ಬೆಂಗಳೂರಿನಲ್ಲಿ ಹೆಚ್ಚಾದ‌ ಕೊರೋನಾ ಆತಂಕ, 6 ಏರಿಯಾಕ್ಕೆ ಎಚ್ಚರ!

ಬೆಂಗಳೂರು, ಮಾರ್ಚ್ 17: ಕೊರೊನಾ ಸಾಂಕ್ರಾಮಿಕದ ಮತ್ತೊಂದು ಅಲೆಯ ಎಚ್ಚರದ ನಡುವೆ ಬೆಂಗಳೂರಿನ ಹಲವು ವಾರ್ಡ್‌ಗಳಲ್ಲಿ ಕೊರೊನಾ ಸಂಖ್ಯೆ ಅಧಿಕವಾಗುತ್ತಿದೆ. 6 ಪ್ರದೇಶಗಳಲ್ಲಿ ಸಕ್ರಿಯ ಪ್ರಕರಣಗಳು ಹೆಚ್ಚಾಗಿದ್ದು, ಭಾರಿ ಎಚ್ಚರಿಕೆಯಿಂದ ಇರಲು ಬಿಬಿಎಂಪಿ ಸೂಚಿಸಿದೆ.

ಮಂಗಳವಾರದಂದು ರಾಜ್ಯದಲ್ಲಿ ಸುಮಾರು 1,135 ಪ್ರಕರಣಗಳು ದಾಖಲಾಗಿದ್ದರೆ, ಬೆಂಗಳೂರಲ್ಲೇ 710 ಕೇಸುಗಳು ಕಂಡು ಬಂದಿವೆ. ಇದರಿಂದ ಬೆಂಗಳೂರಲ್ಲಿ ಸಕ್ರಿಯ ಕೇಸ್ ಸಂಖ್ಯೆ 6.832ಕ್ಕೇರಿದೆ.

ಕಳೆದ ಹತ್ತು ದಿನದಲ್ಲಿ ಯಾವ್ಯಾವ ಏರಿಯಾದಲ್ಲಿ‌ ಸೋಂಕು ಹೆಚ್ಚಳವಾಗಿದೆ ಎಂಬುದರ ಬಗ್ಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ನೇತೃತ್ವದಲ್ಲಿ ವರ್ಚ್ಯುಯಲ್ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ.

Bengaluru six active containment zones as on March 17

ಬೆಂಗಳೂರಿನ ಹತ್ತು ವಾರ್ಡ್ ಗಳಲ್ಲಿ ಕಳೆದ ಹತ್ತು ದಿನದಿಂದ ಕೊರೋನಾ‌ ಸೋಂಕು ಏರಿಕೆಯಾಗುತ್ತಿದೆ. ಈ ಪ್ರದೇಶದಲ್ಲಿರುವವರು ಎಚ್ಚರದಿಂದಿರಬೇಕು, ಕೊರೊನಾ ಮಾರ್ಗಸೂಚಿ ತಪ್ಪದೇ ಪಾಲಿಸಬೇಕು ಎಂದು ಬಿಬಿಎಂಪಿ ಕೋರಿದೆ.

ಪಾಸಿಟಿವಿಟಿ ರೇಟ್ ಹೆಚ್ಚಳವಾಗುವ ಮೂಲಕ‌ ವಾರ್ಡ್ ಜನರಲ್ಲಿ ಕೊರೋನಾ ಆತಂಕ ಹುಟ್ಟಿಸಿದೆ.

ಯಾವ್ಯಾವ ವಾರ್ಡ್ ಆತಂಕದಲ್ಲಿದೆ?

ಕೊರೊನಾ ಆರ್ಭಟಿಸುತ್ತಿರುವ ವಾರ್ಡ್‌ಗಳ ಪೈಕಿ ಬೆಳ್ಳಂದೂರು ಟಾಪ್ 1 ಸ್ಥಾನದಲ್ಲಿದೆ .

ಬೆಂಗಳೂರಿನ‌ ಡೇಂಜರ್ ವಾರ್ಡ್.!
ವಲಯ ವಾರ್ಡ್ ಕೇಸ್
ಮಹದೇವಪುರ ಬೆಳ್ಳಂದೂರು 131 ಕೇಸ್
ಮಹದೇವಪುರ ಹಗದೂರು 71 ಕೇಸ್
ಬೆಂಗಳೂರು ದಕ್ಷಿಣ ಬಿಟಿಎಂ ಲೇಔಟ್ 70 ಕೇಸ್
ಬೆಂಗಳೂರು ದಕ್ಷಿಣ ಹೊಸಕೆರೆ ಹಳ್ಳಿ 50 ಕೇಸ್
ಬೊಮ್ಮನಹಳ್ಳಿ ಕೋಣನಕುಂಟೆ 57 ಕೇಸ್
ಬೊಮ್ಮನಹಳ್ಳಿ ಜರಗನಹಳ್ಳಿ 49 ಕೇಸ್
ಪೂರ್ವ ವಲಯ ಶಾಂತಲನಗರ 68 ಕೇಸ್
ಪೂರ್ವ ವಲಯ ಬಾಣಸವಾಡಿ 55 ಕೇಸ್
ಪಶ್ಚಿಮ ವಲಯ ಗಾಂಧಿನಗರ 56 ಕೇಸ್
ಆರ್.ಆರ್ ನಗರ ಜ್ಞಾನಭಾರತಿ 53 ಕೇಸ್

ಮುಖ್ಯಮಂತ್ರಿಗಳು ನಾಗರಿಕರಿಗೆ ಸ್ಪಷ್ಟವಾದ ಸಂದೇಶ ಕೊಟ್ಟಿದ್ದಾರೆ. ರಾಜ್ಯದಲ್ಲಿ ಕೋವಿಡ್ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಕೇರಳದಲ್ಲಿ ಕೂಡ ಏರಿಕೆಯಾಗುತ್ತಿದೆ ಅಂತ ಎಚ್ಚರಿಕೆ ನೀಡಿದರು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಇಲ್ಲದಿದ್ದರೆ ಕಠಿಣ ಕ್ರಮಕ್ಕೆ ಮುಂದಾಗಬೇಕಾಗುತ್ತೆ ಅಂತ ಸಿಎಂ ಹೇಳಿದ್ದಾರೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+