ಮದರಸ ಶಿಕ್ಷಕನಿಂದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ
ಬೆಂಗಳೂರು, ಜೂನ್.2: ಮದರಸದಲ್ಲಿ ಅರೇಬಿಕ್ ಕಲಿಸುತ್ತಿರುವ ಶಿಕ್ಷಕನೇ ಆರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗಿದ್ದಾನೆ.
ಚಾಮುಂಡಿನಗರದ ಮದರಸವೊಂದರಲ್ಲಿ ಶುಕ್ರವಾರ ಅರೇಬಿಕ್ ಕಲಿಯಲು ತೆರಳಿದ್ದ ವೇಳೆ ಶಿಕ್ಷಕ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಆರೋಪಿಸಿ ಬಾಲಕಿಯ ತಂದೆ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿ ಶಿಕ್ಷಕ ಇಮ್ತಿಯಾಜ್ (25) ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಬಾಲಕಿಯ ಪಾಲಕರು ಮದರಸದ ಸಮೀಪದಲ್ಲೇ ಮಾಂಸ ಮಾರಾಟದ ಅಂಗಡಿಯೊಂದನ್ನು ಇಟ್ಟುಕೊಂಡಿದ್ದರು. ಎಂದಿನಂತೆ ಶುಕ್ರವಾರ ಸಂಜೆ ಬಾಲಕಿ ಅರೇಬಿಕ್ ಕಲಿಯಲು ಮದರಸಗೆ ಹೋಗಿದ್ದಾಳೆ. ಸಂಜೆ ತರಗತಿ ಮುಗಿದ ಬಳಿಕ ಉಳಿದೆಲ್ಲಾ ಮಕ್ಕಳನ್ನು ಮನೆಗೆ ಕಳುಹಿಸಿದ ಶಿಕ್ಷಕ, ಬಾಲಕಿಯನ್ನು ಮಾತ್ರ ಅಲ್ಲೇ ಉಳಿಸಿಕೊಂಡು ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.

ಬಾಲಕಿ ಮನೆಗೆ ತೆರಳಿದ ಶಾಲೆಯಲ್ಲಿ ನಡೆದ ಘಟನೆಯನ್ನು ತಾಯಿಗೆ ವಿವರಿಸಿದ್ದಾಳೆ. ತಾಯಿ ಕೂಡಲೇ ಆಸ್ಪತ್ರೆಗೆ ಕರೆದೊಯ್ದು ವೈದ್ಯರ ತಪಾಸಣೆ ಮಾಡಿಸಿ ಮದರಸಕ್ಕೆ ತೆರಳಿದಾಗ ಇಮ್ತಿಯಾಜ್ ಆಗಲೇ ಅಲ್ಲಿಂದ ನಾಪತ್ತೆಯಾಗಿದ್ದಾನೆ.[ರೇಪ್ ಮಾಡಿ ಯುವತಿಯರನ್ನು ಮರಕ್ಕೆ ನೇಣುಹಾಕಿದರು]
ಬಿಹಾರ ಮೂಲದ ಇಮ್ತಿಯಾಜ್, ಕಳೆದ ಎರಡು ವರ್ಷದಿಂದ ಮದರಸದಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ಆರ್.ಟಿ.ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications