ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಆರ್‌ ಮಾರ್ಕೆಟ್ ಮೇಲ್ಸೇತುವೆ ಇಂದು ರಾತ್ರಿಯಿಂದ ಬಂದ್

|
Google Oneindia Kannada News

Recommended Video

ಕೆಆರ್ ಮಾರ್ಕೆಟ್ ಹೋಗೋದಿದ್ದರೆ ಈ ಸುದ್ದಿ ಕೇಳಿ | Oneindia Kannada

ಬೆಂಗಳೂರು, ಡಿಸೆಂಬರ್ 28: ಸಿರ್ಸಿ ಸರ್ಕಲ್ ಮೇಲ್ಸೇತುವೆಯಲ್ಲಿ ಬಿಬಿಎಂಪಿ ಮರು ಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಂಡಿದ್ದು, ಶುಕ್ರವಾರ(ಡಿ.28)ರ ಸಂಜೆಯಿಂದ ಟೌನ್‌ಹಾಲ್‌ನಿಂದ ಮೈಸೂರು ರಸ್ತೆಗೆ ಸಂಪರ್ಕಿಸುವ ಮೇಲ್ಸೇತುವೆ ಮಾರ್ಗ ಬಂದ್ ಆಗಲಿದೆ.

ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ ಮೇಲೆ ಭಾರಿ ವಾಹನಗಳ ಸಂಚಾರ ನಿಷೇಧ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ ಮೇಲೆ ಭಾರಿ ವಾಹನಗಳ ಸಂಚಾರ ನಿಷೇಧ

ರಸ್ತೆಗುಂಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಟೆಕ್ಕಿ ಟಾರ್ ಮೊರೆ ಹೋಗಿರುವ ಪಾಲಿಕೆ, ಶುಕ್ರವಾರದಿಂದ ಮರುಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಂಡಿದೆ. ಹೀಗಾಗಿ ಮೇಲೆಸೇತುವೆ ಒಂದು ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಿದ್ದು, ವಾಹನ ಸವಾರರು ಪರ್ಯಾಯ ರಸ್ತೆಗಳನ್ನು ಬಳಸುವ ಮೂಲಕ ಸಹಕಾರ ನೀಡಬೇಕೆಂದು ಬಿಬಿಎಂಪಿ ಆಯುಕ್ತರು ಮನವಿ ಮಾಡಿದ್ದಾರೆ.

ಸಂಚಾರ ವ್ಯವಸ್ಥೆ

ಸಂಚಾರ ವ್ಯವಸ್ಥೆ

ಮೇಲ್ಸೇತುವೆಯ ಒಂದು ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡುವುದರಿಂದ ಬೆಳಗ್ಗೆ ಹಾಗೂ ಸಂಜೆ ವೇಳೆ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಬೆಳಗ್ಗೆ 6ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳಿಗೆ ಮೇಲ್ಸೇತುವೆಯ ಮಾರ್ಗದಲ್ಲಿ ಅವಕಾಶ ಕಲ್ಪಿಸಲಾಗುತ್ತದೆ.

ಸಂಜೆ ವೇಳೆ ಅದೇ ರಸ್ತೆಯಲ್ಲಿ ವಿರುದ್ಧ ದಿಕ್ಕಿನ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಅಂದರೆ, ಮೈಸೂರು ರಸ್ತೆಯಿಂದ ನಗರಕ್ಕೆ ಬರುವ ರಸ್ತೆಯಲ್ಲಿ ಟೌನ್‌ಹಾಲ್ ಕಡೆಯಿಂದ ಮೈಸೂರು ರಸ್ತೆಗೆ ಹೋಗುವ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

ಪರ್ಯಾಯ ಮಾರ್ಗಗಳು

ಪರ್ಯಾಯ ಮಾರ್ಗಗಳು

ಟೌನ್‌ಹಾಲ್‌ನಿಂದ ಮೈಸೂರು ರಸ್ತೆಗೆ ಹೋಗಲು ಮೇಲ್ಸೇತುವೆ ಬದಲಿಗೆ ಎಡ ಭಾಗದ ರಸ್ತೆಯಲ್ಇ ಸಾಗಿ ಕೆಆರ್ ಮಾರ್ಕೆಟ್ ಸಿಗ್ನಲ್ ನಲ್ಲಿ ಎಡ ತಿರುವು ಪಡೆಯಬೇಕು. ಅಲ್ಲಿಂದ ಕಲಾಸಿಪಾಳ್ಯ ಮುಖ್ಯರಸ್ತೆಯಲ್ಇ ಒಂದು ಕಿ.ಮೀ ಸಾಗಿ ನಂತರ ಬಲ ತಿರುವು ಪಡೆದು ಟಿಪ್ಪು ಸುಲ್ತಾನ್ ಅರಮನೆ ರಸ್ತೆ ಮೂಲಕವಾಗಿ ಸಾಗಿ ಮೈಸೂರು ರಸ್ತೆ ತಲುಪಬಹುದು.

ಮಾರ್ಗ ಬದಲಾವಣೆ ಬಳಿಕ ಕೆಆರ್ ಮಾರ್ಕೆಟ್ ಮೇಲ್ಸೇತುವೆ ದುರಸ್ತಿಮಾರ್ಗ ಬದಲಾವಣೆ ಬಳಿಕ ಕೆಆರ್ ಮಾರ್ಕೆಟ್ ಮೇಲ್ಸೇತುವೆ ದುರಸ್ತಿ

ಪರ್ಯಾಯ ಮಾರ್ಗ 2

ಪರ್ಯಾಯ ಮಾರ್ಗ 2

ಟೌನ್‌ಹಾಲ್‌ನಿಂದ ಮೈಸೂರು ರಸ್ತೆಯ ಮೇಲ್ಸೇತುವೆ ಎಡ ಭಾಗದ ರಸ್ತೆಯಲ್ಲಿ ಸಾಗಿ ಕೆ.ಆರ್. ಮಾರುಕಟ್ಟೆ ಸಿಗ್ನಲ್‌ನಿಂದ ಮೇಲ್ಸೇತುವೆ ಕೆಳಭಾಗದ ರಸ್ತೆಯಲ್ಲಿ ಚಲಿಸಿ ಮೈಸೂರು ರಸ್ತೆ ತಲುಪಬಹುದು.

ವಿಪರೀತ ದಟ್ಟಣೆ ಸಾಧ್ಯತೆ

ವಿಪರೀತ ದಟ್ಟಣೆ ಸಾಧ್ಯತೆ

ಮೇಲ್ಸೇತುವೆ ಮರುಡಾಂಬರೀಕರಣ ಕಾಮಗಾರಿ ನಡೆಸಲು ಕನಿಷ್ಠ ಎಂದರೂ ಎರಡು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಇದರಿಂದಾಗಿ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಟೌನ್‌ಹಾಲ್‌, ಜೆಸಿ ರಸ್ತೆ, ಕೆಆರ್ ಮಾರ್ಕೆಟ್ ಬಳಿ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ.

ಹೆಬ್ಬಾಳದ ಮೂಲಕವೇ ಕೆಂಪೇಗೌಡ ಏರ್‌ಪೋರ್ಟ್‌ಗೆ ನಮ್ಮ ಮೆಟ್ರೋ ಹೆಬ್ಬಾಳದ ಮೂಲಕವೇ ಕೆಂಪೇಗೌಡ ಏರ್‌ಪೋರ್ಟ್‌ಗೆ ನಮ್ಮ ಮೆಟ್ರೋ

English summary
Those using, or planning to use, Mysuru Road will have to put up with some inconvenience for over a month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X