14ರಂದು ಆಯೋಜಿಸಿದೆ.
ಎಸ್.ಸಿ/ಎಸ್.ಟಿ (ದೌರ್ಜನ್ಯ ತಡೆ) ಕಾಯಿದೆ ದುರ್ಬಲಗೊಳಿಸಿರುವ ಮತ್ತು ಬಡ್ತಿ-ಮೀಸಲಾತಿ ರದ್ಧತಿಯ ಸುಪ್ರೀಂ ಕೋರ್ಟಿನ ಈ ಎರಡು ತೀರ್ಪುಗಳನ್ನು ಮರುಪರಿಶೀಲಿಸಿ, ಸಂವಿಧಾನದ 9ನೇ ಶೆಡ್ಯೂಲಿನಲ್ಲಿ ಸೇರ್ಪಡಿಸಲು ಕೇಂದ್ರದ ಬಿಜೆಪಿ ಸರಕಾರಕ್ಕೆ ಆಗ್ರಹಿಸಲಾಗುತ್ತದೆ.
ನ್ಯಾಯಪೀಠವು 2017ರಲ್ಲಿ ವರದಕ್ಷಿಣೆ ತಡೆ ಕಾನೂನಿಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆ 498 ಎ ಪ್ರಕರಣದಲ್ಲಿ ವಿಚಾರಣೆಯಿಲ್ಲದೆ ಆರೋಪಿಗಳನ್ನು ವಶಕ್ಕೆ ಪಡೆಯಬಾರದು ಎನ್ನುವ ತೀರ್ಪು ನೀಡಿತ್ತು.

ದೌರ್ಜನ್ಯ ತಡೆ ಕಾಯ್ದೆ ಮಾರ್ಗಸೂಚಿ ಪ್ರಕಾರ ಆರೋಪಿಯ ಮೇಲೆ ಎಫ್ ಐಆರ್ ದಾಖಲಿಸುವ ಮೊದಲು ಸರ್ಕಾರಿ ನೌಕರರಾದರೆ ಸಂಬಂಧಿಸಿದ ಇಲಕೆಯ ಮುಖ್ಯಸ್ಥರಿಂದ ಪೂರ್ವಾನುಮತಿ ಪಡೆಯಬೇಕು ಮತ್ತು ಸಾರ್ವಜನಿಕರಾದರೆ ಸಂಬಂಧಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಅನುಮುತಿ ಪಡೆಯಬೇಕು. ಈ ವಿಚಾರ ಕುರಿತು ಚರ್ಚಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾ ಎಚ್.ಎನ್,ನಾಗಮೋಹನ್ ದಾಸ್, ಡಾ.ಕೆ.ಮರುಳಸಿದ್ದಪ್ಪ, ಜಿ.ಕೆ.ಗೋವಿಂದ ರಾವ್, ಇಂದಿರಮ್ಮ, ದೇವನೂರು ಮಹದೇವ, ಎಲ್.ಹನುಮಂತಯ್ಯ, ಸಿ.ಬಸವಲಿಂಗಯ್ಯ, ಪ್ರಕಾಶ್ ರೈ, ಎನ್.ವೆಂಕಟೇಶ, ಎಂ.ಜಯಣ್ಣ, ಶ್ರೀಧರಕಲಿವೀರ, ಇಂದೂವರ ಹೊನ್ನಾವರ, ಮಂಗಳೂರು ವಿಜಯ, ಪುರುಷೋತ್ತಮ ದಾಸ್, ಸಂಘನಕಾರರಾದ ಎನ್.ಮುನಿಸ್ವಾಮಿ, ಸಿ.ಎಂ.ಮನಿಯಪ್ಪ ಭಾಗವಹಿಸಲಿದ್ದಾರೆ.











Click it and Unblock the Notifications